ಬಾಗಲಕೋಟೆ

ಜಯಮೃತ್ಯುಂಜಯ ಸ್ವಾಮೀಜಿಯವರ ನಡೆ ತೀವ್ರ ಚರ್ಚೆಗೆ ಗ್ರಾಸ

ಬಾಗಲಕೋಟೆ:- ಪಂಚಮಸಾಲಿ ಪೀಠವನ್ನು ಹಿಡಿದಿರುವ ಹೊಸ ವಿವಾದ ರಾಜ್ಯ ರಾಜಕೀಯದ ಜೊತೆಗೆ ಧಾರ್ಮಿಕ ವಲಯದಲ್ಲಿಯೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜಯಮೃತ್ಯುಂಜಯ ಸ್ವಾಮೀಜಿಯವರ ನಡವಳಿಕೆ ಬಗ್ಗೆ ಅಭ್ಯಂತರ ವ್ಯಕ್ತವಾಗಿದ್ದು, ಅವರ ಉಚ್ಛಾಟನೆ ಕುರಿತು ಟ್ರಸ್ಟ್ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.

ಪಂಚಮಸಾಲಿ ಪೀಠ – ಬಸವ ತತ್ವದ ಪ್ರಚಾರಕ್ಕಾಗಿ ಸ್ಥಾಪಿತವಾದ ಮಠವಾಗಿದೆ, ಈ ಪೀಠದ ಮುಖ್ಯಸ್ಥರಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ 2008ರಲ್ಲಿ ನೇಮಕಗೊಂಡರು. ಆದರೆ, ಇತ್ತೀಚಿನ ಕೆಲವು ವರ್ಷಗಳಿಂದ ಶ್ರೀಗಳ ನಡವಳಿಕೆ ಕುರಿತು ಸಮುದಾಯದೊಳಗೆ ಅಸಮಾಧಾನ ಮೂಡಿದೆ. ಸ್ವಾಮೀಜಿಗಳು ಮಠದಿಂದ ದೂರವಿದ್ದು, ಧರ್ಮ ಪ್ರಚಾರಕ್ಕಿಂತಲೂ ರಾಜಕೀಯದತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ನೀಡಿದ ಮಾಹಿತಿ ಪ್ರಕಾರ ಈ ವರ್ಷ ಶ್ರೀಗಳು ಪೀಠಕ್ಕೆ ಕೇವಲ ಎರಡು ಬಾರಿ ಮಾತ್ರ ಭೇಟಿ ನೀಡಿದ್ದಾರೆ. ಶ್ರೀಗಳು ಧರ್ಮ ಪ್ರಚಾರ ಬಿಟ್ಟು ರಾಜಕೀಯ ಪಕ್ಷಗಳೊಂದಿಗೆ ಹೆಚ್ಚು ಬೆರೆತು ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ, ಹುಬ್ಬಳ್ಳಿಯಲ್ಲಿ ಮತ್ತು ಬೆಳಗಾವಿಯಲ್ಲಿ ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಮಠದಲ್ಲಿ ಹೆಚ್ಚು ಕಾಲ ಇಲ್ಲದಿರುವ ಕಾರಣ ಅಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆ. ಬಸವ ತತ್ವ ಬೋಧನೆಯ ಬದಲು, ಸ್ವಾಮೀಜಿಗಳು ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರದಲ್ಲಿ ತೊಡಗುತ್ತಿದ್ದಾರೆ. ಸಾಮಾಜಿಕ ಸಮಸ್ಯೆಗಳ ಸಂದರ್ಭದಲ್ಲಿ ಮೌನ ಪಾಲಿಸುತ್ತಿದ್ದಾರೆ ಅನ್ನೊದಾಗಿದೆ.

ಟ್ರಸ್ಟ್ ಮುಖಂಡರು ಶೀಘ್ರದಲ್ಲಿ ಪರ್ಯಾಯ ವ್ಯವಸ್ಥೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಮಠದ ಮಾಲೀಕತ್ವ ಸ್ವಾಮೀಜಿಯವರಲ್ಲ, ಟ್ರಸ್ಟ್‌ನದು. ಪರ್ಯಾಯವಾಗಿ ಹೊಸ ಗುರುಗಳನ್ನು ನೇಮಕ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಧರ್ಮ ಪ್ರಚಾರ, ಬಸವ ತತ್ವದ ಅನುಷ್ಠಾನಕ್ಕೆ ಒತ್ತು ನೀಡುವ ವ್ಯಕ್ತಿಯೇ ಪೀಠಾಧಿಪತಿಯಾಗಬೇಕು ಎಂಬ ನಿರ್ಧಾರಕ್ಕೆ ಟ್ರಸ್ಟ್ ಬದ್ದವಾಗಿದೆ ಎಂದು ಹೇಳಿದ್ದಾರೆ.

ಜಯ ಮೃತ್ಯುಂಜಯ ಸ್ವಾಮೀಜಿಯವರು ಹೊಸ ಮಠ ಸ್ಥಾಪನೆ ಮಾಡುವುದಾಗಿ ಹೇಳಿದ್ದು, ಅದನ್ನು ಟ್ರಸ್ಟ್ ವಿರೋಧಿಸುವುದಿಲ್ಲ. ಆದರೆ, ಅವರು ಈಗಿನ ಪೀಠದ ಮುಖ್ಯಸ್ಥರಾಗಿ ಮುಂದುವರಿಯುವುದು ಅನುಚಿತ ಎನ್ನಲಾಗಿದೆ. ಇದೆಲ್ಲದರ ಮಧ್ಯೆ ಪಂಚಮಸಾಲಿ ಪೀಠದ ಭವಿಷ್ಯ ಏನು ಎಂಬುದು ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಲಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video