ಬೆಂಗಳೂರು:- ಧರ್ಮಸ್ಥಳದಲ್ಲಿ ನಿಗೂಢವಾಗಿ ಅನೇಕ ಸಾವುಗಳು ಸಂಭವಿಸಿವೆ ಎಂಬ ಆರೋಪ ದಿನದಿಂದ ದಿನಕ್ಕೆ ಹೆಚ್ಚಾಗಿ ಕೇಳಿ ಬರುತ್ತಿದೆ. ಅದರಲ್ಲೂ ಮಾಜಿ ಕಾರ್ಮಿಕರ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ಪೊಲೀಸರಿಗೆ ನೀಡಿದ ಗೌಪ್ಯ ಮಾಹಿತಿಯ ವಿವರಗಳು ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಿಕ್ಕಿದೆ. ಆದ್ದರಿಂದ ವಕೀಲರು ಪೊಲೀಸರ ನಡೆಯನ್ನು ಪ್ರಶ್ನಿಸಿದ್ದಾರೆ.
ಅನೇಕ ಕೊಲೆಗಳು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು 20 ವರ್ಷಗಳ ಕಾಲ ಮುಚ್ಚಿಹಾಕಿದ್ದಾಗಿ ವ್ಯಕ್ತಿಯೊಬ್ಬರು ಆರೋಪಿಸಿದ್ದರು. ಅಲ್ಲದೇ ಸಾಕ್ಷಿಗಳನ್ನು ಜತನದಿಂದ ಕಾಪಾಡಬೇಕು ಎಂದು ವಿನಂತಿ ಮಾಡಲಾಗಿದೆ. ಆದರೂ, ಪ್ರಕರಣಕ್ಕೆ ಸಂಬಂಧವಿಲ್ಲದ ವ್ಯಕ್ತಿಯ ಯೂಟ್ಯೂಬ್ ಚಾನೆಲ್‌ನಲ್ಲಿ ವಿಚಾರಣೆಯ ಮಾಹಿತಿ ಸಿಕ್ಕಿದೆ. ಎಲ್ಲಾ ಮಾಹಿತಿಯನ್ನು ಯೂಟ್ಯೂಬರ್ ಪೊಲೀಸರಿಂದ ಪಡೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಜುಲೈ 14 ರಂದು ಯೂಟ್ಯೂಬರ್ ಒಬ್ಬರು ವಿಡಿಯೋ ಗಮನಿಸಿದೆ ತನಿಖಾಧಿಕಾರಿಗಳು ಗೌಪ್ಯತೆಯ ಉಲ್ಲಂಘನೆ ಮಾಡಿದ್ದಾರೆ ಎಂದು ಹಿರಿಯ ವಕೀಲ ಕೆ.ವಿ ಧನಂಜಯ್ ಆರೋಪಿಸಿದ್ದಾರೆ. ಸಂಬಂಧವಿಲ್ಲದ ಯೂಟ್ಯೂಬರ್‌ಗೆ ಗೌಪ್ಯ ಮಾಹಿತಿ ನೀಡಿದ್ದು ಕಂಡಾಗ ನನಗೆ ಆಘಾತವಾಗಿದೆ ಎಂದು ಹಿರಿಯ ವಕೀಲ ಕೆ.ವಿ ಧನಂಜಯ್ ಹೇಳಿದ್ದಾರೆ. ನಿಯಮ ಉಲ್ಲಂಘಿಸಿದವರು ತನಿಖೆಯಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಕೆ.ವಿ ಧನಂಜಯ್ ಆರೋಪ ಮಾಡಿದ್ದಾರೆ. ಮಾಹಿತಿ ಸೋರಿಕೆಯ ಬಗ್ಗೆ ತುರ್ತು ಮತ್ತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕೆ.ವಿ ಧನಂಜಯ್ ಒತ್ತಾಯಿಸಿದ್ದಾರೆ.
ಧರ್ಮಸ್ಥಳದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಬಗ್ಗೆ ಕೇರಳದಲ್ಲಿ ನಿರ್ಣಯ ಅಂಗೀಕಾರ ಮಾಡಬೇಕು ಎಂದು ಕೆ.ವಿ.ಧನಂಜಯ್ ಒತ್ತಾಯಿಸಿದ್ದಾರೆ. ಈ ಪ್ರಕರಣದ ತನಿಖೆಯಲ್ಲಿ ಕೇರಳ ಪೊಲೀಸರೂ ಭಾಗಿಯಾಗುವಂತೆ ನಿರ್ಣಯ ಅಂಗೀಕರಿಸಿ ಎಂದು ಕೆ.ವಿ. ಧನಂಜಯ್ ಒತ್ತಾಯಿಸಿದ್ದಾರೆ. ಅಲ್ಲದೇ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಬೇಕು ಎಂದಿದ್ದಾರೆ.
Leave feedback about this