ಚಿಕ್ಕಮಗಳೂರು:- ಎಲ್ಲರೂ ಪ್ರೀತಿ ವಿಶ್ವಾಸದಿಂದ ಸಹೋದರತ್ವದಿಂದ ಬಾಳುತ್ತಿದ್ದೀರಿ ಇದು ಹೀಗೆ ಮುಂದುವರೆಯಲಿ ಎಂದು ನಾನು ಆಶಿಸುತ್ತೇನೆ, ಮಸೀದಿಯ ಪ್ರಾಂಗಣ ಪ್ರಾರ್ಥನಾ ಮಂದಿರವನ್ನು ತುಂಬಾ ಚೆನ್ನಾಗಿ ನಿರ್ಮಾಣ ಮಾಡಿದ್ದೀರಿ ಮುಂಭಾಗದ ಮಹಾದ್ವಾರ ತುಂಬಾ ಉತ್ತಮ ವಿನ್ಯಾಸದಿಂದ ಮೂಡಿ ಬಂದಿದೆ, ಮುಂದಿನ ದಿನಗಳಲ್ಲಿ ನಡೆಯುವ ಸಭಾ ಕಾರ್ಯಕ್ರಮಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಾಂಗಣ ನಿರ್ಮಾಣ ಮಾಡಿದ್ದೀರಿ. ನನ್ನನ್ನು ನೀವುಗಳು ತುಂಬಾ ಪ್ರೀತಿ-ವಿಶ್ವಾಸದಿಂದ ಆಹ್ವಾನಿಸಿದ್ದೀರಿ ಆದುದರಿಂದ ನಿಮ್ಮ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಹಾಗಾಗಿ ನಿಮ್ಮ ಪ್ರೀತಿ ವಿಶ್ವಾಸ ನನ್ನನ್ನು ಇಲ್ಲಿಗೆ ಕರೆತಂದಿದೆ.
ನಾನು ಇಷ್ಟು ಚೆನ್ನಾಗಿ ಮಸೀದಿ ನವೀಕರಣ ಮಾಡಿದ್ದೀರಿ ಎಂದು ಗೊತ್ತಿರಲಿಲ್ಲ, ನನಗೂ ಕೂಡ ಈ ಮಸೀದಿಗೆ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಿದ್ದೀರಿ, ನಾನು ನನ್ನ ಕೈಲಾದ ಸೇವೆಯನ್ನ ನಿಮ್ಮ ಸಮುದಾಯದ ಮಸೀದಿಗೆ ಮಾಡಿದ್ದೇನೆ ಎನ್ನುವ ತೃಪ್ತಿ ನನಗಿದೆ. ನಾನು ವಿಧಾನ ಪರಿಷತ್ತಿನ ಸದಸ್ಯನಾದಂತಹ ಸಂದರ್ಭದಲ್ಲಿ ನರಸಿಂಹರಾಜಪುರದಲ್ಲಿ ಎಲ್ಲಾ ಜಾತಿ ಧರ್ಮದ ಮಸೀದಿ ಮಂದಿರ ಚರ್ಚ್ ಗಳಿಗೆ ನನ್ನ ವೈಯಕ್ತಿಕ ಅನುದಾನ ಹಾಗೂ ಸರ್ಕಾರದ ಅನುದಾನವನ್ನ ಶಕ್ತಿಮೀರಿ ಕೊಡಿಸಿದ್ದೇನೆ ಎನ್ನುವ ತೃಪ್ತಿ ನನಗಿದೆ. ನಾನು ಇಲ್ಲಿ ಯಾವುದೇ ರಾಜಕಾರಣ ಮಾಡಲು ಬಂದಿಲ್ಲ ನನ್ನ ಹುಟ್ಟೂರಿನ ಅಭಿವೃದ್ಧಿ ಆಗಬೇಕು ನನ್ನ ಹುಟ್ಟೂರಿನ ಜನ ಸಂತೋಷ ಶಾಂತಿ ನೆಮ್ಮದಿಯಿಂದ ಇರಬೇಕು ಎನ್ನುವುದು ನನ್ನ ಮಹಾದಾಸೆಯಾಗಿದೆ, ಅಂತಹ ಮಹಾದಾಸೆಗೆ ಊರಿನ ಜನ ಕೈಜೋಡಿಸಬೇಕು, ಜಿಲ್ಲೆಯ ನರಸಿಂಹರಾಜಪುರ ಕೋಮು ಸಾಮರಸ್ಯದ ಕೇಂದ್ರವಾಗಿದೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಅಣ್ಣತಮ್ಮಂದಿರಂತೆ ಬಾಳುತ್ತಿದ್ದಾರೆ. ಅದು ನನಗೆ ತುಂಬಾ ಸಂತೋಷ ತಂದಿದೆ ಎಂದು ಕರ್ನಾಟಕ ಸರ್ಕಾರದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ ಶ್ರೀನಿವಾಸ್ ಹೇಳಿದ್ದಾರೆ.
ಅವರು ಶುಕ್ರವಾರದಂದು ಪಟ್ಟಣದ ಜಾಮೀಯಾ ಮಸೀದಿಯ ನವೀಕರಣದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿ ನಂತರ ಮಸೀದಿಗೆ ಪ್ರಥಮವಾಗಿ ಆಗಮಿಸಿದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ ಶ್ರೀನಿವಾಸರವರನ್ನ ಮಸೀದಿ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. ಅವರೊಂದಿಗೆ ಪಿ ಆರ್ ಸದಾಶಿವ್, ಎಲ್ ಪ್ರಶಾಂತ್ ಶೆಟ್ಟಿ ಹಾಗೂ ಜುಬೇದಾ ರವರನ್ನು ಕೂಡ ಮಸೀದಿಯ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. ಜಾತಿ, ಧರ್ಮ ಮರೆತು ನರಸಿಂಹರಾಜಪುರದ ಸಾಕಷ್ಟು ಹಿಂದೂ ಸಮುದಾಯದವರು ಹಾಗೂ ಚರ್ಚಿನ ಫಾದರ್ ರವರು ಆಗಮಿಸಿ ಸಮಿತಿಯವರ ಸತ್ಕಾರವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಸೀದಿ ಸಮಿತಿಯ ಜಂಟಿ ಕಾರ್ಯದರ್ಶಿ ನವೀದ್ ಹುಸೇನ್ , ಧರ್ಮ ಗುರುಗಳಾದ ಮೌಲಾನಾ ಅಮ್ಜದ್ ಖಾನ್, ಸಮಿತಿಯ ಸದಸ್ಯರಾದ ಸುಹೇಲ್ ಅಹ್ಮದ್ ಮುನಾವರ್ , ಮುಜಬಿಲ್, ಕಾಸಿಮ್ ಖಾನ್, ಮನ್ಸೂರ್, ಸುಹಾನ್ ಅಹ್ಮದ್, ಸಲಿಕ್ ಅಹ್ಮದ್, ರಾಹಿಲ್ ಇಬ್ರಾಹಿಮ್, ಇತರೆ ಸದಸ್ಯರು ಮುಸಲ್ಮಾನ್ ಬಾಂಧದವರು ಉಪಸ್ಥಿತರಿದ್ದರು.
Leave feedback about this