ಬೆಂಗಳೂರು

ಗೊಂದಲಗಳು ಮಾಧ್ಯಮಗಳಿಂದ ಸೃಷ್ಟಿಯಾಗುತ್ತೆ.- ಸಚಿವ ಮಹಾದೇವಪ್ಪ

ಬೆಂಗಳೂರು:- ಸಿಎಂ ಬದಲಾವಣೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಎಚ್.ಸಿ ಮಹದೇವಪ್ಪ, ಶಾಸಕಾಂಗ ಪಕ್ಷದ ಸಭೆ ಕರೆದು ಅಭಿಪ್ರಾಯ ಪಡೆದು ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಹೈಕಮಾಂಡ್ ಏನ್ ತೀರ್ಮಾನ ಮಾಡಿದೆ ಅದನ್ನೇ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರ ಹೇಳಿಕೆಯನ್ನು ನಾನು ಸ್ವಾಗತ ಮಾಡ್ತೀನಿ ಎಂದಿದ್ದಾರೆ.

ನಾಯಕತ್ವ ಬದಲಾವಣೆ ಬಗ್ಗೆ ಸಿಎಂ, ಡಿಸಿಎಂ ಎಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರುಗಳು ಹೇಳಿದ್ಮೇಲೆ ಇನ್ನೇನಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ಅವರು ಸಿಎಂ ಆಗಿಯೇ ಮುಂದುವರಿತಾರೆ ಬೇರೆ ಇನ್ನೇನಿದೆ ಎಂದು ತಿರುಗೇಟು ನೀಡಿದ್ದಾರೆ.

ಈ ಎಲ್ಲಾ ಗೊಂದಲಗಳು ಮಾಧ್ಯಮಗಳಿಂದಲೂ ಸೃಷ್ಟಿಯಾಗುತ್ತೆ, ಕೆಲವು ಶಾಸಕರಿಂದಲೂ ಸೃಷ್ಟಿಯಾಗುತ್ತೆ. ಕಾಂಗ್ರೆಸ್ ಪಕ್ಷ ಐದು ವರ್ಷ ಆಡಳಿತ ಮಾಡಬೇಕು ಅಂತ ಜನ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ. ಜನರ ಬಹುಮತವನ್ನ ಬದಲಾವಣೆ ಮಾಡ್ಬೇಕು ಎಂದು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಬಿಜೆಪಿಯವರೇ ಕಾಂಗ್ರೆಸ್ ತರ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರ ಯಾವುದೇ ಆಸೆ ಈಡೇರಲ್ಲ, ಕಾಂಗ್ರೆಸ್ ಸರ್ಕಾರ ಐದು ವರ್ಷ ಇರುತ್ತದೆ ಎಂದ ಅವರು, ಸುರ್ಜೇವಾಲ ಮುಂದೆ ಶಾಸಕರು ಸಚಿವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ವಿಚಾರವಾಗಿ, ಇರಬಹುದು ಶಾಸಕರಿಗೆ ಅವರ ಕ್ಷೇತ್ರದಲ್ಲಿ ಕೆಲಸ ಆಗಬೇಕು. ಅವರು ದೂರದಿಂದ ಬಂದಿರುತ್ತಾರೆ. ಕೆಲವು ಸಚಿವರು ಸಿಗಲ್ಲ ಎಲ್ಲೋ ಟೂರ್ ಹೋಗಿರುತ್ತಾರೆ. ಅವರು ಬಂದಂತಹ ಸಂದರ್ಭದಲ್ಲಿ ಶಾಸಕರು ಬಂದು ವಾಪಸ್ ಹೋಗ್ತಾರೆ. ಸಹಜವಾಗಿ ಬೇಸರ ಆಗುತ್ತೆ ಅಸಮಾಧಾನ ಆಗುತ್ತೆ ಎಂದು ಸಮರ್ಥಿಸಿಕೊಂಡರು.

ಸಿಎಂ ಸಿದ್ದರಾಮಯ್ಯ ದೆಹಲಿ ರಾಜಕಾರಣಕ್ಕೆ ಹೋಗ್ತಾರ ಎಂಬ ವಿಚಾರವಾಗಿ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಬಲ ಆಗೋದಿಕ್ಕೆ ಸಿದ್ದರಾಮಯ್ಯನವರ ನಾಯಕತ್ವ ಅವರ ವರ್ಚಸ್ಸನ್ನ ಬಳಸಿಕೊಳ್ಳಬೇಕೊಳ್ಳಲು ಸಹಕಾರ ಕೊಡ್ತಾರೆ. ಆದರೆ, ಸಿದ್ದರಾಮಯ್ಯನವರು ರಾಜ್ಯ ರಾಜಕಾರಣದಲ್ಲಿ ಉಳಿದುಕೊಳ್ಳುತ್ತಾರೆ ಎಂದರು.