ದೊಡ್ಡ ಬಳ್ಳಾಪುರ:- ಇತ್ತೀಚಿನ ದಿನಗಳಲ್ಲಿ ಯಾವುದೇ ಸಂಬಂಧಕ್ಕೂ ಬೆಲೆಯೇ ಇಲ್ಲದಂತಾಗಿದೆ. ಪಾಠ ಹೇಳಿಕೊಟ್ಟ ಶಿಕ್ಷಕನೊಬ್ಬ ವಿದ್ಯಾರ್ಥಿನಿಯೊಂದಿಗೆ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನ ಶಿಕ್ಷಕ ವಿದ್ಯಾರ್ಥಿ ಜೊತೆ ಎಸ್ಕೇಪ್ ಆಗಿದ್ದು, ಆ ಕಾಲೇಜಿನಲ್ಲಿ ಕನ್ನಡ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ 45 ವರ್ಷದ ಪ್ರವೀಣ್ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಿದ್ದಾನೆ. ಸುಮಾರು 15 ವರ್ಷಗಳಿಂದ ಅದೇ ಕಾಲೇಜಿನಲ್ಲಿ ಪ್ರವೀಣ್ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿನಿಗೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ. ಆದರೆ, ವಿದ್ಯಾರ್ಥಿನಿಗೆ ಮದುವೆ ಇಷ್ಟವಿಲ್ಲದ ಕಾರಣದಿಂದ ಶಿಕ್ಷಕನ ಜೊತೆಯಲ್ಲಿ ಪರಾರಿಯಾಗಿದ್ದು, ಆಗಸ್ಟ್ 2 ರಂದು ವಿದ್ಯಾರ್ಥಿನಿ ಮನೆ ಬಿಟ್ಟು ಹೋಗಿದ್ದಾಳೆ.
ಮೊದಲ ಹೆಂಡತಿಗೆ ಡಿವೋರ್ಸ್ ನೀಡದ ಶಿಕ್ಷಕ: ಇನ್ನು ಶಿಕ್ಷಕ ಹಾಗೂ ಯುವತಿ ಆಗಸ್ಟ್ 2ರಂದು ಮನೆ ಬಿಟ್ಟು ದೆಹಲಿಗೆ ಹೋಗಿ ವಾಪಸ್ ಬಂದಿದ್ದಾರೆ. ನಂತರ ನಂಜನಗೂಡಿನ ಲಾಡ್ಜ್ ನಲ್ಲಿ ವಾಸವಿದ್ದರು. ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಶಿಕ್ಷಕ ವಿವಾಹಿತನಾಗಿದ್ದು, ಮೊದಲ ಹೆಂಡತಿಗೆ ಡಿವೋರ್ಸ್ ನೀಡದೇ ಯುವತಿ ಜೊತೆ ಓಡಿ ಹೋಗಿದ್ದು, ಮೊದಲನೆಯ ಹೆಂಡತಿಗೆ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ. ಶಿಕ್ಷಕನ ಹೆಂಡತಿ ವರದಕ್ಷಿಣೆ ಕಿರುಕುಳ ಎಂದು ಆರೋಪ ಮಾಡಿದ್ದು, ಸದ್ಯ ದೊಡ್ಡಬಳ್ಳಾಪುರ ಮಹಿಳಾ ಪೋಲೀಸ್ ಠಾಣೆಗೆ ಪತ್ನಿ ದೂರು ನೋಡಿದ್ದಾರೆ.
Leave feedback about this