ಬೆಂಗಳೂರು

ಮತ್ತೆ ಆಕ್ಟಿವ್ ಆದ ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು:- ಕೇಂದ್ರ ಚುನಾವಣಾ ಮಂಡಳಿ ಹಾಗೂ ಸಂಸದೀಯ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ವಾರದಲ್ಲಿ ಎರಡು ದಿನ ಬಿಜೆಪಿ ಕಚೇರಿಗೆ ಆಗಮಿಸುತ್ತೇನೆ, ಪ್ರತಿಯೊಂದು ಜಿಲ್ಲೆಗೂ ಭೇಟಿ ನೀಡಿ ಪಕ್ಷ ಕಟ್ಟುತ್ತೇನೆ ಎನ್ನುವ ಮೂಲಕ ಮತ್ತೆ ಆಕ್ಟಿವ್ ಆಗಿದ್ದಾರೆ.

ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾಗ ಅವರನ್ನು ಖಾಸಗಿ ಹೊಟೇಲ್‌ನಲ್ಲಿ ಯಡಿಯೂರಪ್ಪ ಭೇಟಿ ಮಾಡಿದ್ದರು. ಭೇಟಿಯ ವೇಳೆ ಸಾಲು ಸಾಲು ಸಲಹೆ- ಸೂಚನೆಗಳನ್ನು ಅಮಿತ್ ಶಾ ನೀಡಿದ್ದಾರೆ ಎನ್ನಲಾಗಿದೆ. ದೇಶದಲ್ಲಿ ಈ ಹಿಂದೆ ಇಂದಿರಾ ಗಾಂಧಿ ಅವರ ಆಳ್ವಿಕೆಯಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಮಾಡಲಾಗಿತ್ತು. ರಾಜ್ಯದಲ್ಲಿ ಇಂದು ಅದೇ ರೀತಿಯ ವಾತಾವರಣ ಇದೆ. ಈಗ ಕಾಂಗ್ರೆಸ್ ಒಳಜಗಳು ನಮಗೆ ಫಲಪ್ರದವಾಗಬೇಕು. ಜೊತೆಗೆ ನಿಮ್ಮಿಂದ ಹೊರ ಹೋಗಿರುವವರನ್ನು ಮತ್ತೆ ಪಕ್ಷಕ್ಕೆ ಎಳೆದು ತರುವ ಕೆಲಸ ಕಾರ್ಯಗಳು ಆಗಬೇಕು. ಅದಕ್ಕೆ ನೀವೇ ಸರಿಯಾದ ಆಯ್ಕೆ. ನೀವು ಆಕ್ಟಿವ್ ಆಗಬೇಕು, ನಮ್ಮಲ್ಲಿದ್ದು ಇಂದು ಬೇರೆ ಪಕ್ಷಕ್ಕೆ ಹೋದವರು, ಉಚ್ಛಾಟನೆಗೊಂಡವರನ್ನು ಕರೆದು ಮಾತುಕತೆ ಮಾಡಬೇಕು. ಅವರನ್ನೆಲ್ಲಾ ಈಗಿನಿಂದಲೇ ಒಗ್ಗೂಡಿಸುವ ಕೆಲಸ ಮಾಡಬೇಕು. ಮುಂದಿನ ಮೂರು ವರ್ಷದ‌ ಅವಧಿಯಲ್ಲಿ ಸುಭದ್ರವಾದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಂತಹ ತಾವರಣ ಸೃಷ್ಠಿಸಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.