ಬೆಂಗಳೂರು:- ಕರ್ನಾಟಕ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯ ಜೊತೆ ಮತ್ತೊಂದು ಘೋಷಣೆಯನ್ನು ಮಾಡಿದೆ. ಸಾಮಾಜಿಕ ಜಾಲತಾಣದ ಮೂಲಕ ಯೋಜನೆಯ ಬಗ್ಗೆ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯನವರು, ಸ್ವಾತಂತ್ರ್ಯೋತ್ಸವದ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ.
ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ವಿಶೇಷ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಸಿಎಂ ಆಫ್ ಕರ್ನಾಟಕ ಎಕ್ಸ್ ಪೇಜ್, ʼರಾಜ್ಯದ ಇತಿಹಾಸದಲ್ಲೆ ಪ್ರಥಮ ಬಾರಿಗೆ ಗ್ರಾಮೀಣ ಭಾಗದ ಪತ್ರಕರ್ತರಿಗೆ “ಉಚಿತ ಬಸ್ ಪಾಸ್” ಸೌಲಭ್ಯ ಹಾಗೂ ಎಲ್ಲಾ ಪತ್ರಕರ್ತರಿಗೆ ₹ 5 ಲಕ್ಷದವರೆಗೆ ಚಿಕಿತ್ಸೆಯ ವೆಚ್ಚ ಭರಿಸುವ “ಆರೋಗ್ಯ ಸಂಜೀವಿನಿ” ಯೋಜನೆಗೆ ಚಾಲನೆ ನೀಡಲಾಗಿದೆʼ ಎಂದಿದ್ದಾರೆ.
ʼಸಮಾಜದ ಧ್ವನಿಯಂತೆ ಕೆಲಸ ಮಾಡುವ ಪತ್ರಕರ್ತರಿಗೆ ಆರ್ಥಿಕ ಭದ್ರತೆ ಒದಗಿಸಿ, ಅವರ ಧ್ವನಿಯನ್ನು ಮತ್ತಷ್ಟು ನಿರ್ಭೀತಗೊಳಿಸಿದ ಕೀರ್ತಿ ನಮ್ಮ ಸರ್ಕಾರದ್ದು. ಸ್ವಾಭಿಮಾನ, ಸ್ವಾವಲಂಬನೆ ಹಾಗೂ ಘನತೆಯ ಬದುಕು ಸ್ವಾತಂತ್ರ್ಯದ ನೈಜ ಆಶಯ. ಈ ಆಶಯದ ಈಡೇರಿಕೆಗೆ ನಾವು ಪ್ರಾಮಾಣಿಕ ಶ್ರಮಿಸುತ್ತಿದ್ದೇವೆ.ʼ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಮೂಲಕ ಕರ್ನಾಟಕದ ಪತ್ರಕರ್ತರಿಗೆ ಆರೋಗ್ಯ ಭದ್ರತೆ ಜೊತೆ ಆರ್ಥಿಕ ಭದ್ರತೆಯನ್ನೂ ಒದಗಿಸಿದೆ ಕರ್ನಾಟಕ ಸರ್ಕಾರ.
Leave feedback about this