ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಭದ್ರಾ ಹಿನ್ನೀರಿನ ನೀರು ಏರತೊಡಗಿದೆ. ಮಲೆನಾಡಿನ ಭಾಗದಲ್ಲಿ ಮಳೆ ರಭಸ ಹೆಚ್ಚಾಗಿದ್ದರೂ ಈ ಬಾರಿ ಮೀನು ಶಿಕಾರಿ ಅತೀ ಕಡಿಮೆ ಯಾಗಿದೆ, ಪ್ರತಿ ವರ್ಷವೂ ಮೀನು ಹೆಚ್ಚಾಗಿ ಶಿಕಾರಿ ಆಗುತ್ತಿತ್ತು, ಕಳೆದ ಬಾರಿ ಹಿನ್ನೀರಿಗೆ ಜಿಲೇಬಿ ಮೀನುಮರಿ ಬಿಟ್ಟಿರುವುದೇ ಕಾರಣ ಎಂದು ಮೀನು ವ್ಯಾಪಾರಿ ಫೈರೋಜ್ ನೋವನ್ನು ತೋಡಿಕೊಂಡಿದ್ದಾರೆ.
ಇದರ ನಡುವೆ ಎನ್.ಆರ್.ಪುರ ಮೀನು ಮಾರ್ಕೆಟ್ ನ ಅಂಜುಮ್ ಖಾನ್ ರವರ ಅಂಗಡಿಗೆ ಬಂದ 18 ಕೆಜಿ ಹುಲ್ ಗಂಡೆ ಮೀನು, ಸಿಂಸೆ ಯ ಬಶೀರ್ ಮೀನು ಅಂಗಡಿಗೆ ಬಂದಿದ್ದ 25 ಕೆಜಿ ಹಾಗೂ 20 ಕೆಜಿಯ ಕಾಟ್ಲಾ, 11 ಕೆಜಿಯ ಗೌರಿ ಮೀನು, ಇದರೊಂದಿಗೆ ಅಪರೂಪದ 9.5 ಕೆಜಿಯ ನಾಟಿ ಮೀನು ಸೊಪ್ಪರಗಿ ಜಾತಿಯದ್ದು ಜೊತೆಗೆ ಆಗಾಗ ಸಿಗುವ ರವು, ಸುರಗಿ, ಗೊಜಳೆ, ಜೊತೆಗೆ ಅತೀ ಹೆಚ್ಚು ಜಿಲೇಬಿ ಮೀನುಗಳು ಮೀನು ಖಾದ್ಯ ಪ್ರಿಯರನ್ನು ಆಕರ್ಷಸಿತು. ಮೀನು ಮಾರ್ಕೆಟ್ ನ ವ್ಯಾಪಾರಿಗಳಾದ ಇಂತು, ಮಂಜಣ್ಣ, ಖಾದಿರ್, ಮನ್ಸೂರ್ ಇತರರು ಈ ಬಾರಿ ಅತೀ ಕಡಿಮೆ ಮೀನು ಶಿಖಾರಿ ಆಗುತ್ತದೆ ಎಂದುಕೊಂಡಿದ್ದೇವು ಆದರೆ, ಅದು ಆಗಲಿಲ್ಲ ಎಂದು ತಮ್ಮ ನೋವು ತೋಡಿಕೊಂಡರು.