ಕೋಲಾರ

ಟೊಮ್ಯಾಟೊಗೆ ಪುಲ್ ಡಿಮ್ಯಾಂಡ್: ಗ್ರಾಹಕರ ಜೇಬಿಗೆ ಕತ್ತರಿ‌, ರೈತರ ಮೊಗದಲ್ಲಿ ನಗು.

ಕೋಲಾರ:- ಇಷ್ಟು ದಿನ 400 ರಿಂದ 500 ರೂಪಾಯಿವರೆಗೂ ಮಾರಾಟವಾಗುತ್ತಿದ್ದ ಟೊಮ್ಯಾಟೊ, ಇವತ್ತು 15 ಕೆಜಿ ಟೊಮ್ಯಾಟೊ ಬಾಕ್ಸ್ 600 ರಿಂದ 700 ರೂ.ವರೆಗೆ ಹರಾಜಾಗಿದೆ. ಕಳೆದ ಒಂದು ವಾರದಿಂದ ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿರುವುಂದರಿಂದ ಗ್ರಾಹಕರ ಜೇಬಿಗೆ ಕತ್ತರಿ‌ ಬೀಳುತ್ತಿದ್ದರೇ, ರೈತರ ಮೊಗದಲ್ಲಿ ಮಂದಾಹಸ ಮೂಡಿಸಿದೆ.

ಕಳೆದ ವರ್ಷ ಸಹ ಟೊಮ್ಯಾಟೊ ಬೆಲೆ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿತ್ತು. ಅಂದರೆ ಸುಮಾರು 800ರಿಂದ 1200 ರೂ. ರವರೆಗೂ ಮಾರಾಟವಾಗಿ ಅಚ್ಚರಿಗೊಳಿಸಿತ್ತು. ಉತ್ತರ ಭಾರತದಲ್ಲಿ ಮಳೆರಾಯನ ಅಬ್ಬರದಿಂದಾಗಿ ಟೊಮ್ಯಾಟೊಗೆ ಪುಲ್ ಡಿಮ್ಯಾಂಡ್ ಬಂದಿದೆ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಇದರಿಂದ ಸ್ಥಳೀಯವಾಗಿ ರೈತರು ಬೆಳೆದ ಬೆಳೆಗಳು ಮಳೆಯ ಅಬ್ಬರಕ್ಕೆ ಕೊಚ್ಚಿಹೋಗಿವೆ. ಇದರ ಪರಿಣಾಮ ಕೋಲಾರದ ಟೊಮ್ಯಾಟೊಗೆ ಭಾರಿ ಬೇಡಿಕೆ ಬಂದಿದೆ. ಈ ಕಾರಣದಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಹೊರ ರಾಜ್ಯಗಳ ವ್ಯಾಪಾರಸ್ಥರು ಬಿಡುಬಿಟ್ಟಿರುವುದರಿಂದ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ. ಮುಂದಿನ 15 ದಿನಗಳಲ್ಲಿ ಒಂದು ಬಾಕ್ಸ್ ಟೊಮ್ಯಾಟೊ 1000 ಗಡಿ ದಾಟುವ ಸಾಧ್ಯತೆ ಇದೆ.

ಕೋಲಾರ ಮತ್ತು‌ ಚಿಕ್ಕಬಳ್ಳಾಪುರದ ಜಿಲ್ಲೆಯ ರೈತರು ಈ ಸೀಝನಿನಲ್ಲಿ ಅತಿ‌ ಹೆಚ್ಚು ಟೊಮ್ಯಾಟೊ ಬೆಳೆಯುತ್ತಿದ್ದರು.‌ ಆದರೆ, ವೈರಸ್ ಹಾವಳಿಯಿಂದ ಟೊಮ್ಯಾಟೊ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಜೊತೆಗೆ ಟೊಮ್ಯಾಟೊ ಬೆಳೆ ಬೆಳೆಯವುದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಕಷ್ಟುಪಟ್ಟು ಬೆಳೆದರೂ ಸಹ ಟೊಮ್ಯಾಟೊಗೆ ಬೆಲೆ ಸಿಗುತ್ತೆ ಎಂಬ ವಿಶ್ವಾಸವಿಲ್ಲದ ಕಾರಣ ರೈತರು ಇತ್ತೀಚಿಗೆ ಟೊಮ್ಯಾಟೊ ಬಿಟ್ಟು ಬೇರೆ ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದಾರೆ. ಆದರೆ, ಈ ಸಂದರ್ಭದಲ್ಲೇ ಟೊಮ್ಯಾಟೆಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

ಜುಲೈ ಮತ್ತು ಆಗಸ್ಟ್ ತಿಂಗಳವರೆಗೂ ಟೊಮ್ಯಾಟೊಗೆ ಬೇಡಿಕೆ ಇರುವುದರಿಂದ ಟೊಮ್ಯಾಟೊ ಬೆಲೆ ಏರಿಕೆಯಾಗುವ ಸಂಭವವಿದೆ. ಇನ್ನು ಕೋಲಾರದ ಟೊಮ್ಯಾಟೊಗೆ ದೆಹಲಿ, ಒರಿಸ್ಸಾ, ಗುಜರಾಜ್, ಪಶ್ಚಿಮ ಬಂಗಾಳ, ರಾಜಾಸ್ಥಾನ್, ಪಶ್ಚಿಮ ಬಂಗಾಳದಲ್ಲಿ ಟೊಮ್ಯಾಟೊಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ, ಟೊಮ್ಯಾಟೊ ಬೆಲೆ ಏರಿಕೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ತಂದಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video