ಬೆಂಗಳೂರು

ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿಗೆ ತಿಳಿ ಹೇಳಿದ ಸಿಎಂ ಸಿದ್ರಾಮಯ್ಯ

ಬೆಂಗಳೂರು:- ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರು ವಾಟ್ಸಾಪ್ ಸಂದೇಶವೊಂದರ ಆಧಾರದಲ್ಲಿ ಪಾಕಿಸ್ತಾನವು ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನು ವಿಶ್ವಸಂಸ್ಥೆಯಲ್ಲಿ ಬಳಸಿಕೊಂಡಿದೆ ಎಂದು ಹೇಳಿದ್ದರು. ಆದರೆ, ಇದು ಸಂಪೂರ್ಣ ಸುಳ್ಳು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ರೀತಿಯ ಟ್ವೀಟ್‌ಗಳು ಭಾರತವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮುಜುಗರಕ್ಕೀಡುವುದರ ಜೊತೆಗೆ ಭಯೋತ್ಪಾದಕರ ಗುರಿಯಾದ ಏಕತೆಯನ್ನು ಒಡೆಯುವ ಉದ್ದೇಶಕ್ಕೆ ಸಹಾಯ ಮಾಡುತ್ತವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಕಿರಣ್‌ ಬೇಡಿಯವರು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಭಯೋತ್ಪಾದಕರು ಧರ್ಮ ಕೇಳಿ ಪೆಹಲ್ಗಾಮ್‌ನಲ್ಲಿ ದಾಳಿ ನಡೆಸಿಲ್ಲ ಎಂಬುದನ್ನು ಸಾಬೀತುಪಡಿಸಲು ಸಿದ್ದರಾಮಯ್ಯ ಸೇರಿದಂತೆ 12 ಕಾಂಗ್ರೆಸ್‌ ನಾಯಕರು ಮಾಡಿದ ಟ್ವೀಟ್‌ಗಳನ್ನು ಬಳಸಿಕೊಂಡಿದೆ ಎಂದು ಆರೋಪಿಸಿದ್ದರು. ಆದರೆ, ಸಿದ್ದರಾಮಯ್ಯ ಕಿರಣ್‌ ಬೇಡಿಯವರ ಟ್ವೀಟ್‌ಗೆ ಅದು ವಾಟ್ಸಪ್‌ನಲ್ಲಿ ಹರಿದಾಡಿದ ಸುಳ್ಳು ಸುದ್ದಿ ಎಂದು ಪ್ರತಿಕ್ರಿಯಿಸುವ ಮೂಲಕ ನಕಲಿ ಟ್ವೀಟ್‌ನ ಬಂಡವಾಳ ಬಿಚ್ಚಿಟ್ಟಿದ್ದಾರೆ. ಓರ್ವ ನಿವೃತ್ತ ಐಪಿಎಸ್‌ ಅಧಿಕಾರಿ ಹೀಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಹೇಗೆ ಸ್ವಲ್ಪ ತಿಳಿದುಕೊಂಡು ಪೋಸ್ಟ್‌ ಮಾಡಿ ಎಂದು ತಿಳಿ ಹೇಳಿದ್ದಾರೆ.