ಚೆನ್ನೈ:- ಇಂದು ತಮಿಳುನಾಡಿನ ತಿರುಚನಪಲ್ಲಿ (ತಿರುಚಿ)ಯಲ್ಲಿ ನಡೆದ ಬಸವ ಜಯಂತಿ 2025 ಮತ್ತು ಅಭಿನಂದನಾ ಸಮಾರಂಭವನ್ನು ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಕಾರ್ಯದರ್ಶಿಗಳಾದ ಬೆಂಗಳೂರಿನ ಹೆಚ್.ಎಂ ರೇಣುಕ ಪ್ರಸನ್ನ ಉದ್ಘಾಟಿಸಿದರು.
ದಿವ್ಯ ಸಾನಿಧ್ಯವನ್ನು ದಿಂಡಿ ಓಣಂನಾ ಮಹಿಲಂ ಮಠದ ಪೂಜ್ಯ ಬ್ರಹ್ಮಪುರ ಆದಿನಂ ಸ್ವಾಮೀಜಿ ವಹಿಸಿದ್ದರು, ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರಾದ ಎಸ್ ನಾಗರತಿನಂ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎಲ್ ಬಾಲಾಜಿಯವರು ಮತ್ತು ರಾಷ್ಟ್ರೀಯ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ ಅಧ್ಯಕ್ಷರಾದ ಉಮೇಶ್ ಹೆಚ್. ಪಾಟೀಲ್ ರವರು ಭಾಗವಹಿಸಿದ್ದರು.
ಈ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಶ್ರೀಯುತರಾದ ಕಣ್ಣಪ್ಪ ತಂಬಿರಾರ್ ಅವರನ್ನು ಮಹಾಸಭಾ ವತಿಯಿಂದ ಸನ್ಮಾನಿಸಲಾಯಿತು.