ಹಾಸನ:- ಪ್ರಜ್ವಲ್ ರೇವಣ್ಣ ಪ್ರಕರಣದ ತೀರ್ಪು ಬಂದಾಗಿನಿಂದ ಅವರು ಕುಟುಂಬಸ್ಥರು ಯಾರೂ ಪ್ರತಿಕ್ರಿಯೆ ನೀಡಿರಲಿಲ್ಲ. ತೀರ್ಪು ಪ್ರಕಟಿಸಿದ ದಿನವೂ ಪ್ರಜ್ವಲ್ನ ನೋಡಲು ಕೋರ್ಟ್ಗೂ ಬಂದಿರಲಿಲ್ಲ. ಇತ್ತೀಚೆಗೆ ನಿಖಿಲ್ ಕುಮಾರಸ್ವಾಮಿ ಮಾತ್ರವೇ ಪ್ರಜ್ವಲ್ ಕೇಸ್ ಬಗ್ಗೆ ಮಾತನಾಡಿ, ಕಾನೂನಿಗೆ ತಲೆಬಾಗಬೇಕು ಎಂದಿದ್ದರು. ಇದೀಗ ತನ್ನ ನೇರ ಸಹೋದರ ಸೂರಜ್ ರೇವಣ್ಣ ಅವರು ಪ್ರಜ್ವಲ್ ಕೇಸ್ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ತಮ್ಮ ಮುಂದಿನ ನಡೆ ಏನು ಎಂಬುದನ್ನು ತಿಳಿಸಿದ್ದಾರೆ.
ಸಹೋದರ ಪ್ರಜ್ವಲ್ ರೇವಣ್ಣ ಅವರ ಕೇಸ್ನಲ್ಲಿ ಕೋರ್ಟ್ನಿಂದ ತೀರ್ಪು ಬಂದಿದೆ. ಇದನ್ನು ಪ್ರಶ್ನಿಸಿ ಮೇಲಿನ ಹಂತದ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ. ಹಾಗಾಗಿ ಅದರ ಬಗ್ಗೆ ಏನೂ ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಹಾಗಾಗಿ ನಾವು ಯಾರೂ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದಿದ್ದಾರೆ. ಇನ್ನು ಕೋರ್ಟ್ನಲ್ಲಿ ಪ್ರಜ್ವಲ್ ಪರ ವಕೀಲರು ಸರಿಯಾಗಿ ವಾದ ಮಂಡಿಸಿಲ್ವಾ? ಎಂಬ ಪ್ರಶ್ನೆಗೂ ಸೂರಜ್ ಉತ್ತರ ಕೊಡಲಿಲ್ಲ. ಆದರೆ, ಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಪ್ರಜ್ವಲ್ ಕುಟುಂಬ ಸಿದ್ಧತೆ ನಡೆಸಿರುವುದು ಖಚಿತವಾಗಿದೆ.
Leave feedback about this