ಬೆಂಗಳೂರು

ಬಮೂಲ್ ನೂತನ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ಆಯ್ಕೆ

ಬೆಂಗಳೂರು:- ಬಮೂಲ್ ನೂತನ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಆಯ್ಕೆಯಾಗಿದ್ದಾರೆ. ಬೆಂಗಳೂರು ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಡಿ.ಕೆ ಸುರೇಶ್ ಆಯ್ಕೆಯಾಗಿದ್ದಾರೆ ಒಕ್ಕೂಟದ ಸದಸ್ಯರು ಹಾಗೂ ಚುನಾಯಿತರಿಂದ ಡಿ.ಕೆ ಸುರೇಶ್ ಆಯ್ಕೆಯಾಗಿದ್ದಾರೆ.

ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಸುರೇಶ್ ಇಂದು ನಾಮಪತ್ರ ಸಲ್ಲಿಸಲಿದ್ದರು. ಬೆಂಗಳೂರು ಡೇರಿ ವೃತ್ತದಲ್ಲಿರುವ ಕಚೇರಿಯಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದು, ಒಟ್ಟು 14 ನಿರ್ದೇಶಕರನ್ನು ಬಮೂಲ್ ಒಳಗೊಂಡಿದೆ. ಈ ವೇಳೆ ಬಮೂಲ್ ಕಚೇರಿಯ ಬಳಿ ಸಿಹಿ ಹಂಚಿ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು. ಡಿ.ಕೆ ಸುರೇಶ್ ಅವರಿಗೆ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.