Uncategorized

ದೆಹಲಿಯಲ್ಲಿ ಪ್ರಬಲ ಭೂಕಂಪನದ ಅನುಭವ

ದೆಹಲಿ:- ರಾಷ್ಟ್ರದ ರಾಜಧಾನಿ ದೆಹಲಿಯ ಕೆಲ ಪ್ರದೇಶದಲ್ಲಿ ಗುರುವಾರವಾದ ಇಂದು ಬೆಳಿಗ್ಗೆ ಪ್ರಬಲ ಭೂಕಂಪನದ ಅನುಭವವಾಗಿದೆ.
ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭಾರತೀಯ ಸಮಯ ಬೆಳಿಗ್ಗೆ 9.04ಕ್ಕೆ ಹರಿಯಾಣದ ಜಜ್ಜರ್‌ನಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ.

ನಿನ್ನೆಯ ದಿನ ದೆಹಲಿಯಲ್ಲಿ ಭಾರಿ ಮಳೆಯಾಗಿ, ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿತು. ಇಂದು ಮುಂಜಾನೆಯೂ ಜನದಟ್ಟಣೆಯ ಸಮಯದಲ್ಲಿ ಪ್ರಯಾಣಿಕರು ಸಂಚಾರದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಗಳು ಬಹಿರಂಗಪಡಿಸಿವೆ.

ಕೆಲವು ವರದಿಗಳು ಕೆಟ್ಟ ಹವಾಮಾನದಿಂದಾಗಿ ನಿನ್ನೆ ಸಂಜೆ ಕನಿಷ್ಠ ಆರು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಹೇಳಿವೆ – ಇದರಲ್ಲಿ ಜೈಪುರಕ್ಕೆ ನಾಲ್ಕು ಮತ್ತು ಲಕ್ನೋಗೆ ಎರಡು ವಿಮಾನಗಳು ಸೇರಿವೆ.