ಬೆಂಗಳೂರು

ಬಾಲಕನನ್ನು ಅಪಹರಿಸಿ ಹತ್ಯೆ: ಆರೋಪಿಗಳನ್ನು ದಿನದೊಳಗೆ ಬಂಧಿಸುವಲ್ಲಿ ಯಶಸ್ವಿ

ಬೆಂಗಳೂರು:- ಬಾಲಕನೋರ್ವನನ್ನು ಅಪಹರಿಸಿ ಹತ್ಯೆ ಮಾಡಿದ ಆರೋಪಿಗಳನ್ನು ಕೇವಲ 24 ತಾಸಿನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಗುರುಮೂರ್ತಿ (27), ಗೋಪಿ (30) ಗುರುತಿಸಿದ್ದು, ಇವರು ಪೊಲೀಸರ ಮೇಲೆ ಇವರು ಹಲ್ಲೆ ಮಾಡಲು ಯತ್ನಿಸಿದ್ದಾರೆನ್ನಲಾಗಿದ್ದರೂ ಈ ವೇಳೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಬನ್ನೇರುಘಟ್ಟ ಸಮೀಪದ ಅರೆಕೆರೆಯ ಶಾಂತಿ ನಿಕೇತನ ಬಡಾವಣೆಯಲ್ಲಿ 7ನೇ ತರಗತಿಯ ನಿಶ್ಚಿತ್ (12) ನಿನ್ನೆ ಎಂದಿನಂತೆ ತರಗತಿ ಮುಗಿಸಿ ಟ್ಯೂಷನ್ ಗೆ ಹೋಗಿತ್ತಿದ್ದ. ಈ ಬಗ್ಗೆ ತಿಳಿದ ದುಷ್ಕರ್ಮಿಗಳು ನಿನ್ನೆ ರಾತ್ರಿ ಕೂಡ ಟ್ಯೂಷನ್ ಗೆ ಹೋಗುತ್ತಿದ್ದ ಬಾಲಕನನ್ನು ಅಪಹರಿಸಿದ್ದರು. ಅಪಹರಿಸಿದ ಬಳಿಕ ನಿರ್ಜನ ಪ್ರದೇಶಕ್ಕೆ ಹೋಗಿ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ ನಿನ್ನ ಮಗನನ್ನು ಕಿಡ್ನಾಪ್ ಮಾಡಿದ್ದೇವೆ, ಆದಷ್ಟು ಬೇಗ ಐದು ಲಕ್ಷ ಹಣವನ್ನು ನೀಡುವಂತೆ ಬೆದರಿಕೆ ಹಾಕಿದ್ದಷ್ಟೇ ಅಲ್ಲದೆ ಪೊಲೀಸರಿಗೆ ಮಾಹಿತಿ ಮಗನನ್ನು ಕೊಲ್ಲುವುದಾಗಿ ಎಚ್ಚರಿಕೆ ನೀಡಿದ್ದರು.

ಮಗನ ಕಿಡ್ನಾಪ್ ಸುದ್ದಿ ಕೇಳಿದ ಕಾಲೇಜು ಪ್ರೊಫೆಸರ್ ಏನು ಮಾಡಬೇಕು ಎಂದು ತೋಚದೆ ಹಣವನ್ನು ಒಟ್ಟುಗೂಡಿಸಿ, ಹುಳಿಮಾವು ಪೊಲೀಸರಿಗೆ ಮಾಹಿತಿ ನೀಡಿದ್ದರು, ಕೂಡಲೇ ಎಚ್ಚೆತ್ತ ಪೊಲೀಸರು ಮೊಬೈಲ್ ಲೊಕೇಶನ್ ಟ್ರಾಕಿಂಗ್ ಮೂಲಕ ತನಿಖೆಗೆ ಮುಂದಾಗಿದ್ದರು. ಬಾಲಕನನ್ನು ಹುಡುಕುವುದಕ್ಕೆ ಪೊಲೀಸರು ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಇತ್ತ ಬಾಲಕನ ಪೋಷಕರು 5 ಲಕ್ಷ ರೂ. ಹಣವನ್ನು ಸಿದ್ಧಪಡಿಸಿ ಕಿಡ್ನಾಪರ್ಸ್‌ಗೆ ಕೊಟ್ಟು ಮಗನನ್ನು ಕರೆದುಕೊಂಡು ಬರಲು ಕೂಡ ಸಿದ್ಧವಾಗಿದ್ದರು.

ಬಾಲಕ ಕಿಡ್ನಾಪ್ ಆಗಿರುವ ವಿಷಯ ಪೊಲೀಸರಿಗೆ ಗೊತ್ತಾಗಿದೆ ಎಂದು ಕಿಡ್ನಾಪರ್ಸ್‌ ಗಳಿಗೆ ತಿಳಿಯುತ್ತಿದ್ದಂತೆ, ಇನ್ನೂ ಈತ ನಮ್ಮ ಜೊತೆ ಇದ್ದರೆ ನಾವು ಸಿಕ್ಕಿಬೀಳುತ್ತೇವೆ ಎಂದು ಭಯಗೊಂಡು ಬಾಲಕನ ಕೈಕಟ್ಟಿ ಥಳಿಸಿ ಕೊಂದು, ಬಳಿಕ ರಸ್ತೆ ಬದಿಯಿದ್ದ ಕಲ್ಲು ಬಂಡೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ಹುಳಿಮಾವು ಪೊಲೀಸರು ಕಿಡ್ನಾಪರ್ಸ್‌ಗಳ ಫೋನ್ ಟ್ರೇಸ್ ಮಾಡುತ್ತಾ ಲೊಕೇಷನ್ ಗೆ ತೆರಳಿದಾಗ ಬನ್ನೇರುಘಟ್ಟದ ಕಗ್ಗಲೀಪುರ ರಸ್ತೆಯಲ್ಲಿರುವ ನಿರ್ಜನ ಪ್ರದೇಶದ ಬಂಡೆವೊಂದರ ಮೇಲೆ ನಿಶ್ಚಿತ್‌ನ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಬಾಲಕನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿತ್ತು. ಜೊತೆಗೆ ಪೆಟ್ರೋಲ್ ಸುರಿದು ಆತನ ದೇಹಕ್ಕೆ ಬೆಂಕಿ ಹಚ್ಚಿದ್ದು, ಅರೆಬರೆ ಬೆಂದು ಹೋಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಆರೋಪಿಗಳ ಸುಳಿವು ಹಿಡಿದು ಪಿಲ್ಗಾನಹಳ್ಳಿ ಗ್ರಾಮದಲ್ಲಿ ಆರೋಪಿಗಳ ಪತ್ತೆ ಕಾರ್ಯ ಮಾಡಿ ಹಿಡಿಯಲು ಹೋದ ವೇಳೆ ಮತ್ತು ಸ್ಥಳ ಪರಿಶೀಲನೆ ವೇಳೆ ಆರೋಪಿಗಳಾದ ಗೋಪಿ, ಗುರುಮೂರ್ತಿ ವೀವರ್ಸ್ ಕಾಲೋನಿ ಕೋಣನಕುಂಟೆ ರವರುಗಳು ಹುಳಿಮಾವು ಇನ್ಸ್ಪೆಕ್ಟರ್ ಕುಮಾರಸ್ವಾಮಿ ಸಬ್ ಇನ್ಸ್ಪೆಕ್ಟರ್ ಅರವಿಂದ್ ರವರ ಮೇಲೆ ಅಟ್ಯಾಕ್ ಮಾಡಿದ್ದರು. ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹೊಡೆದು ಆರೋಪಿಗಳನ್ನು ಜಯನಗರ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video