ಚಿಕ್ಕಮಗಳೂರು:- ಸರ್ಕಾರಿ ಸೇವೆಯಿಂದ ಡಾ.ಬಾಲಕೃಷ್ಣರವರನ್ನು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿ ವಜಾ ಆದೇಶ ಹೊರಡಿಸಲಾಗಿದೆ.
ಡಾ.ಜಿ.ಎಸ್.ಬಾಲಕೃಷ್ಣ ಪ್ರಸೂತಿ ತಜ್ಞರಾಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲೆಯ ಕೊಪ್ಪದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಕುಮಾರಿ ಕಲ್ಪನಾ ಎಂಬ ಗರ್ಭಿಣಿಗೆ 2020ರ ಮಾರ್ಚ್14ರಂದು ಹೆರಿಗೆ ಮಾಡಿಸಿ, ಅವರಿಗೆ ಜನಿಸಿದ ಹೆಣ್ಣು ಮಗುವನ್ನು 50,000 ಸಾವಿರ ರೂಪಾಯಿಗಳಿಗೆ ಶ್ರೀಮತಿ ಪ್ರೇಮಲತಾ ಎಂಬುವವರಿಗೆ ಮಾರಾಟ ಮಾಡಿ, ಪ್ರೇಮಲತಾ ಎಂಬುವವರಿಗೆ ಹೆರಿಗೆಯಾದಂತೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿರುವ ಆರೋಪಕ್ಕಾಗಿ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆಯಲ್ಲಿ ದುರ್ನಡತೆಯ ಆರೋಪವು ಸಾಬೀತಾಗಿರುವುದರಿಂದ ಇವರನ್ನು ಕೆಸಿಎಸ್ (ಸಿಸಿಎ) ನಿಯಮಗಳು 1957ರ ನಿಯಮ 8(vi) ರಡಿಯಲ್ಲಿ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ದಂಡನೆಯನ್ನು ವಿಧಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ಮಾಹಿತಿ ನೀಡಿದ್ದಾರೆ.
ಅವರು ಈ ಹಿಂದೆ ನ.ರಾ.ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಸಾರ್ವಜನಿಕರ ಅತ್ಯುತ್ತಮ ಸೇವಾ ಪ್ರಶಸ್ತಿ ಸಂಸ್ಥೆ ನೀಡಿ ಸನ್ಮಾನಿಸಿತ್ತು.
ಈ ಆರೋಪದ ಹಿಂದೆ ಕಾಣದ ಕೈಗಳ ಪಾತ್ರ ಎದ್ದು ಕಾಣುತ್ತಿದ್ದು, ಶಾಸಕ ರಾಜೇಗೌಡರವರ ಬೆಂಬಲಿಗರ ಪಾತ್ರ ಎದ್ದು ಕಾಣುತ್ತಿದೆ ಎಂದು ಬಾಲಕೃಷ್ಣರವರು ಹತ್ತಿರದಿಂದ ಬಲ್ಲವರು ಹೇಳುತ್ತಿದ್ದು, ಸ್ವತಃ ಮಾಧ್ಯಮದವರು ಶಾಸಕರನ್ನು ಕೇಳಿದಾಗ ನಿರ್ಲಕ್ಷ್ಯದ ಉತ್ತರ ನೀಡಿದ್ದು, ಆರೋಪಕ್ಕೆ ಪುಷ್ಟಿ ನೀಡಿದೆ.