ಬೆಂಗಳೂರು

ಗ್ಯಾಗ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋದ ಯೂಟ್ಯೂಬರ್ಸ್

ಬೆಂಗಳೂರು:- ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿರುವ ವಿರೇಂದ್ರ ಹೆಗ್ಗಡೆ ಮತ್ತು ಅವರ ಸೋದರ ಡಿ.ಹರ್ಷೇಂದ್ರ ಕುಮಾರ್‌ ಬಗ್ಗೆ ಯಾವುದೇ ಸುದ್ದಿ ಪ್ರಕಟಿಸಿದಂತೆ ಬೆಂಗಳೂರು ಸಿವಿಲ್‌ ನ್ಯಾಯಾಲಯ ನೀಡಿರುವ “ಗ್ಯಾಗ್‌ ಆದೇಶ” ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗಿದೆ.

ಬೆಂಗಳೂರು ನ್ಯಾಯಾಲಯದ ಆದೇಶ ಹಿಂದೆಂದೂ ನೀಡದಂತಹ ಆತಂಕಕಾರಿ ಆದೇಶವಾಗಿದೆ, ಇದು ವಾಕ್‌ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಎರಡಕ್ಕೂ ಧಕ್ಕೆ ತರುವ ವಿಷಯವಾಗಿದೆ. ನ್ಯಾಯ ಪ್ರಕ್ರಿಯೆಯ ಮೂಲಭೂತ ತತ್ವಗಳ ಮೇಲೆ ನಡೆಸಿರುವ ಹಲ್ಲೆಯಾಗಿದೆ ಎಂದು ಥರ್ಡ್‌ ಐ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ. ಮಾಧ್ಯಮಗಳಲ್ಲಿ ಸತ್ಯವನ್ನು ವರದಿ ಮಾಡುವುದು ಸಮಾಜ ಸೇವೆಯ ಕೆಲಸ ಎಂದು ಬಣ್ಣಿಸಿರುವ ಥರ್ಡ್‌ ಐ, ಈ ಪ್ರಕರಣದಲ್ಲಿ ಸರ್ಕಾರ ಎಸ್‌ಐಟಿ ರಚಿಸಲು ಮಾಧ್ಯಮಗಳ ವರದಿಯೇ ಕಾರಣ ಎಂದು ಹೇಳಿದೆ.

ರಾಜ್ಯದ ಪ್ರಮುಖ ಹಿಂದೂ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳದಲ್ಲಿ ನಡೆದಿದೆಯೆನ್ನಲಾದ ಸಾಮೂಹಿಕ ಕೊಲೆಗಳು ಹಾಗೂ ಯುವತಿಯರ ಕಣ್ಮರೆ ಪ್ರಕರಣಗಳ ತನಿಖೆಗೆ ಕರ್ನಾಟಕ ಸರ್ಕಾರ ಎಸ್‌ಐಟಿ ರಚಿಸಿದ ಒಂದು ದಿನದ ಬಳಿಕ ಈ ಘಟನೆ ನಡೆದಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಮತ್ತು ಅವರ ಸೋದರ ಹರ್ಷೇಂದ್ರ ಕುಮಾರ್‌ ಅವರು ತಮ್ಮ ವಿರುದ್ದ ಯಾವುದೇ ತೇಜೋವಧೆಯ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ತಾನು ಪ್ರಭಾವಿಗಳ ಆಜ್ಞೆಯಂತೆ ಹಲವರ ಶವಗಳನ್ನು ಗುಪ್ತವಾಗಿ ಹೂತು ಹಾಕಿದ್ದೆ ಎಂದು ವ್ಯಕ್ತಿಯೊಬ್ಬ ಪೊಲೀಸ್‌ ಠಾಣೆಗೆ ಶರಣಾಗಿದ್ದ, ಈತ ಸಲ್ಲಿಸಿದ್ದ ಮೂಲ ದೂರಿನಲ್ಲಿ ತನಗೆ ಧರ್ಮಸ್ಥಳ ದೇವಾಲಯದ ಮೇಲ್ವಿಚಾರಕರು ಹಾಗೂ ಆಡಳಿತ ಮಂಡಳಿಯಿಂದ ಜೀವ ಬೆದರಿಕೆ ಇದೆ ಎಂದು ಉಲ್ಲೇಖಿಸಿದ್ದ. ಅಷ್ಟೇ ಅಲ್ಲದೇ ಸುಜಾತಾ ಎಂಬ ಮಹಿಳೆ ತಮ್ಮ ಮಗಳು ಕಾಣೆಯಾಗಿದ್ದಾಳೆಂದು ಸಲ್ಲಿಸಿದ್ದ ದೂರಿನಲ್ಲಿಯೂ ಸಹ ಧರ್ಮಸ್ಥಳದ ಆಡಳಿತ ಮಂಡಳಿಯ ಬಗ್ಗೆ ನೇರ ಆರೋಪ ಮಾಡಲಾಗಿತ್ತು. ಅಲ್ಲದೇ ತಮ್ಮ ಮಗಳ ನಾಪತ್ತೆ ಪ್ರಕರಣದ ದೂರನ್ನು ದಾಖಲಿಸಿಕೊಳ್ಳಲು ಪೊಲೀಸರೂ ಸಹ ಹಿಂದೇಟು ಹಾಕಿದ್ದರು. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಯನ್ನು ಪ್ರಶ್ನಿಸಿದಾಗ ತಮ್ಮ ಮೇಲೆ ಹಲ್ಲೆ ನಡೆಯಿತೆಂದು ಉಲ್ಲೇಖಿಸಿದ್ದರು ಎಂದು ಯೂಟ್ಯೂಬ್‌ ಚಾನಲ್‌ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.

ಧರ್ಮಸ್ಥಳದ ಧರ್ಮಧಿಕಾರಿ ವಿರೇಂದ್ರ ಹೆಗ್ಗೆಡೆ ಮತ್ತು ಅವರ ಸೋದರ ಹರ್ಷೇಂದ್ರ ಕುಮಾರ್‌ ಡಿ. ಇಬ್ಬರೂ ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ಮುಂದೆ ಅವರು ದಾಖಲಿಸುವ ಮಾನನಷ್ಟ ಮೊಕದ್ದಮೆಯನ್ನು ಹೊರರಾಜ್ಯದ ಕೋರ್ಟ್‌ ನಲ್ಲಿ ವಿಚಾರಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಲು ಕೋರಲಾಗಿದೆ.

ಗ್ಯಾಗ್ ಆರ್ಡರ್: ನ್ಯಾಯಾಲಯವು ಕೆಲವು ವ್ಯಕ್ತಿಗಳಿಗೆ (ವಕೀಲರು, ಸಾಕ್ಷಿಗಳು, ಅಥವಾ ಪ್ರಕರಣದ ಇತರ ಪಕ್ಷಗಳು) ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದನ್ನು ಅಥವಾ ಮಾಹಿತಿಯನ್ನು ಹಂಚಿಕೊಳ್ಳುವವರ ವಿರುದ್ಧ ಜಾರಿಯಾಗುವ ಕಾನೂನು ಕ್ರಮ ಇದಾಗಿದ್ದು, ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದನ್ನು ಅಥವಾ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ನಿಷೇಧಿಸುತ್ತದೆ. ಇದನ್ನು ಸಾಮಾನ್ಯವಾಗಿ ಪ್ರಕರಣದ ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಅಥವಾ ಗೌಪ್ಯತೆಯನ್ನು ಕಾಪಾಡಲು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ ಆ್ಯಪ್‌, ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌, ಯೂ-ಟ್ಯೂಬ್‌ ಹಾಗೂ ದೃಶ್ಯ ಮಾಧ್ಯಮ ಸೇರಿದಂತೆ ಮತ್ತಿತ್ತರ ಮಾಧ್ಯಮಗಳ ಮೂಲಕ ನೀಡಲಾಗುತ್ತಿರುವ ಹೇಳಿಕೆಯನ್ನು ಕಡಿವಾಣ ಹಾಕಲಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video