ಬೆಂಗಳೂರು

ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಯಲ್ಲಿ ಇನ್ನೂ ಗೊಂದಲ

ಬೆಂಗಳೂರು:- ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ವರಿಷ್ಠರು ಯಾರನ್ನು ಆಯ್ಕೆ ಮಾಡಬಹುದು ಎನ್ನುವ ಗೊಂದಲ ಇನ್ನೂ ಮುಂದುವರಿದಿದೆ. ಬೇರೆ ಹಲವು ರಾಜ್ಯಗಳಲ್ಲಿ ಅಧ್ಯಕ್ಷರ ಘೋಷಣೆಯಾಗಿದ್ದರೂ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಇನ್ನೂ ಹೆಸರು ಘೋಷಣೆಯಾಗಿಲ್ಲ.

ಮುಂದಿನ ಅಧ್ಯಕ್ಷರು ಯಾರಾಗಬಹುದು ಎನ್ನುವ ವಿಚಾರದಲ್ಲಿ ರಾಜ್ಯ ಬಿಜೆಪಿ ಘಟಕದಲ್ಲಿ ದಿನಕ್ಕೊಂದು ಹೆಸರುಗಳು ಮುನ್ನಲೆಗೆ ಬರುತ್ತಿದೆ. ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ಅವರ ಹೆಸರು ಮಂಚೂಣಿಯಲ್ಲಿದ್ದರೂ, ಇನ್ನೂ ಹೆಸರು ಪ್ರಕಟವಾಗದೇ ಇರುವ ಹಿನ್ನಲೆಯಲ್ಲಿ, ಇದರಲ್ಲೂ ಗೊಂದಲವಿದೆ ಎಂದು ಹೇಳಲಾಗುತ್ತಿದೆ.

ವಿಜಯೇಂದ್ರ ಅವರ ಹೆಸರನ್ನು ವರಿಷ್ಠರು ಅಂತಿಮಗೊಳಿಸುವುದಿಲ್ಲ, ಬೇರೆ ಎರಡು ಹೆಸರು ಚರ್ಚೆಯಲ್ಲಿದೆ. ನಮ್ಮೆಲ್ಲರ ವಿರೋಧದ ನಡುವೆಯೂ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರಾಗಿ ಮುಂದುವರಿಸಿದರೆ, ನಾವು ಹೊಸ ಪಕ್ಷ ಕಟ್ಟುವುದು ಗ್ಯಾರಂಟಿ. ಇದು, ಸೂರ್ಯಚಂದ್ರರಷ್ಟೇ ಸತ್ಯ. ಇದರಿಂದ, ಕರ್ನಾಟಕದಲ್ಲಿ ಬಿಜೆಪಿಗೆ ಆಗುವ ಹಿನ್ನಡೆಗೆ ನಾವು ಜವಾಬ್ದಾರರಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video