ಬೆಂಗಳೂರು

ಪವರ್ ಸ್ಟಾರ್ ಹುಟ್ಟುವ ಮೊದಲೇ ಹೇಳಿದ್ದ ಮಾತು ಈಗ ಬಹಿರಂಗ.!

ಬೆಂಗಳೂರು:- ಹಿರಿಯ ನಟಿ ಬಿ.ಸರೋಜಾದೇವಿ ಅವರು ಪಾರ್ವತಮ್ಮನವರಿಗೆ ಪವರ್ ಸ್ಟಾರ್ ಹುಟ್ಟೋ ಬಗ್ಗೆ ಮೊದಲೇ ಹೇಳಿದ್ದರು ಎಂಬ ಮಾತು ಬಹಿರಂಗವಾಗಿದೆ.

ಡಾ.ರಾಜ್‌ ಹಾಗೂ ಪಾರ್ವತಮ್ಮ ದಂಪತಿಗಳಿಗೆ ಎರಡು ಹೆಣ್ಣು ಹಾಗು 3 ಗಂಡು ಮಕ್ಕಳು, ಅದರಲ್ಲಿ ಪಾರ್ವತಮ್ಮನವರು ಮೂರನೇ ಗಂಡು ಮಗುವಿಗೆ ಬಸುರಿ ಆಗಿದ್ದ ಸಂದರ್ಭ. ಅಂದರೆ, ಪುನೀತ್ ರಾಜ್‌ಕುಮಾರ್ ಹುಟ್ಟುವ ಸಮಯದ ಕಥೆ ಇದು. ಬಸುರಿಯಾಗಿದ್ದ ಪಾರ್ವತಮ್ಮನವರು ಅಂದು ಸಿನಿಮಾ ಶೂಟಿಂಗ್ ಸೆಟ್‌ಗೆ ಬಂದಿದ್ದರಂತೆ. ಸೀದಾಸಾದಾ ಬಂದಿರುವುದಲ್ಲ, ಆ ವೇಳೆ ಭಾರವನ್ನು ಹೊತ್ತು ತಂದು ಸುಸ್ತಾಗಿದ್ದರಂತೆ.

ಅಣ್ಣಾವ್ರ ಶೂಟಿಂಗ್‌ ಸೆಟ್‌ಗೆ ಪಾರ್ವತಮ್ಮ ಊಟ ತರುತ್ತಿದ್ದರಂತೆ. ಅದೂ ಕೂಡ ಅಲ್ಪಸ್ವಲ್ಪವಲ್ಲ, ಜಾಸ್ತಿನೇ ಭಾರ ಹೊತ್ತು ತಂದಿದ್ದರು. ತಂದಿಟ್ಟವರೇ ಸುಸ್ತಾಗಿ ಒಂದು ಕಡೆ ಕುಳಿತುಬಿಟ್ಟರಂತೆ. ಆ ವೇಳೆ ಅಲ್ಲಿದ್ದ ಹಿರಿಯ ನಟಿ ಸರೋಜಾದೇವಿಯವರು ಅದನ್ನು ಗಮನಿಸಿದರಂತೆ. ಆಗ ಪಾರ್ವತಮ್ಮನವರು ನಾನು ಗರ್ಭಿಣಿ ಆಗಿರುವೆ. ಅದಕ್ಕೇ ಸುಸ್ತಾಗಿದೆ ಎಂದರಂತೆ.

ಆ ಮಾತು ಕೇಳಿದ ನಟಿ ಸರೋಜಾದೇವಿಯವರು ಹೌದಾ ಅಮ್ಮಾ ಈ ಪರಿಸ್ಥಿತಿಯಲ್ಲೂ ನೀವು ಇಷ್ಟೊಂದು ಕಷ್ಟಪಟ್ಟು ಊಟ ತಂದಿದ್ದೀರಾ, ನಿಮಗೆ ದೊಡ್ಡ ಸ್ಟಾರ್ ಆಗುವಂಥ ಸಂತಾನವೇ ಆಗುತ್ತೆ ನೋಡಿ ಎಂದಿದ್ದಾರೆ. ಅದರಂತೆ ಹುಟ್ಟಿದವರು ಪುನೀತ್ ರಾಜ್‌ಕುಮಾರ್. ಬಾಲನಟರಾಗಿಯೇ ಬಣ್ಣಹಚ್ಚಿದ್ದ ಪುನೀತ್ ಅದೆಷ್ಟು ಬೆಳೆದರು, ಕನ್ನಡದ ಸ್ಟಾರ್ ನಟರಾಗಿ ಮೆರೆದರು ಎಂಬುದು ಈಗ ಇತಿಹಾಸ. ಆದರೆ, ಅಂದೇ ಆ ಬಗ್ಗೆ ಭವಿಷ್ಯ ನುಡಿದಿದ್ದರು. ದೇವಿಯವರ ಬಾಯಿಂದ ಬಂದ ಅ ಮಾತು ಇಂದು ನಿಜವಾಗಿದೆ.