ಚಿಕ್ಕಮಗಳೂರು:- ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಕೊಪ್ಪ ಮಾರ್ಗವಾಗಿ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರಕ್ಕೆ ಕೋಳಿ ಸಾಗಾಟ ಮಾಡುವ ಪಿಕಪ್(KA14C6478) ವಾಹನವೊಂದು ದಿನನಿತ್ಯ ಸಂಚಾರ ಮಾಡುತ್ತಿತ್ತು. ಅಂದಿನ ಕಲೆಕ್ಷನ್ ಹಣ ಕೂಡ ಡ್ರೈವರ್ ಬಳಿ ಇರುತ್ತಿತ್ತು.
ಹಣವನ್ನು ಲಪಟಾಯಿಸಲು ಹೊಂಚು ಹಾಕಿದ್ದ ಕ್ರಿಮಿನಲ್ ಚಟುವಟಿಕೆ ಹೊಂದಿರುವ ತಂಡವೊಂದು ಅಂದು ಜುಲಾಯಿ 23ರಂದು ಮುಹೂರ್ತ ಫಿಕ್ಸ್ ಮಾಡಿ, ವಾಹನದಲ್ಲಿ ಚಾಲಕ ಹಾಗೂ ಹೆಲ್ಪರ್ (ದರ್ಶನ್) ರವರೊಂದಿಗೆ ಪ್ರತಿದಿನದಂತೆ ತೀರ್ಥಹಳ್ಳಿಯಿಂದ ಬೆಳಗಿನ ಜಾವ ಎನ್ ಆರ್ ಪುರಕ್ಕೆ ಬಂದು ಕೋಳಿಗಳನ್ನು ಮಾರಾಟ ಮಾಡಿಕೊಂಡು, ಮಾರಾಟ ಮಾಡಿದ ಎರಡು ಲಕ್ಷ (2.00.000)ರೂಪಾಯಿ ಹಣವನ್ನು ತೆಗೆದುಕೊಂಡು ವಾಪಸ್ಸು ಶಿವಮೊಗ್ಗಕ್ಕೆ ಬೆಳಗಿನ ಜಾವ 04.45ರ ಸಮಯದಲ್ಲಿ ಶಿವಮೊಗ್ಗ ಮುಖ್ಯ ರಸ್ತೆಗೆ ಹೋಗುವ ಆರಂಭದ ಬಸ್ ನಿಲ್ದಾಣದ ಬಳಿ ಹೋಗುತ್ತಿರುವಾಗ ಬೊಲೆರೋ ಪಿಕಪ್ ವಾಹನಕ್ಕೆ ಎರಡು ಕಾರುಗಳು ರಸ್ತೆಯ ಎರಡು ಬದಿಯಿಂದ ಅಡ್ಡವಾಗಿ ನಿಲ್ಲಿಸಿದ್ದು, ಸುಮಾರು 8 ರಿಂದ10 ಜನರ ತಂಡವು ವಾಹನವನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್ ನಿಂದ ಹೊಡೆದು ಅವರ ಬಳಿ ಇದ್ದ 3 ಮೊಬೈಲ್ ಹಾಗೂ ಬೆಳ್ಳಿಯ ಬ್ರಾಸ್ ಲೈಟ್, ಬೆಳ್ಳಿಯ ಚೈನ್ ಹಾಗೂ ವಾಹನದಲ್ಲಿದ್ದ ಹಣವನ್ನು ದೋಚಿಕೊಂಡು ಹೋಗಿದ್ದರು.
ಪ್ರಕರಣವನ್ನು ಘೋರವಾದ ಕೃತ್ಯವೆಂದು ತಿಳಿದ ನರಸಿಂಹರಾಜಪುರ ಪೊಲೀಸ್ ತಂಡವು ವೃತ್ತ ನಿರೀಕ್ಷಕರರಾದ ಗುರುದತ್ ಕಾಮತ್, ಠಾಣೆಯ ಪಿ.ಎಸ್.ಐ ಬಿ,ಎಸ್ ನಿರಂಜನ್ ಗೌಡರವರ ನೇತೃತ್ವದಲ್ಲಿ ತಂಡ ರಚನೆ ಮಾಡಿ ಕ್ರಿಮಿಗಳ ಹೆಡೆಮುರಿ ಕಟ್ಟಲು ಸಿಬ್ಬಂದಿಗಳಾದ ಅನು, ಅಮಿತ್ ಚೌಗುಲೆ, ದೇವರಾಜ, ಮಧು ಎಸ್,ಜಿ, ಯುಗಾಂಧರ್, ಶಿವರುದ್ರಪ್ಪ, ಕೌಶಿಕ್ ಒಳಗೊಂಡ ತಂಡವನ್ನು ರಚನೆ ಮಾಡಿ ಮಾಹಿತಿಯನ್ನು ಸಂಗ್ರಹಿಸಿ, ಪ್ರಕರಣದ ತನಿಖೆಯನ್ನು ತಡಮುಟ್ಟಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಯಿತು.
ಪ್ರಕರಣದಲ್ಲಿ ಪ್ರಸ್ತುತ ಮೂರು ಜನ ಆರೋಪಿಗಳನ್ನು ಬಂಧಿಸಿ ಅದರಲ್ಲಿ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಾಗಿದ್ದು ಉಳಿದ ಸತ್ಯಾನಂದ @ ಸತ್ಯ @ಸ್ನೇಕ್ ಸತ್ಯ ಬಿನ್ ಕುಮಾರ (26) ಭದ್ರಾವತಿ ತಾರಿಕಟ್ಟೆಯ ಹಿರಿಯೂರು, ಸಯ್ಯದ್ ಲತೀಫ್ @ ಲತೀಫ್ ಬಿನ್ ಅಜೀಜ್ (25) ವರ್ಷದ ಅಪ್ಪಾಜಿ ಬಡಾವಣಿ ಹಿರಿಯೂರು ಭದ್ರಾವತಿಯವನಾಗಿದ್ದಾನೆ. ಪ್ರಕರಣದಲ್ಲಿನ ಆರೋಪಿ ಸತ್ಯ @ ಸತ್ಯಾನಂದ ಈತನ ಮೇಲೆ ಈಗಾಗಲೇ ಕೊಲೆ, ಸುಲಿಗೆ, ಗಾಂಜದಂತಹ ಸುಮಾರು 8 ಪ್ರಕರಣಗಳು ದಾಖಲಾಗಿದ್ದು, ದೋಚಿದ್ದ ಒಂದು ಬೆಳ್ಳಿಯ ಬ್ರಾಸ್ ಲೈಟ್, ಬೆಳ್ಳಿಯ ಸರ, 2 ಮೊಬೈಲ್ ಒಂದು ಸೌಂಡ್ ಸಿಸ್ಟಂ ಹಾಗು ಕೃತ್ಯಕ್ಕೆ ಉಪಯೋಗಿಸಿದ ಹೊಂಡಾಸಿಟಿ ಕಾರ್, ಲಾಂಗ್, ಕಬ್ಬಿಣದ ರಾಡ್ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ತನಿಖಾ ತಂಡಕ್ಕೆ ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕರವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
Leave feedback about this