ಬೆಂಗಳೂರು:- ಧರ್ಮಸ್ಥಳ ಸರಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ಆದೇಶ ಹೊರಡಿಸಿದೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಎಸ್‌ಐಟಿ ರಚನೆ ಮಾಡಿಕೊಳ್ಳಿ ಯಾವುದೇ ಸಮಸ್ಯೆಯಿಲ್ಲ, ತನಿಖೆ ನಡೆಯಲಿ ಯಾವುದೇ ತೊಂದರೆಯಿಲ್ಲ, ಧರ್ಮಸ್ಥಳದಲ್ಲಿ ತಪ್ಪು ನಡೆದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಯಡಿಯೂರಪ್ಪನವರ ಈ ಹೇಳಿಕೆಗೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದವರು ಆ ಭಾಗದ ಜನರೇ. ಅಲ್ಲದೇ ದೂರು ಸಹ ದಾಖಲಾಗಿದೆ. ದೂರು ಕೊಟ್ಟವರೂ ಸಹ ಹೇಳಿಕೆ ನೀಡಿದ್ದಾರೆ. ಅದನ್ನು ತನಿಖೆ ಮಾಡಿ ಆಗಿದೆಯಾ ಇಲ್ವಾ ಅನ್ನೋದು ಗೊತ್ತಾಗಬೇಕಲ್ಲ. ಸುಮ್ಮನೆ ಹೀಗೆ ಹೇಳುತ್ತಾ ಹೋದರೆ ಅದು ಕಾನೂನಿನ ದೃಷ್ಟಿಯಲ್ಲಿ ಸರಿ ಕಾಣಿಸುವುದಿಲ್ಲ. ಹಾಗಾಗಿ ತನಿಖೆ ಆದೇಶ ಮಾಡಿದ್ದೇವೆ. ತನಿಖೆಯಲ್ಲಿ ಏನೂ ಇಲ್ಲ ಎಂದು ಬಂದರೆ ಯಡಿಯೂರಪ್ಪನವರು ಹೇಳಿದ ಹಾಗೆ ಏನೂ ಇಲ್ಲ ಎಂದು ಸಮಾಜಕ್ಕೆ ತಿಳಿಸಬಹುದು. ತನಿಖೆಯಲ್ಲಿ ಏನು ಬರುತ್ತೋ ಕಾದುನೋಡೋಣ ಎಂದು ಹೇಳಿಕೆ ನೀಡಿ ತನಿಖೆಗೂ ಮುನ್ನವೇ ಮಾತನಾಡಿದ ಯಡಿಯೂರಪ್ಪಗೆ ಟಾಂಗ್ ಕೊಟ್ಟಿದ್ದಾರೆ.
Leave feedback about this