ಚಿಕ್ಕಮಗಳೂರು

ಧಾರ್ಮಿಕತೆ- ಸಂಸ್ಕಾರ ಉಳಿಯಲಿದೆ.- ಪ್ರಣವಾನಂದ ಸ್ವಾಮೀಜಿ

ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರದಲ್ಲಿ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಉತ್ಸವದಲ್ಲಿ ನಡೆದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯವಹಿಸಿ ಆಶೀರ್ವಾಚನ ನೀಡಿ ಮಾತನಾಡಿದ ಚಿತ್ತಾಪುರ ಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ದೇಶದ ರಕ್ಷಣೆಗೆ ಹೋರಾಟ ಮಾಡುತ್ತಿರುವ ನಮ್ಮ ಸೈನಿಕರಿಗೆ ತಾಯಿ ಮಾರಿಕಾಂಬಾ ಅರೋಗ್ಯ ಹಾಗೂ ಆಯುಷ್ಯ ನೀಡಲಿ ಎಂದು ಪ್ರಾರ್ಥಿಸಿ, ನಮ್ಮ ಹಿರಿಯರು ನಡೆಸಿಕೊಂಡು ಬಂದ ದೇಶದ ಪರಂಪರೆ ಉಳಿಸುವ ಜವಾಬ್ದಾರಿ ನಮ್ಮದು. ಇಂತಹ ಜಾತ್ರೆಗಳಲ್ಲಿ ಜಾತಿ -ಧರ್ಮ ಭೇದ ಮರೆತು ಎಲ್ಲರೂ ಒಂದಾಗಿ ತಲಾ ತಲಾಂತರದಿಂದ ಜಾತ್ರೆ ನಡೆಸಿಕೊಂಡು ಬಂದಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು. ನಮ್ಮ ಸನಾತನ ಧರ್ಮ ಉಳಿಯ ಬೇಕಾದರೆ ದೇವಸ್ಥಾನಗಳಲ್ಲಿ ಜಾತ್ರೆಗಳು ನಡೆಯುತ್ತಿರಬೇಕಿದೆ. ಧಾರ್ಮಿಕತೆ, ಸಾಂಸ್ಕೃತಿಕ ಸಂಸ್ಕಾರ ಉಳಿಯಲಿದೆ ಎಂದರು.

ಸಮಿತಿ ಅಧ್ಯಕ್ಷರಾದ ಪಿ.ಆರ್ ಸದಾಶಿವ ಮಾತನಾಡಿ, ಜಾತ್ರೆ ಇಷ್ಟು ಅದ್ಧೂರಿಯಾಗಿ ನಡೆಯಲು ಎಲ್ಲರೂ ಒಟ್ಟಾಗಿ ಹಗಲಿರುಳು ಕೆಲಸ ಮಾಡಿದ್ದಾರೆ. ಎಲ್ಲರಿಗೂ ನನ್ನ ಧನ್ಯವಾದಗಳು ಎಂದರು.

ಪಟ್ಟಣ ಪಂಚಾಯಿತಿ ಪ್ರಥಮ ಪ್ರಜೆ ಜುಬೇದ ಮಾತನಾಡಿ, ಎಲ್ಲಾ ಧರ್ಮಗಳು ಶಾಂತಿಯನ್ನೇ ಬಯಸುತ್ತವೆ ಸಂಪ್ರದಾಯಗಳನ್ನು ಪಾಲಿಸಿ ನಮ್ಮ ಧರ್ಮಗಳನ್ನು ಪ್ರೀತಿಸಿ ಧರ್ಮಗಳನ್ನು ಗಟ್ಟಿಗೊಳಿ ಸೋಣ ಎಂದರು.

ವಕೀಲರಾದ ಸುರೇಶ್ ಕುಮಾರ್, ಡಿ.ಸಿ ದಿವಾಕರ್ ಸೇರಿದಂತೆ ಹೆಚ್. ಎನ್ ರವಿಶಂಕರ್, ಪ್ರವೀಣ್, ರವಿಪ್ರಕಾಶ್, ಮಂಜುನಾಥ್ ಪೆರುಮಾಳ್, ಎನ್. ಎಂ. ಕಾರ್ತಿಕ್, ಶ್ರೀಧರ್ ಪಾನಿ, ಕೆ.ಟಿ. ಚಂದ್ರಶೇಖರ್, ಕೃಷ್ಣಮೂರ್ತಿ, ಪಿ.ಆರ್. ಸುಕುಮಾರ್, ಡಾ. ನಿಶಾಂತ್ ವಸಂತ್ ಕುಮಾರ್, ಎಂ.ಸಿ ಗುರುಶಾಂತಪ್ಪ ಹಾಗೂ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.