Uncategorized

ಮಿಸ್ ಡಾರ್ಕ್ ಕ್ವೀನ್ ರೇಚಲ್ ಆತ್ಮಹತ್ಯೆ

ಪುದುಚೇರಿ:- ಫ್ಯಾಷನ್ ಉದ್ಯಮದಲ್ಲಿ ಒಳಗೊಳ್ಳುವಿಕೆಯ ಪರ ವಕಾಲತ್ತು ವಹಿಸಿದ್ದ ಮತ್ತು ಮಾಜಿ ಮಿಸ್ ಪುದುಚೇರಿ ಸ್ಯಾನ್ ರೇಚಲ್ ಗಾಂಧಿ, ಶನಿವಾರ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಜಿಪ್ಮರ್) ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಕೆಲವು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

26 ವರ್ಷದ ಮಾಡೆಲ್, ಸಾಮಾಜಿಕ ಕಾರ್ಯಕರ್ತೆಯಾದ ರೇಚಲ್ ಜುಲೈ 5 ರಂದು ಅತಿಯಾದ ನಿದ್ರೆ ಮಾತ್ರೆಗಳನ್ನು ಸೇವಿಸಿದ್ದರು ಎಂದು ವರದಿಯಾಗಿದೆ. ಮಾಧ್ಯಮದ ಪ್ರಕಾರ, ಅವರನ್ನು ಮೊದಲು ಅವರ ತಂದೆ ಪುದುಚೇರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ನಂತರ ಅವರನ್ನು ಜಿಪ್ಮರ್‌ಗೆ ಒಳರೋಗಿಯಾಗಿ ದಾಖಲಿಸಲಾಯಿತ್ತು, ಅಲ್ಲಿ ಅವರು ಸಾವನ್ನಪ್ಪಿದರು.

ವರ್ಣಭೇದ ನೀತಿಯನ್ನು ಪ್ರಶ್ನಿಸುವ ಮತ್ತು ಫ್ಯಾಷನ್‌ನಲ್ಲಿ ವೈವಿಧ್ಯತೆಯನ್ನು ಉತ್ತೇಜಿಸುವ ಮೂಲಕ ರೇಚಲ್ ಖ್ಯಾತಿಗಳಿಸಿದ್ದರು.

2019 ರಲ್ಲಿ ಮಿಸ್ ಡಾರ್ಕ್ ಕ್ವೀನ್ ತಮಿಳುನಾಡು ಕಿರೀಟವನ್ನು ಪಡೆದ ನಂತರ 2021 ರಲ್ಲಿ ಮಿಸ್ ಪುದುಚೇರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು. ಲಂಡನ್, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮಾಡೆಲಿಂಗ್ ಕಾರ್ಯಕ್ರಮಗಳಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು.

ಪೊಲೀಸ್ ಮೂಲಗಳ ಪ್ರಕಾರ, ರೇಚಲ್ ಇತ್ತೀಚೆಗೆ ವಿವಾಹವಾಗಿದ್ದ ಅವರು ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ನಂತರ ತನ್ನ ತಂದೆಯ ಆಶ್ರಯದಲ್ಲಿ ಬೆಳೆದ ರೇಚಲ್, ಮಹಿಳೆಯರ ಸುರಕ್ಷತೆಗಾಗಿ ಮತ್ತು ಮಾಡೆಲಿಂಗ್ ಉದ್ಯಮದಲ್ಲಿ ಸಾಂಪ್ರದಾಯಿಕ ಸೌಂದರ್ಯದ ಮಾನದಂಡಗಳನ್ನು ಮುರಿಯುವಲ್ಲಿ ಹೆಸರುವಾಸಿಯಾಗಿದ್ದರು.