ಕೊಪ್ಪಳ:- ಶ್ರೀರಾಮೂಲು ಮತ್ತು ಜನಾರ್ದನ ರೆಡ್ಡಿ ಮತ್ತೆ ಒಂದಾಗಿ ಮುಂದುವರಿಯಲಿದ್ದಾರಾ ಎಂಬ ಕುತೂಹಲಕ್ಕೆ ಇನ್ನೂ ತೀವ್ರತೆ ಸಿಕ್ಕಿದಂತಾಗಿದೆ.
YES… ಕೊಪ್ಪಳದ ಗಂಗಾವತಿ ತಾಲೂಕಿನ ಮರಳಿ ಬಳಿ ಇರುವ ಖಾಸಗಿ ಹೊಟೆಲ್ ಒಂದರಲ್ಲಿ ಬಿಜೆಪಿ ಸಂಘಟನಾ ಸಭೆ ನೆಡಸಿತ್ತು. ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಜಿಲ್ಲೆಯಿಂದ ಬಿಜೆಪಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಬಿಜೆಪಿಯ ಹಾಲಿ ಮಾಜಿ ಶಾಸಕ ಸಚಿವರುಗಳು ಈ ಸಭೆಗೆ ಬಂದಿದ್ದರು, ಇದು ಪಕ್ಷದಲ್ಲಿನ ಸಂಘಟನೆ ಕುರಿತು ಸಭೆ ಕರೆದಿದ್ದರಾದರೂ ವಾಸ್ತವದಲ್ಲಿ ಇದು ರೆಡ್ಡಿ-ರಾಮುಲು ಒಂದು ಮಾಡೊದಕ್ಕೆ ವೇದಿಕೆ ಆಗಿದ್ದು ಸುಳ್ಳಲ್ಲ.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ವೇದಿಕೆ ಮೇಲೆ ಆಗಮಿಸಿ ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಜೊತೆ ಮಾತನಾಡುತ್ತಾ ನಿಂತುಕೊಂಡಿದ್ದರು, ಇದೇ ವೇಳೆ ವೇದಿಕೆಗೆ ಆಗಮಿಸಿದ ಶ್ರೀರಾಮೂಲು ರೆಡ್ಡಿಯನ್ನು ಕಂಡು ಮಾತನಾಡಿಸಿ ಮುಂದೆ ಹೋಗುತ್ತಾರೆ. ಇದಾದ ಬಳಿಕ ಬಿಜೆಪಿ ರಾಜ್ಯದ್ಯಕ್ಷ ಬಿ.ವೈ.ವಿಜಯೇಂದ್ರ ವೇದಿಕೆಗೆ ಆಗಮಿಸಿ ರೆಡ್ಡಿ-ರಾಮುಲು ಅವರಿಬ್ಬರ ಕೈಯನ್ನು ಹಿಡಿದು ಮೇಲೆತ್ತಿ ನಾವೆಲ್ಲರೂ ಒಂದು ಎನ್ನುವ ಸಂದೇಶ ಸಾರುವ ಮೂಲಕ ಇಬ್ಬರ ಮುನಿಸಿಗೆ ನಾಂದಿ ಹಾಡಿದ್ದರು.
ಇನ್ನು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲುರನ್ನು ಇಂದು ಕೂಡಿಸಲೇಬೇಕು ಎಂಬ ವಿಚಾರ ವಿಜಯೇಂದ್ರ ಮೊದಲೇ ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ. ವೇದಿಕೆ ಮೇಲಿನ ಮೀಸಲು ಸಿಟಿನಲ್ಲಿ ಇಬ್ಬರನ್ನು ಒಬ್ಬರ ಪಕ್ಕ ಒಬ್ಬರ ಹೆಸರು ಬರೆದು ಇಟ್ಟಿದ್ದಾರೆ. ಮೊದಲು ಬಂದ ಜನಾರ್ದನ ರೆಡ್ಡಿ ತಮ್ಮ ಪಕ್ಕದಲ್ಲಿನ ಸಿಟಿನ ಮೇಲೆ ಶ್ರೀರಾಮುಲು ಹೆಸರು ನೋಡಿ ಮುಗ್ಳನಕ್ಕರು. ಸ್ವಲ್ಪ ಸಮಯ ಶ್ರೀರಾಮುಲು ಕೆಳಗಡೆ ಹೋಗಿದ್ದ ಕಾರಣ ಜನಾರ್ದನ ರೆಡ್ಡಿ ಪಕ್ಕದಲ್ಲಿದ್ದ ಸಿಟು ಖಾಲಿ ಇತ್ತು ಶ್ರೀರಾಮುಲು ನಾಮಪಲಕದ ಜೊತೆ ರೆಡ್ಡಿ ಒಬ್ಬರೇ ಕುಳಿತಿದ್ದರು ಶ್ರೀರಾಮುಲು ಬಂದು ಕುಳಿತುಕೊಳ್ಳುವ ಅನುಮಾನ ಅಲ್ಲಿ ನೆರದಿದ್ದವರ ಮನಸಲ್ಲಿತ್ತು. ಆದರೆ, ಇದಕ್ಕೆ ಅವಕಾಶ ಮಾಡಿಕೊಡದ ವಿಜೇಯೆಂದ್ರ ಇಬ್ಬರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಾತಿನಲ್ಲಿ ಮುಳಿಗಿದರು.
ಇನ್ನೂ ಸಭೆಗೆ ಬಂದಿದ್ದವರು ರೆಡ್ಡಿ-ರಾಮುಲು ಇಬ್ಬರು ಪಕ್ಕದಲ್ಲಿದ್ದದ್ದನ್ನು ಕಂಡು ಫೊಟೋ ತಗೆಯಲು ಮುಗಿಬಿದ್ದದ್ದು ಸಾಮನ್ಯವಾಗಿತ್ತು. ಇನ್ನು ವೇದಿಕೆ ಭಾಷಣ ಆರಂಭಿಸಿದ ರೆಡ್ಡಿಗಾರು ರಾಮುಲುರನ್ನು ನನ್ನ ಜೀವದ ಗೇಳೆಯ ಶ್ರೀರಾಮುಲು ಎಂದು ಹೇಳಿ, ಕೆಟ್ಟ ಘಳಿಗೆಯಲ್ಲಿ ಎನೋ ನಡೆದು ಹೊಯ್ತು. ನಮ್ಮಿಬ್ಬರ ಜಗಳವನ್ನು ಲಾಭ ಪಡೆದುಕೊಳ್ಳುವವರು ಯಾರದ್ರೂ ಇದ್ರೆ ಅವ್ರೂ ಶತಮೂರ್ಖರು ಎಂದು ಹೇಳುವ ಮೂಲಕ ಬ್ರೇಕಪ್ ಗೆ ಫುಲ್ ಸ್ಟಾಪ್ ಇಟ್ಟರು.
Leave feedback about this