ದಕ್ಷಿಣ ಕನ್ನಡ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಏಳನೇ ಪಾಯಿಂಟ್‌ನಲ್ಲಿ ಕರವಸ್ತ್ರ ಪತ್ತೆ

ಮಂಗಳೂರು:- ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ತನಿಖೆ ಮುಂದುವರೆಸಿದೆ. ದೂರುದಾರ ತೋರಿಸಿದ್ದ ಏಳು ಮತ್ತು ಎಂಟನೇ ಪಾಯಿಂಟ್‌ನಲ್ಲಿ ಇಂದು ಶೋಧ ಕಾರ್ಯ ನಡೆದಿದ್ದು, ಏಳನೇ ಪಾಯಿಂಟ್‌ ನಲ್ಲಿ ಕರವಸ್ತ್ರವೊಂದು ಪತ್ತೆಯಾಗಿದೆ.

ನೇತ್ರಾವತಿ ನದಿ ತಟದಿಂದ ತುಸು ದೂರದಲ್ಲೇ ಇರುವ ಏಳನೇ ಪಾಯಿಂಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಹಿಟಾಚಿಯಿಂದ ಸುಮಾರು ಎಂಟು ಅಡಿಯಷ್ಟು ಮಣ್ಣನ್ನು ಹೊರತೆಗೆದು ಶೋಧ ಕಾರ್ಯ ನಡೆಸಲಾಗಿದೆ. ಈ ವೇಳೆ ಮಣ್ಣಿನ ಅಡಿಯಲ್ಲಿ ಒಂದು ಕರವಸ್ತ್ರ ಸಿಕ್ಕಿದ್ದು, ಈ ಕರವಸ್ತ್ರವನ್ನು ಸಹ ಎಸ್‌ಐಟಿ ಅಧಿಕಾರಿಗಳು ಎಫ್‌ಎಸ್‌ಎಲ್‌ ತಜ್ಞರಿಗೆ ಹಸ್ತಾಂತರಿಸಲಾಗಿದೆ.

ನೇತ್ರಾವದಿಯ ನದಿ ಮತ್ತೊಂದು ತಟದಲ್ಲಿ ಅಂದರೆ ಏಳನೇ ಪಾಯಿಂಟ್‌ನಿಂದ ಕೆಲವೇ ಮೀಟರ್‌ ದೂರದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಮಿನಿ ಅರ್ಥ್‌ ಮೂವರ್‌ ಮೂಲಕ ಕಾರ್ಯಾಚರಣೆ ನಡೆಸಿದ್ದು, ಆರು ಅಡಿ ಮಣ್ಣು ಅಗೆದರು ಸಹ ಯಾವುದೇ ಯಾವುದೇ ಅವಶೇಷ ಪತ್ತೆಯಾಗದ ಹಿನ್ನೆಲೆ ನೇತ್ರಾವತಿ ನದಿ ತಟದಿಂದ ತುಸು ದೂರದಲ್ಲೇ ಇರುವ ಏಳನೇ ಪಾಯಿಂಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳ ಸಮುಖ್ಖದಲ್ಲಿ ಹಿಟಾಚಿಯಿಂದ ಸುಮಾರು ಎಂಟು ಅಡಿಯಷ್ಟು ಮಣ್ಣನ್ನು ಹೊರತೆಗೆದು ಶೋಧ ಕಾರ್ಯ ನಡೆಸಲಾಗಿದೆ. ಈ ವೇಳೆ ಮಣ್ಣಿನ ಅಡಿಯಲ್ಲಿ ಒಂದು ಕರವಸ್ತ್ರ ಸಿಕ್ಕಿದ್ದು, ಈ ಕರವಸ್ತ್ರವನ್ನು ಸಹ ಎಸ್‌ಐಟಿ ಅಧಿಕಾರಿಗಳು ಎಫ್‌ಎಸ್‌ಎಲ್‌ (FSL) ತಜ್ಞರಿಗೆ ಹಸ್ತಾಂತರಿಸಲಾಗಿದೆ.

ನೇತ್ರಾವದಿಯ ನದಿ ಮತ್ತೊಂದು ತಟದಲ್ಲಿ ಅಂದರೆ ಏಳನೇ ಪಾಯಿಂಟ್‌ನಿಂದ ಕೆಲವೇ ಮೀಟರ್‌ ದೂರದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಮಿನಿ ಅರ್ಥ್‌ ಮೂವರ್‌ ಮೂಲಕ ಕಾರ್ಯಾಚರಣೆ ನಡೆಸಿದ್ದು, ಆರು ಅಡಿ ಮಣ್ಣು ಅಗೆದರು ಸಹ ಯಾವುದೇ ಯಾವುದೇ ಅವಶೇಷ ಪತ್ತೆಯಾಗದ ಹಿನ್ನೆಲೆ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿದೆ.

ಮೂರನೇ ದಿನದ ಕಾರ್ಯಾಚರಣೆ ಅಂದರೆ ಗುರುವಾರದ ಕಾರ್ಯಾಚರಣೆಯಲ್ಲಿ ಆರನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ನಡೆಸಲಾಗಿತ್ತು. ದೂರುದಾರ ಮಾಡಿದ್ದ ಈ ಪಾಯಿಂಟ್‌ನಲ್ಲಿ ಎರಡು ತಲೆಬುರುಡೆ ಸೇರಿದಂತೆ 12 ಮೂಳೆಗಳು ಪತ್ತೆಯಾಗಿದ್ದವು. ಈ ಅವಶೇಷಗಳನ್ನು ಈಗಾಗಲೇ ಕೆಎಂಸಿ (KMC) ಲ್ಯಾಬ್‌ ಗೆ ರವಾನಿಸಲಾಗಿದೆ. ಈ ಮೂಳೆಗಳು ಪುರುಷನದ್ದು ಎಂಬುದು ಪತ್ತೆಯಾಗಿದ್ದು, ಮುಂದಿನ ಪರೀಕ್ಷೆಗಳ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ.

ಆರನೇ ಪಾಯಿಂಟ್‌ನಲ್ಲಿ ತಲೆ ಬುರುಡೆ ಸಿಕ್ಕ ಬೆನ್ನಲ್ಲೇ ಎಸ್‌ಐಡಿ ಕಟ್ಟೆಚ್ಚರ ವಹಿಸಿತ್ತು. ಉತ್ಖನನ ನಡೆಯುವ ಪಾಯಿಂಟ್‌ನ ಸುತ್ತ ಹಸಿರು ಪರದೆಯನ್ನು ಇಳಿಬಿಡಲಾಗಿತ್ತು. ಜೊತೆಗೆ ಅಧಿಕಾರಿಗಳನ್ನು ಬಿಟ್ಟರೇ ಕಾರ್ಮಿಕರಿಗೆ ಫೋನ್‌ ಬಳಸದಂತೆ ತಾಕೀತು ಮಾಡಲಾಗಿತ್ತು.

ಮೂರನೇ ದಿನದ ಕಾರ್ಯಾಚರಣೆ ಅಂದರೆ ಗುರುವಾರದ ಕಾರ್ಯಾಚರಣೆಯಲ್ಲಿ ಆರನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ನಡೆಸಲಾಗಿತ್ತು. ದೂರುದಾರ ಮಾಡಿದ್ದ ಈ ಪಾಯಿಂಟ್‌ನಲ್ಲಿ ಎರಡು ತಲೆಬುರುಡೆ ಸೇರಿದಂತೆ 12 ಮೂಳೆಗಳು ಪತ್ತೆಯಾಗಿದ್ದವು. ಈ ಅವಶೇಷಗಳನ್ನು ಈಗಾಗಲೇ ಕೆಎಂಸಿ ಲ್ಯಾಬ್‌ ಗೆ ರವಾನಿಸಲಾಗಿದೆ. ಈ ಮೂಳೆಗಳು ಪುರುಷನದ್ದು ಎಂಬುದು ಪತ್ತೆಯಾಗಿದ್ದು, ಮುಂದಿನ ಪರೀಕ್ಷೆಗಳ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ.

ಆರನೇ ಪಾಯಿಂಟ್‌ನಲ್ಲಿ ತಲೆ ಬುರುಡೆ ಸಿಕ್ಕ ಬೆನ್ನಲ್ಲೇ ಎಸ್‌ಐಡಿ ಕಟ್ಟೆಚ್ಚರ ವಹಿಸಿತ್ತು. ಉತ್ಖನನ ನಡೆಯುವ ಪಾಯಿಂಟ್‌ನ ಸುತ್ತ ಹಸಿರು ಪರದೆಯನ್ನು ಇಳಿಬಿಡಲಾಗಿತ್ತು. ಜೊತೆಗೆ ಅಧಿಕಾರಿಗಳನ್ನು ಬಿಟ್ಟರೇ ಕಾರ್ಮಿಕರಿಗೆ ಫೋನ್‌ ಬಳಸದಂತೆ ತಾಕೀತು ಮಾಡಲಾಗಿತ್ತು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video