ಚೆನ್ನೈ:- ವರನಟ ಡಾ.ರಾಜ್ ಕುಮಾರ್ ಸಹೋದರಿ ನಾಗಮ್ಮ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಾಗಮ್ಮ ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹುಟ್ಟೂರು ಗಾಜನೂರಿನಲ್ಲಿ ನಾಗಮ್ಮ ವಾಸಿಸುತ್ತಿದ್ದರು.
ತಮಿಳುನಾಡಿನ ತಾಳವಾಡಿ ತಾಲೂಕಿನ ದೊಡ್ಡ ಗಾಜನೂರಿನಲ್ಲಿ ಅವರು ಮೃತಪಟ್ಟಿದ್ದಾರೆ. ವರನಟ ಡಾ.ರಾಜ್ ಕುಮಾರ್ ಅವರಿಗೆ ನಾಗಮ್ಮ ಎಂಬ ಸಹೋದರಿ ಇದ್ದರು. ಅವರು ವರನಟ ಡಾ. ರಾಜ್‍ಕುಮಾರ್ ಅವರ ಹಿರಿಯ ಸಹೋದರಿ ಗಾಜನೂರಿನಲ್ಲಿ ವಾಸಿಸುತ್ತಿದ್ದರು. ಪುನೀತ್ ಕುಮಾರ್ ಅವರು ನಿಧನ ಹೊಂದಿರುವ ವಿಚಾರ ನಾಗಮ್ಮ ಅವರಿಗೆ ಗೊತ್ತೇ ಇರಲಿಲ್ಲವಂತೆ.
Leave feedback about this