ದೆಹಲಿ:- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿ ಹಲವು ಘಟಾನುಘಟಿ ನಾಯಕರು ಮುಂದಿನ ವರ್ಷ ರಾಜ್ಯಸಭೆಯಿಂದ ನಿವೃತ್ತರಾಗಲಿದ್ದಾರೆ.
ಖರ್ಗೆ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ 2026ರ ಜೂನ್ 25ರಂದು ಕೊನೆಗೊಳ್ಳಲಿದೆ. ಇವರ ಜತೆಗೆ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ನಿವೃತ್ತ ಸಿಜೆಐ ರಂಜನ್ ಗೋಗೊಯ್, ಜಾರ್ಜ್ ಕುರಿಯನ್, ದಿಗ್ವಿಜಯ್ ಸಿಂಗ್ ಸೇರಿ ಹಲವು ದಿಗ್ಗಜರು ನಿವೃತ್ತರಾಗಲಿದ್ದಾರೆ.
ರಾಜ್ಯಸಭೆಯ 245 ಸ್ಥಾನಗಳ ಪೈಕಿ 75 ಸ್ಥಾನಗಳಿಗೆ 2026ರ ಎಪ್ರಿಲ್, ಜೂನ್ ಮತ್ತು ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ.