Uncategorized

ಪ್ರಿಯಾಂಕಾ ವಾದ್ರಾ ಆರೋಪಕ್ಕೆ ಇಸ್ರೇಲ್‌ನ ರಾಯಭಾರಿ ರುವೆನ್ ಅಜರ್ ಕೌಂಟರ್

ದೆಹಲಿ:- ಇಸ್ರೇಲ್ ಸೇನೆ ಪ್ಯಾಲೆಸ್ತೀನ್‌ನಲ್ಲಿ ನರಮೇಧ ನಡೆಸುತ್ತಿದ್ದು, 60 ಸಾವಿರ ಸೈನಿಕರನ್ನು ಹತ್ಯೆಗೈಯ್ಯಲಾಗಿದೆ ಎಂಬ ಸಂಸದೆ ಪ್ರಿಯಾoಕಾ ಗಾಂಧಿ ವಾದ್ರಾ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಪ್ರಿಯಾಂಕಾ ವಾದ್ರಾ ಆರೋಪಕ್ಕೆ ಭಾರತದ ಇಸ್ರೇಲ್‌ನ ರಾಯಭಾರಿ ರುವೆನ್ ಅಜರ್ ಕೌಂಟರ್ ನೀಡಿದ್ದಾರೆ.

ಪ್ರಿಯಾoಕಾ ವಿರುದ್ಧ ಕಿಧಿಕಾರಿರೋ ಅಜರ್, ನಿಮ್ಮ ಸುಳ್ಳಿನ ಹೇಳಿಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಇಸ್ರೇಲ್ 25,000 ಹಮಾಸ್ ಉಗ್ರರನ್ನು ಕೊಂದಿದೆ. ನಾಗರಿಕರ ಹಿಂದಿರುವ ಹಮಾಸ್‌ನ ಹೀನಾಯ ತಂತ್ರಗಳು, ಸ್ಥಳಾಂತರ ಅಥವಾ ನೆರವಾಗಲು ಪ್ರಯತ್ನಿಸುತ್ತಿರುವ ಜನರ ಮೇಲೆ ಗುಂಡಿನ ದಾಳಿ ಮತ್ತು ಅವರ ರಾಕೆಟ್ ದಾಳಿಯಿಂದ ಜನರು ಜೀವ ತೆತ್ತಬೇಕಾಗಿದೆ. ಅಲ್ಲದೇ ಇಸ್ರೇಲಿನ ಮಾನವೀಯ ನೆರವಿನ ಕಾರ್ಯವನ್ನು ಉಲ್ಲೇಖಿಸಿರುವ ಅವರು, ಇಸ್ರೇಲ್ ಗಾಜಾಕ್ಕೆ 2 ಮಿಲಿಯನ್ ಟನ್ ಪದಾರ್ಥಗಳನ್ನು ಪೂರೈಸಿದೆ. ಆದರೆ, ಹಮಾಸ್ ಅವರನ್ನು ಪ್ರತ್ಯೇಕಿಸಲು ಪ್ರಯತ್ನಿಸುತ್ತಿದೆ. ಆ ಮೂಲಕ ಹಸಿವನ್ನು ಸೃಷ್ಟಿಸುತ್ತಿದೆ. ಕಳೆದ 50 ವರ್ಷಗಳಲ್ಲಿ ಗಾಜಾ ಜನಸಂಖ್ಯೆಯು ಶೇ. 450 ರಷ್ಟು ಬೆಳೆದಿದೆ.ಅಲ್ಲಿ ಯಾವುದೇ ನರಮೇಧ ನಡೆದಿಲ್ಲ ಎಂದು ಹೇಳಿದ್ದಾರೆ.

ಪ್ರಿಯಾಂಕಾ ವಿವಾದ ಏನು: ಇಸ್ರೇಲ್ ದೇಶ ನರಮೇಧ ಮಾಡುತ್ತಿದೆ. 60,000 ಕ್ಕೂ ಹೆಚ್ಚು ಜನರನ್ನು ಹತ್ಯೆಗೈದಿದೆ. ಅವರಲ್ಲಿ 18,430 ಮಕ್ಕಳು ಸೇರಿದ್ದಾರೆ. ಅನೇಕ ಮಕ್ಕಳು ಸೇರಿದಂತೆ ನೂರಾರು ಜನರು ಹಸಿವಿನಿಂದ ಸಾಯುವಂತೆ ಮಾಡಿದೆ. ಲಕ್ಷಾಂತರ ಜನರನ್ನು ಹಸಿವಿನಿಂದ ಸಾಯಿಸುವ ಬೆದರಿಕೆ ಹಾಕುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದರು. ಅಲ್ಲದೇ, ಈ ವಿಚಾರದಲ್ಲಿ ಜಾಗತಿಕ ಮೌನವನ್ನು ಖಂಡಿಸಿದ ಪ್ರಿಯಾಂಕಾ ಗಾಂಧಿ, ಇಸ್ರೇಲ್ ಪ್ಯಾಲೆಸ್ತೀನ್ ಜನರ ಈ ವಿನಾಶಕಾರಿ ಕ್ರಮದ ವಿರುದ್ಧ ಭಾರತ ಸರ್ಕಾರ ಮೌನವಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದ್ದರು.

ಇನ್ನು, ಭಾರತೀಯ ಸೇನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬಗ್ಗೆ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದು, ಯಾರು ನಿಜವಾದ ಭಾರತೀಯರು ಎಂದು ಸುಪ್ರೀಂ ಕೋರ್ಟ್ ನಿರ್ಧರಿಸಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ.

ಗಲ್ವಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಸೈನಿಕರ ಬಗ್ಗೆ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದ್ದು, ನೀವು ನಿಜವಾದ ಭಾರತೀಯ ವ್ಯಕ್ತಿ ಈ ರೀತಿ ಮಾತನಾಡುವುದಿಲ್ಲ ಛೀಮಾರಿ ಹಾಕಿತ್ತು.

ಇದೀಗ ಸಹೋದರನ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಗಾಂಧಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಯಾರು ಯಾರು ನಿಜವಾದ ಭಾರತೀಯರು ಎಂದು ನಿರ್ಧರಿಸಲು ಸಾಧ್ಯವಿಲ್ಲ. ತನ್ನ ಸಹೋದರನಿಗೆ ಸೇನೆಯ ಬಗ್ಗೆ ಅತ್ಯುನ್ನತ ಗೌರವವಿದೆ ಮತ್ತು ಸೇನೆಯ ವಿರುದ್ಧ ಎಂದಿಗೂ ಕೀಳಾಗಿ ಮಾತನಾಡುವುದಿಲ್ಲ ಎಂದು ಹೇಳಿದರು.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ರಾಹುಲ್ ಗಾಂಧಿ ಅವರ ಕರ್ತವ್ಯ. ಹೀಗಿರುವ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ಈ ರೀತಿ ಹೇಳಿಕೆ ನೀಡುವುದು ನಿಜಕ್ಕೂ ಸರಿಯಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.

ವಿರೋಧ ಪಕ್ಷದ ನಾಯಕನಾದ ಮೇಲೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ರಾಹುಲ್ ಗಾಂಧಿಗೆ ಇದೆ. ಅದರೆ ಇದು ಕೇಂದ್ರ ಸರ್ಕಾರಕ್ಕೆ ಇಷ್ಟವಾಗುತ್ತಿಲ್ಲ.. ಅಲ್ಲದೇ ರಾಹುಲ್ ಅವರ ಪ್ರಶ್ನೆಗೆ ಅವರ ಬಳಿ ಉತ್ತರಗಳೇ ಇಲ್ಲ. ಅದಕ್ಕಾಗಿಯೇ ಅವರು ಈ ಎಲ್ಲಾ ತಂತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದರು.

ಸಂಸತ್ತನ್ನು ನಡೆಸುವುದು ಎಷ್ಟು ಕಷ್ಟ: ರಾಹುಲ್ ಗಾಂಧಿ ಸಂಸತ್ತನ್ನು ನಡೆಸಲು ಸಾಧ್ಯವಾಗದಷ್ಟು ದುರ್ಬಲರಾಗಿದ್ದಾರೆಯೇ? ಇಡೀ ವಿರೋಧ ಪಕ್ಷಗಳು ಒತ್ತಾಯಿಸುವ ಒಂದು ವಿಷಯದ ಬಗ್ಗೆ ಅವರು ಚರ್ಚೆಗಳನ್ನು ಏಕೆ ನಡೆಸಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಪ್ರಶ್ನಿಸಿದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video