ಮಂಗಳೂರು:- ಸಂವಿಧಾನದ ಹತ್ತನೆ ಅಧಿಸೂಚಿಯ ಅಡಿಯಲ್ಲಿ ಸಭಾಧ್ಯಕ್ಷರ ಅಧಿಕಾರ ಮತ್ತು ನಿಯಮಗಳನ್ನು ಪರಿಶೀಲನೆ ಮಾಡುವ ರಾಷ್ಟ್ರೀಯ ಸಮಿತಿಗೆ ಶಾಸಕ ಯು.ಟಿ ಖಾದರ್ ಫರೀದ್ ರವರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ರಾಷ್ಟ್ರೀಯ ಸಮಿತಿಯಲ್ಲಿ ವಿವಿಧ ರಾಜ್ಯಗಳ ಕೇವಲ ನಾಲ್ಕು ಮಂದಿ ಮಾತ್ರ ಸ್ಪೀಕರ್ ಗಳಿದ್ದು, ಕರ್ನಾಟಕ ಮತ್ತು ಅದರಲ್ಲೂ ಮಂಗಳೂರಿನ ಕ್ಷೇತ್ರದ ಜನತೆಗೆ ಇದೊಂದು ಹೆಮ್ಮೆ ಹಾಗೂ ಸಂತೋಷದ ಸುದ್ದಿಯಾಗಿದೆ.
ಮಹಾಠಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಈ ಸಮಿತಿಯ ಅಧ್ಯಕ್ಷರಾಗಿದ್ದು, ಒಡಿಶಾ ಸ್ಪೀಕರ್ ಸುರಮ ಪಾದಿ, ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ಫರೀದ್, ನಾಗಲ್ಯಾಂಡ್ ಸ್ಪೀಕರ್ ಷರಿಂಗೈನ್ ಲಾಂಗ್ ಕುಮೆರ್ ಸೇರಿದಂತೆ ಈ ಮೂವರು ರಾಷ್ಟ್ರೀಯ ಸಮಿತಿ ಸದಸ್ಯರಾಗಿದ್ದಾರೆ. ಕರ್ನಾಟಕ ವಿಧಾನಸಭೆಗೆ ಚುರುಕು ಮುಟ್ಟಿಸಿ ಅಮೂಲಾಗ್ರ ಬದಲಾವಣೆ ತಂದಿರುವ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರಿಗೆ ಈ ಸ್ಥಾನ ಅರ್ಹವಾಗಿಯೇ ಸಂದಿವೆ.