ಬೆಂಗಳೂರು:- ದಮನಿತ ಹಿಂದುಳಿದ ಜಾತಿಗಳ ಸಂಘಟನೆಯ ಮಹತ್ವದ ಸಭೆಯು ಶಾಸಕರ ಸಭಾ ಭವನದಲ್ಲಿ ಬುಧವಾರ ನಡೆಯಿತು. ಈ ಸಭೆಯಲ್ಲಿ ಸಮಾಜದಲ್ಲಿ ಶೋಷಿತ ಮತ್ತು ದಮನಿತ ಹಿಂದುಳಿದ ಜಾತಿಗಳ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟದ ಮುಂದಿನ ಹಂತದ ಕುರಿತು ಗಂಭೀರ ಚರ್ಚೆಗಳು ನಡೆಸಲಾಯಿತು.
ಸಭೆಯಲ್ಲಿ ಪ್ರಮುಖವಾಗಿ ದಮನಿತ ಹಿಂದುಳಿದ ಸಮುದಾಯಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ದತ್ತಾಂಶಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಲು ಕಾನೂನು ಹೋರಾಟ ನಡೆಸಲು ನಿರ್ಧರಿಸಲಾಯಿತು. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಸರಿಯಾದ ನ್ಯಾಯಯುತ ಮಾರ್ಗದಲ್ಲಿ ಕ್ರಮಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಸಮ್ಮತಿಸಿ ತೀರ್ಮಾನಿಸಲಾಯಿತು.
ಜೊತೆಗೆ, “ದಮನಿತ ಜಾತಿಗಳ ಸಂಘಟನೆಯ” ದೈಯೋದೇಶಗಳು ಮತ್ತು ಭವಿಷ್ಯದ ದಿಕ್ಕುಗಳ ಕುರಿತು ಚರ್ಚಿಸಲಾಗಿದ್ದು, ಸಂಘಟನೆಯನ್ನು ರಾಜ್ಯದ ಮಟ್ಟದಲ್ಲಿ ಬಲಪಡಿಸುವ ನಿರ್ಧಾರ ಕೈಗೊಂಡು, ಹಕ್ಕುಗಳ ಚಳವಳಿಯಲ್ಲಿ ನೈತಿಕ ಬಲ ಮತ್ತು ಸಾಮಾಜಿಕ ಸಂಘಟನೆಯ ಅಗತ್ಯತೆಯ ಬಗ್ಗೆ ಸಭೆಯಲ್ಲಿ ವಿಶೇಷವಾಗಿ ಒತ್ತು ನೀಡಲಾಯಿತು.
ಸಭೆಯಲ್ಲಿ ಮಾಜಿ ಹಿಂದುಳಿದ ವರ್ಗದ ಸದಸ್ಯರಾದ ಲಿಂಗಪ್ಪ, ಅಧ್ಯಕ್ಷರಾದ ದ್ವಾರಕಾನಾಥ್, ಮಾಜಿ ಚುನಾವಣಾ ಆಯುಕ್ತರಾದ ಶ್ರೀನಿವಾಸ ಆಚಾರ, ಹಿಂದುಳಿದ ವರ್ಗಗಳ ಚಿಂತಕರಾದ ನಾರಾಯಣ ರವರು ಪಾಲ್ಗೊಂಡು ಸಭೆಯ ಮುಖ್ಯ ಸಂಚಾಲಕರಾದ ಲೋಹಿತ್ ನಾಯಕ ಅವರು ಸಭೆಯನ್ನು ನಿರ್ವಹಿಸಿದರು.