ಬೆಂಗಳೂರು

ಬಾನು ಮುಷ್ತಾಕ್ ಅವರ ಆಯ್ಕೆಗೆ ನಾನು ವಿರೋಧ ವ್ಯಕ್ತಪಡಿಸುವುದಿಲ್ಲ.- ಹೆಚ್ಡಿಕೆ

ಬೆಂಗಳೂರು:- ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಬಾರದು, ಬೇರೆ ಯಾರಾದರೂ ಗಣ್ಯರು ದಸರಾ ಉದ್ಘಾಟನೆ ಮಾಡಬೇಕು ಇಲ್ಲವೇ ಈ ಹಿಂದೆ ಬಾನು ಮುಷ್ತಾಕ್ ಅವರು ಯಾವ ಅರ್ಥದಲ್ಲಿ ತಾಯಿ ಭುವನೇಶ್ವರಿಯ ಬಗ್ಗೆ ಮಾತನಾಡಿದ್ದಾರೆ ಹಾಗೂ ತಾಯಿ ಚಾಮುಂಡೇಶ್ವರಿಯ ಬಗ್ಗೆ ಬಾನು ಅವರ ನಿಲುವೇನು ಎನ್ನುವುದನ್ನು ತಿಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಆದರೆ, ಎಚ್‌.ಡಿ ಕುಮಾರಸ್ವಾಮಿ ಅವರು ಈ ವಿಚಾರದಲ್ಲಿ ಭಿನ್ನ ನಿಲುವು ತೆಗೆದುಕೊಂಡಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಲೇಖಕಿ ಬಾನು ಮುಷ್ತಾಕ್ ಅವರ ಆಯ್ಕೆಗೆ ನಾನು ವಿರೋಧ ವ್ಯಕ್ತಪಡಿಸುವುದಿಲ್ಲ ಎಂದಿದ್ದಾರೆ. ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇವತೆ ಹಿಂದೂಗಳ ಆಸ್ತಿ ಅಲ್ಲ ಎನ್ನುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಈ ಹೇಳಿಕೆ ಉದ್ಧಟತದ ಪ್ರದರ್ಶನ ಎಂದಿದ್ದಾರೆ.

ಚಾಮುಂಡೇಶ್ವರಿ ಬೆಟ್ಟದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿರುವುದಕ್ಕೆ ರಿಯಾಕ್ಟ್‌ ಮಾಡಿರುವ ಎಚ್. ಡಿ ಕುಮಾರಸ್ವಾಮಿ ಅವರು ದಸರಾ ಉದ್ಘಾಟನೆಗೆ ಸಾಹಿತಿ ಭಾನು ಮಸ್ತಾಕ್‌ ಅವರನ್ನು ಆಹ್ವಾನಿಸಿರುವುದಕ್ಕೆ ನಮ್ಮ ಯಾವುದೇ ತಕರಾರು ಇಲ್ಲ. ಆದರೆ, ಅವರು ಹಿಂದೂ ದೇವಾಲಯಗಳು, ಧಾರ್ಮಿಕ ಕೇಂದ್ರಗಳು ಹಿಂದೂಗಳ ಆಸ್ತಿಯೇನು ಅಲ್ಲ ಎನ್ನುವ ಉದ್ಧಟತನದ ಹೇಳಿಕೆಯನ್ನು ಕೊಡುವ ಅವಶ್ಯಕತೆ ಇರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಬಾನು ಮುಷ್ತಾಕ್ ಅವರಿಂದ ಪೂಜೆ ಮಾಡಿಸುವುದು ಬೇರೆಯದ್ದೇ ವಿಚಾರ. ಆದರೆ ಧಾರ್ಮಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾತನಾಡುವಾಗ ಈ ರೀತಿ ಹೇಳಿಕೆಗಳನ್ನು ಕೊಡುವುದು ಸರ್ಕಾರಕ್ಕೆ ಕುತ್ತು ತರುವಂಥದ್ದು ಎಂದು ತೀಕ್ಷ್ಣವಾಗಿ ಅವರು ರಿಯಾಕ್ಟ್‌ ಮಾಡಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video