ಚಿಕ್ಕಮಗಳೂರು

ನಿಖಿಲ್ ಕುಮಾರಸ್ವಾಮಿಯಿಂದ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಚಿಕ್ಕಮಗಳೂರು:- ಇಂದು ರಾಜ್ಯ ಜೆಡಿಎಸ್ ಪಕ್ಷದ ಯುವ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರು ಶೃಂಗೇರಿ ಕ್ಷೇತ್ರದ ಕೊಪ್ಪದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಫೋಟೋಗಳನ್ನು ಜೆಡಿಎಸ್ ಮುಖಂಡರುಗಳಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಇತ್ತೀಚಿಗೆ ಅಮ್ಮ ಫೌಂಡೇಶನ್ ವತಿಯಿಂದ ನಡೆದ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ, ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಾಲ್ಕು ಜನರಿಗೆ ಕನ್ನಡಕವನ್ನು ವಿತರಿಸಲಾಯಿತು. ಕೊಪ್ಪ ಬಂಟರ ಸಂಘದ ವತಿಯಿಂದ ಹಾಗೂ ಕೊಪ್ಪ ಜೆಡಿಎಸ್ ಘಟಕದ ಯುವಕರ ವತಿಯಿಂದ ನಿಖಿಲ್ ಕುಮಾರಸ್ವಾಮಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ, ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾದ ಸುಧಾಕರ್ ಎಸ್.ಶೆಟ್ಟಿ, ಜೆಡಿಎಸ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಅಜಿತ್ ರಂಜನ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷರಾದ ರಶ್ಮಿ ರಾಮೇಗೌಡ್ರು, ಜೆಡಿಎಸ್ ಶೃಂಗೇರಿ ಕ್ಷೇತ್ರ ಅಧ್ಯಕ್ಷರಾದ ದಿವಾಕರ್ ಭಟ್, ಶೃಂಗೇರಿ ಕೋರ್ ಕಮಿಟಿ ಅಧ್ಯಕ್ಷರಾದ ಹೆಚ್ ಜಿ ವೆಂಕಟೇಶ್, ತಾಲ್ಲೂಕು ಅಧ್ಯಕ್ಷರಾದ ಭರತ್‌ ಗಿಣಿಕಲ್, ಕಗ್ಗ ರಾಮಸ್ವಾಮಿ ಚಂದ್ರಶೇಖರ್, ಬಾಳೆಹೊನ್ನೂರು ಖಾಂಡ್ಯ ಘಟಕದ ಅಧ್ಯಕ್ಷರಾದ ಗೋವಿಂದೇಗೌಡ್ರು, ದೀಪಕ್ ಕೊಳಲೆ, ಹಿರಿಯ ಮುಖಂಡರಾದ ಮಂಜುನಾಥ್ ಗಂಡ್ಗಟ್ಟ, ವಿನಯ್ ಕಣಿವೆ, ಉದಯ್ ಸುವರ್ಣ, ಬದ್ರಿಯಾ ಮೊಹಮ್ಮದ್, ದಫ್ ಮೊಹಮ್ಮದ್ ಸೇರಿದಂತೆ ಸುಮಾ ಹಾಗೂ ಹಲವು ಗಣ್ಯರು, ಕಾರ್ಯಕರ್ತರು ಭಾಗಿಯಾಗಿದ್ದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video