ಚಿಕ್ಕಮಗಳೂರು

ಮಕ್ಕಳು ಯೋಗ ಮಾಡುವುದರಿಂದ ಚುರುಕಿನಿಂದ ಸದಾ ಹುರುಪಿನಲ್ಲಿ ಇರಬಹುದು.- ಅಭಿನವ ಗಿರಿರಾಜ್

ಚಿಕ್ಕಮಗಳೂರು:- ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಜಿಲ್ಲೆಯ ಎನ್. ಆರ್.ಪುರದ ಕೆಪಿಎಸ್ ಶಾಲೆಯಲ್ಲಿ ಯೋಗ ನಡೆಸಲಾಯಿತು.

ಮುಖ್ಯ ಶಿಕ್ಷಕಿ ನಿಶಾರವರ ಮಾರ್ಗದರ್ಶನದಲ್ಲಿ ಮಕ್ಕಳು ಯೋಗಭ್ಯಾಸ ನಡೆಸಿದರು, ಮಕ್ಕಳು ದಿನನಿತ್ಯ ಮುಂಜಾನೆ ಬೇಗ ಎದ್ದು ಅರ್ಧ ಗಂಟೆ ಯೋಗ ಮಾಡುವುದು ಒಳ್ಳೆಯ ಆರೋಗ್ಯಕರ ಅಭ್ಯಾಸ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ವಿಶ್ವ ಯೋಗ ದಿನಾಚರಣೆಯ ನೆನಪಿನಲ್ಲಿ ಸ್ವಂತವಾಗಿ ಸಾಹಿತ್ಯ, ಗಾಯನದ ಯೋಗದ ಹಾಡನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅಭಿನವ ಗಿರಿರಾಜ್, ಮಕ್ಕಳು ಯೋಗ ಮಾಡುವುದರಿಂದ ಚುರುಕಿನಿಂದ ಸದಾ ಹುರುಪಿನಲ್ಲಿ ಇರಬಹುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬಹುದು, ಬೆಳಿಗ್ಗೆ ಸಂಜೆ ಎರಡೂ ಹೊತ್ತು ಯೋಗ ಮಾಡುವುದು ತುಂಬಾ ಒಳ್ಳೆಯದು ಎಂದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಅಧಿಕಾರಿಗಳಾದ ಸೇವಾ ನಾಯ್ಕ್, ತಿಮ್ಮೆಶ್ ಸೇರಿದಂತೆ ಶಾಲೆಯ ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿಗಳು ಬಾಗವಹಿಸಿದ್ದರು.

ಮಕ್ಕಳು ಯೋಗದ ಕೆಲವು ಆಸನಗಳನ್ನು ಮಾಡಿ ಪುಳಕಿತರಾದರು.