ಬೆಂಗಳೂರು

ಡಾ.ಆರತಿಕೃಷ್ಣ ಮೂರು ದಿನಗಳ ಪ್ರವಾಸದಲ್ಲಿ ಶಿವಮೊಗ್ಗ- ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಾರ್ಯಕ್ರಮದಲ್ಲಿ ಭಾಗಿ

ಬೆಂಗಳೂರು:- ಅನಿವಾಸಿ ಭಾರತೀಯ ಕರ್ನಾಟಕ ಸರ್ಕಾರದ ಉಪಾಧ್ಯಕ್ಷೆ ಡಾ.ಆರತಿಕೃಷ್ಣರವರು ಮೂರು ದಿನಗಳ ಪ್ರವಾಸವು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದಾರೆ ಎಂದು ಕಚೇರಿ ಮೂಲ ತಿಳಿಸಿದೆ.

ನಾಳೆಯ ದಿನ ಸಂಜೆ ಬೆಂಗಳೂರಿನ ಸ್ಯಾಂಕಿ ರಸ್ತೆಯ ನಿವಾಸದಿಂದ ಶಿವಮೊಗ್ಗ ಮಾರ್ಗವಾಗಿ ಮೇಗರವಳ್ಳಿಯಲ್ಲಿರುವ ಅನಿವಾಸಿ ಭಾರತೀಯರ ನಿವಾಸಕ್ಕೆ ತೆರಳಿ ನಂತರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸರ್ಕಾರಿ ಪ್ರವಾಸ ಮಂದಿರದಲ್ಲಿ ತಂಗಲಿದ್ದಾರೆ. ಮಾರನೇಯ ದಿನ ಬೆಳಿಗ್ಗೆ11.30ಕ್ಕೆ ದಿವಂಗತ ಮಾಜಿ ಸಚಿವ ಬೇಗಾನೆ ರಾಮಯ್ಯನವರ ವೃತ್ತ ನಾಮಕರಣದಲ್ಲಿ ಭಾಗವಹಿಸಿದ ನಂತರ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಶೃಂಗೇರಿಯಿಂದ ಮಾರ್ಗದ ಮುಖಾಂತರ ಕೊಪ್ಪ, ನ.ರಾ.ಪುರ ಮಾರ್ಗವಾಗಿ ಇತ್ತೀಚೆಗೆ ನಿಧನ ಹೊಂದಿದ ಮಡಬೂರಿನ ರಾಜೇಂದ್ರರವರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದ್ದಾರೆ.

ನ.ರಾ.ಪುರ ತಾಲ್ಲೂಕು ಪತ್ರಕರ್ತರ ಸಂಘದ ಬಾಳೆಹೊನ್ನೂರಿನಲ್ಲಿ ನೂತವಾಗಿ ಶಂಕುಸ್ಥಾಪನೆಗೊಳ್ಳಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ರಂಭಾಪುರಿ ಪೀಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ.
ಪುನಃ ಅಂದೇ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿ 28 ರ ಬೆಳಿಗ್ಗೆ ಚಿಕ್ಕಮಗಳೂರು ಮಾರ್ಗವಾಗಿ ಬೆಂಗಳೂರು ಪ್ರಯಾಣ ಬೆಳಸುವರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video