ಹಾಸನ:- ಮನೆಗೆಲಸದಾಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ತೀರ್ಪು ಪ್ರಕಟವಾಗುವುದನ್ನೇ ಎದಿರು ನೋಡುತ್ತಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಶಾಕ್ ಕೊಟ್ಟಿದೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಬೇಕಿತ್ತು. ಆದರೆ, ಈಗ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತೀರ್ಪನ್ನು ಮತ್ತೆ ಎರಡು ದಿನಗಳಿಗೆ ಮುಂದೂಡಿ ಕಾರಣವನ್ನೂ ನೀಡಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಕೆಲವು ಸ್ಪಷ್ಟೀಕರಣ ಬೇಕಾಗಿದೆ, ಹೀಗಾಗಿ ತೀರ್ಪು ಆಗಸ್ಟ್ 1ಕ್ಕೆ ಪ್ರಕಟಿಸುವುದಾಗಿ ನ್ಯಾಯಾಧೀಶರು ಪ್ರಕಟಿಸಿದ್ದಾರೆ. ಇನ್ನು, ತೀರ್ಪಿಗಾಗಿ ಜೈಲಿನಲ್ಲಿ ಕಾಯುತ್ತಿದ್ದ ಪ್ರಜ್ವಲ್ ರೇವಣ್ಣ ಎದೆಬಡಿತ ಹೆಚ್ಚಾಗಿದೆ. ಮೈಸೂರಿನ ಕೆ.ಆರ್ ನಗರದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಪ್ರಜ್ವಲ್ ಮೇಲಿದೆ. ಈ ಪ್ರಕರಣದ ವಿಚಾರಣೆ ಮುಗಿದಿದ್ದು ಶಿಕ್ಷೆ ಪ್ರಕಟವಾಗಬೇಕಿದೆ.
ಇದಲ್ಲದೆ ಇನ್ನೂ ಮೂರು ಕೇಸ್ ಗಳು ಪ್ರಜ್ವಲ್ ವಿರುದ್ಧ ಇದ್ದು ಅವುಗಳ ವಿಚಾರಣೆ ಇನ್ನೂ ಮುಗಿದಿಲ್ಲ. ಈಗ ಮೊದಲ ಪ್ರಕರಣದ ತೀರ್ಪು ಏನಾಗುತ್ತದೆ ಎಂದು ನೋಡಲು ಶುಕ್ರವಾರದವರೆಗೆ ಕಾಯಬೇಕಿದೆ. ಒಂದು ವೇಳೆ ಈ ಪ್ರಕರಣದಲ್ಲಿ ಪ್ರಜ್ವಲ್ ಖುಲಾಸೆಯಾದರೂ ಉಳಿದ ಪ್ರಕರಣಗಳಲ್ಲಿ ಜಾಮೀನು ಸಿಗದೇ ಇರುವುದರಿಂದ ಸದ್ಯಕ್ಕೆ ಅವರು ಜೈಲಿನಲ್ಲೇ ಕಾಲ ಕಳೆಯಬೇಕಾಗುತ್ತದೆ.
Leave feedback about this