ಬೆಂಗಳೂರು

ಪ್ಯಾನ್ ಇಂಡಿಯಾ: ಕನ್ನಡಕ್ಕೆ ಡಬ್ ಆದ ಸಿನಿಮಾಗಳು

ಬೆಂಗಳೂರು:- ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಇರಲಿಲ್ಲ, ಸ್ಯಾಂಡಲ್‌ವುಡ್‌ನಲ್ಲಿ ಕನ್ನಡಕ್ಕೆ ಡಬ್ ಆದ ಪರಭಾಷೆಯ ಸಿನಿಮಾಗಳು ರಿಲೀಸ್ ಮಾಡುವುದಕ್ಕೆ ಬಿಡುತ್ತಿರಲಿಲ್ಲ. ಡಾ.ರಾಜಕುಮಾರ್ ರವರಿಂದ ಹಿಡಿದು ಇಡೀ ಚಿತ್ರರಂಗವೇ ಡಬ್ಬಿಂಗ್ ಇದರ ವಿರುದ್ಧ ನಿಂತಿತ್ತು. ಆದರೆ, ಡಬ್ಬಿಂಗ್ ಸಿನಿಮಾಗಳನ್ನು ಬೇಕು ಅಂತ ಒಂದು ಅಭಿಯಾನವೇ ನಡೀತು. ಆ ಹೋರಾಟವೇ ಫಲವೇ ಪ್ಯಾನ್ ಇಂಡಿಯಾ ಸಿನಿಮಾಗಳು ಕನ್ನಡಕ್ಕೆ ಡಬ್ ಮಾಡಿ ರಿವೀಲ್ ಮಾಡಲಾಗುತ್ತಿದೆ.

ಆರಂಭದಲ್ಲಿ ಕನ್ನಡಕ್ಕೆ ಡಬ್ ಮಾಡಿದ ಸಿನಿಮಾಗಳಿಗೆ ಹೆಚ್ಚು ಬೇಡಿಕೆ ಇರಲಿಲ್ಲ, ಕನ್ನಡಿಗರು ಕೂಡ ನಿರಾಸಕ್ತಿಯನ್ನು ತೋರಿದ್ದರು. ಒರಿಜಿನಲ್ ಭಾಷೆಯಲ್ಲಿಯೇ ಸಿನಿಮಾವನ್ನು ನೋಡುವುದಕ್ಕೆ ಇಷ್ಟ ಪಡುತ್ತಿದ್ದರು. ಹೀಗಾಗಿ ವಿತರಕರು ಕೂಡ ಕನ್ನಡಕ್ಕಿಂತ ಹೆಚ್ಚಾಗಿ ಓರಿಜಿನಲ್ ಭಾಷೆಯ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಮುಂದಾದರು. ಇದು ಪರಭಾಷೆಯ ಸಿನಿಮಾಗಳನ್ನು ಕನ್ನಡದಲ್ಲಿ ನೋಡಬೇಕು ಎಂದು ಇಷ್ಟ ಪಟ್ಟವರಿಗೆ ಮತ್ತೆ ನಿರಾಸೆಯಾಗಿತ್ತು.

ಅದ್ಯಾವಾಗ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಶುರುವಾಯ್ತೋ, ಅಲ್ಲಿಂದ ಮತ್ತೆ ಕನ್ನಡಕ್ಕೆ ಡಬ್ ಆದ ಸಿನಿಮಾಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳು ಕನ್ನಡಕ್ಕೆ ಡಬ್ ಮಾಡುವುದಕ್ಕೆ ಆಸಕ್ತಿಯನ್ನು ತೋರಿಸುತ್ತಿದೆ.

ಕನ್ನಡಕ್ಕೆ ಡಬ್ ಆದ ಸಿನಿಮಾಗಳಿಗೆ ಆರಂಭದ ದಿನಗಳಲ್ಲಿ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಆದರೆ, ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣ ಸಂಸ್ಥೆ ಕ್ವಾಲಿಟಿ ಕಡೆಗೆ ಹೆಚ್ಚು ಗಮನ ಹರಿಸುವುದಕ್ಕೆ ಶುರು ಮಾಡಿದ್ದವು. ಕೆಲವು ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿದ್ದರೂ, ಕರ್ನಾಟಕದ ಕೆಲವು ವಿತರಕರೇ ಕನ್ನಡದಲ್ಲಿ ರಿಲೀಸ್ ಮಾಡುವುದಕ್ಕೆ ಹಿಂದೇಟು ಹಾಕಿದ್ದರು. ಆ ವೇಳೆ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ನಡಕ್ಕೆ ಡಬ್ ಆದ ಸಿನಿಮಾಗಳ ಸ್ಕ್ರೀನ್‌ಗಳನ್ನು ಹೆಚ್ಚಿಸಲಾಯ್ತು. ಈಗ ಅದಕ್ಕೆ ಪ್ರತಿಫಲ ಸಿಗುತ್ತಿದೆ. ಇದೂವರೆಗೂ ರಿಲೀಸ್ ಆಗಿರುವ ಕನ್ನಡಕ್ಕೆ ಡಬ್ ಆದ ಕೆಲವು ಸಿನಿಮಾಗಳ ಕರ್ನಾಟಕ ಕಲೆಕ್ಷನ್ ಹೀಗಿದೆ.

ಕರ್ನಾಟಕದ ವಿತರಕರ ಪ್ರಕಾರ, ‘ಸೈರಾ ನರಸಿಂಹ ರೆಡ್ಡಿ’ಯಿಂದ ಹಿಡಿದು ಇತ್ತೀಚೆಗೆ ತೆಗೆಕಂಡ ಹಿಟ್: ಕೇಸ್ 3 ವರೆಗೂ ಕನ್ನಡಕ್ಕೆ ಡಬ್ ಆದ ಸಿನಿಮಾಗಳ ಕಲೆಕ್ಷನ್.

ಸೈರಾ ನರಸಿಂಹ ರೆಡ್ಡಿ ₹93 ಲಕ್ಷ (Net) ₹41 ಲಕ್ಷ ಶೇರ್, ದರ್ಬಾರ್ ₹59 ಲಕ್ಷ (Net) ₹33 ಲಕ್ಷ ಶೇರ್, ಜೈಲರ್ ₹4.5 ಕೋಟಿ (Net) ₹2 ಕೋಟಿ ಶೇರ್, RRR ₹3 ಕೋಟಿ (Net) ₹1.3 ಕೋಟಿ (share),

ಪುಷ್ಪ 2 ₹4.5 ಕೋಟಿ (Net) ₹2 ಕೋಟಿ (share).

ಇನ್ನು 2025ರಲ್ಲಿ ಕೆಲವು ಪರಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗಿದ್ದವು. ಅವುಗಳ ಬಾಕ್ಸಾಪೀಸ್ ಕಲೆಕ್ಷನ್ ಅನ್ನು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಆ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ.

ಗೇಮ್ ಚೇಂಜರ್ ₹57 ಲಕ್ಷ, ಎಲ್ 2: ಎಂಪುರಾನ್ ₹27 ಲಕ್ಷ, ಹಿಟ್: ದಿ ಥರ್ಡ್ ಕೇಸ್ ₹63 ಲಕ್ಷ