ಮಂಗಳೂರು:- ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲಕಾರಿಯಾಗುತ್ತಲೇ ಇದೆ. ಈಗಾಗಲೇ ದೂರುದಾರ ಹೇಳಿದ ಸ್ಥಳದಲ್ಲಿ ಪುರುಷ ವ್ಯಕ್ತಿಯ ಅವಶೇಷಗಳು ದೊರೆತ ಬೆನ್ನಲ್ಲೇ ಇದೀಗ ಇಡೀ ಪ್ರಕರಣ ತಿರುವು ಪಡೆದುಕೊಂಡಿದೆ. ಇನ್ನೊಂದೆಡೆ ದೂರುದಾರ ಅನಾಮಿಕ ವ್ಯಕ್ತಿ ಯಾರೆಂದು ಗೊತ್ತು ಆತನ ಬಗ್ಗೆ ಇರುವ ಮಾಹಿತಿ ಬಗ್ಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ವಕೀಲ ಕೇಶವ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿರುವ ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ವಕೀಲ ಕೇಶವ ಗೌಡ ದೂರುದಾರ ಅನಾಮಿಕ ವ್ಯಕ್ತಿ ಹೆಣದ ಮೇಲೆ ಇದ್ದ ಚಿನ್ನ, ಹಣ ಕದಿಯುತ್ತಿದ್ದ. ಈ ಕಾರಣಕ್ಕೆ ಆತನನ್ನು 2014ರಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಈ ಬೆಳವಣಿಗೆ ಹಿಂದೆ ಇರುವ ಷಡ್ಯಂತ್ರ ಯಾರದ್ದು ಎಂದು ಗೊತ್ತಿದೆ. ಕ್ಷೇತ್ರದ ಮೇಲೆ ಆರೋಪ ಮಾಡುವವರಿಗೆ ದೇವರು ತಕ್ಕ ಬುದ್ಧಿ ಕೊಡಲಿ ಎಂದರು.
ಈ ವ್ಯಕ್ತಿಯನ್ನು ವಿಚಾರಣೆ ಮಾಡಬೇಕು, ಮಂಪರು ಪರೀಕ್ಷೆ ಮಾಡಬೇಕು. ಆತನ ಹಿನ್ನೆಲೆಯಲ್ಲಿರುವವರ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಅನಾಮಿಕ ಹೇಳಿದ ಹಾಗೆ ಕೊಲೆ, ಅತ್ಯಾಚಾರ, ಅನ್ಯಾಯ ಪ್ರಕರಣ ನಡೆದಿಲ್ಲ. ಉತ್ಖನನ ಸಂದರ್ಭ ಒಂದೆರಡು ಮೃತ ದೇಹ ಸಿಕ್ಕರೂ ಅಚ್ಚರಿಯಿಲ್ಲ. ಎಸ್‌ಐಟಿ (SIT) ಮೂಲಕ ಎಲ್ಲಾ ರೀತಿಯ ಸಮಗ್ರ ತನಿಖೆಯಾಗಲಿ ಎಂದು ತಿಳಿಸಿದರು.
Leave feedback about this