ಬೆಂಗಳೂರು

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಹಾಕಿರುವವುದು ದರ್ಶನ್, ಧನ್ವೀರ್ ಫ್ಯಾನ್

ಬೆಂಗಳೂರು:- ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಲ್ಲಿ ಓರ್ವ ಒಬ್ಬ ದರ್ಶನ್ ಫ್ಯಾನ್, ಮತ್ತೊಬ್ಬ ನಟ ಧನ್ವೀರ್ ಫ್ಯಾನ್ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಇನ್ನು ಬಂಧಿತ ಆರೋಪಿಯು ನಟಿ ರಮ್ಯಾಗೆ ತನ್ನ ಖಾಸಗಿ ಭಾಗದ ಅಂಗಗಳ ಫೋಟೋ ವಿಡಿಯೋಗಳನ್ನ ಕಳುಹಿಸಿದ್ದ ಎನ್ನಲಾಗಿದೆ.

ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ ಹಾಕಿ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ರಾಜೇಶ್, ರಮ್ಯಾಗೆ ಅಶ್ಲೀಲವಾಗಿ ಅತಿ ಹೆಚ್ಚು ಮೆಸೇಜ್ ಕಳುಹಿಸಿದ್ದ ಎಂದು ಪೊಲೀಸರ ತನಿಖೆಯ ವೇಳೆ ತಿಳಿದು ಬಂದಿದೆ. ಆರೋಪಿ ರಾಜೇಶ್ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿಯಾಗಿದ್ದಾನೆ. ತನ್ನದೇ ಖಾಸಗಿ ಅಂಗಾಂಗಗಳ ಫೋಟೋ ಕಳುಹಿಸಿ ರಾಜೇಶ್ ನಟಿ ರಮ್ಯಾಗೆ ಹಿಂಸೆ ನೀಡಿದ್ದ. ಅಲ್ಲದೇ ತನ್ನ ಖಾಸಗಿ ಭಾಗದ ಅಂಗಾಂಗಗಳ ವಿಡಿಯೋ ರಮ್ಯಾಗೆ ಕಳುಹಿಸಿದ. ಸದ್ಯ ಪೊಲೀಸರು ಮೊಬೈಲ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಟಿ ರಮ್ಯಾ ಅವರಿಗೆ ಅಶ್ಲೀಲ ಕಮೆಂಟ್ ವಿಚಾರವಾಗಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದರು. ಈ ಬೆನ್ನಲ್ಲೇ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಟಿ ರಮ್ಯಾಗೆ ಇಬ್ಬರು ನಟರ ಅಭಿಮಾನಿಗಳಾದ ಓಬಣ್ಣ ಮತ್ತು ಗಂಗಾಧರ್ ಧಮ್ಕಿ ಹಾಕಿ ಕೆಟ್ಟ ಕಾಮೆಂಟ್ಸ್ ಹಾಕಿದ್ದರು ಎನ್ನಲಾಗಿದೆ.

ರಮ್ಯಾ ಗೆ ಅಶ್ಲೀಲ ಮೆಸೇಜ್ ಹಾಕಿ, ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಮತ್ತೆ ಇಬ್ಬರನ್ನು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಜಾಲತಾಣದಲ್ಲಿ ಪೋಸ್ಟ್ ಹಾಕಿ ನಿಂದಿಸಿದ ಇಬ್ಬರು ಆರೋಪಿಗಳನ್ನು ಇದೀಗ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇತ್ತೀಚಿಗೆ ಸಿಸಿಬಿ ಸೈಬರ್ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಬಳ್ಳಾರಿ ಮೂಲದ ಒಬ್ಬ ಹಾಗೂ ಚಿತ್ರದುರ್ಗ ಮೂಲದ ಮತ್ತೊಬ್ಬನನ್ನು ಅರೆಸ್ಟ್ ಮಾಡಿದ್ದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video