ಬೆಂಗಳೂರು

ಜಿಲ್ಲಾ ಪ್ರವಾಸಕ್ಕೆ ಸಜ್ಜಾದ ಸಿಎಂ ಸಿದ್ದರಾಮಯ್ಯ

ಬೆಂಗಳೂರು:- ತಮ್ಮ ವರ್ಚಸ್ಸು ಕುಂದಿಲ್ಲ, ಹಾಗೇ ಇದೆ ಎಂದು ತೋರಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಅವರು ಹೊಸ ಯೋಜನೆ ಶುರು ಮಾಡಿದ್ದಾರೆ. ಅದರಲ್ಲೂ ಎಸ್ ಎಂ ಕೃಷ್ಣ ಅವರ ಹಾದಿಯನ್ನ ಅನುಸರಿಸುತ್ತಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಿಂದ ಸಿದ್ದರಾಮಯ್ಯ ಅವರ ಇಮೇಜ್ ಎಷ್ಟಿದೆ ಅನ್ನೋದು ಗೊತ್ತಾಗಿತ್ತು. ಇದೀಗ ಅದೇ ರೀತಿಯಾದ ಉತ್ಸವಗಳನ್ನ ಆಚರಿಸಿಕೊಳ್ಳುವುದಕ್ಕೆ ಯೋಜನೆ ರೂಪಿಸಿದ್ದಾರೆ. ಹಾಸನದಲ್ಲಿ ಸಿದ್ದರಾಮೋತ್ಸವ 2.0ಗೆ ಎಲ್ಲಾ ತಯಾರಿ ನಡೆದಿತ್ತು. ಆದರೆ, ಒಂದಷ್ಟು ಚರ್ಚೆಗಳ ನಂತರ ಅದು ಜನಕಲ್ಯಾಣ ಸಮಾವೇಶವಾಗಿ ಬದಲಾಗಿತ್ತು.

ಈಗ ತಮ್ಮ ವರ್ಚಸ್ಸನ್ನು ಹೈಕಮಾಂಡು ಮತ್ತು ತನ್ನ ವಿರೋಧಿ ಬಣಕ್ಕೆ ತೋರಿಸುವುದಕ್ಕೆ ಬೇರೆ ಬೇರೆ ಪ್ಲ್ಯಾನ್ ರೆಡಿ ಮಾಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು, ಜನರ ಸಮಸ್ಯೆಗಳನ್ನ ಆಲಿಸುವ ಮೂಲಕ ತಮ್ಮ ವರ್ಚಸ್ಸನ್ನು ಕಾಪಾಡಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video