ಚಿತ್ರದುರ್ಗ

ಮುರುಘಾ ಮಠದ ಶ್ರೀಗಳಿಗೆ ಕೊಂಚ ರಿಲೀಫ್

ಚಿತ್ರದುರ್ಗ:- ಪೋಕ್ಸೋ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿ ಜಾಮೀನು ಪಡೆದಿರುವ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳಿಗೆ ಕೊಂಚ ರಿಲೀಫ್ ಸಿಕ್ಕಿದಂತಾಗಿದೆ. ತನ್ನ ಕೋಟೆಗೆ ಬರುವುದಕ್ಕೂ ಅನುಮತಿ ನೀಡಲಾಗಿದೆ. ಇದರ ನಡುವೆ ಗುರುವಾರದಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಕೋರ್ಟ್ ಗೆ ಹಾಜರಾಗಿದ್ದರು.

ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದು, ಜೈಲಿನಿಂದ ಬಂದ ಮೇಲೆ ದಾವಣಗೆರೆಯಲ್ಲಿಯೇ ವಾಸವಿದ್ದ ಕಾರಣ ಕೋರ್ಟ್ ಗೆ ದಾವಣಗೆರೆಯಿಂದಾನೇ ಬಂದರು. ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರಾದ ಬಳಿಕ ವಿಚಾರಣೆ ನಡೆದಿದೆ. ಈ ವಿಚಾರಣೆಯಲ್ಲಿ ಎ1 ಆರೋಪಿಯಾಗಿರುವ ಡಾ.ಶಿವಮೂರ್ತಿ ಮುರುಘಾ ಶರಣರು, ಎ2 ರಶ್ಮಿ, ಎ3 ಆರೋಪಿಯಾಗಿರುವ ಪರಮಶಿವಯ್ಯ ಅವರ ಹೇಳಿಕೆಗಳನ್ನ ದಾಖಲಿಸಿಕೊಳ್ಳಲಾಯ್ತು. ಒಟ್ಟು 51 ಸಾಕ್ಷಿಗಳ ಹೇಳಿಕೆಗೆ ಇಲ್ಲಿ ಶ್ರೀಗಳ ಹೇಳಿಕೆಯನ್ನ ದಾಖಲಿಸಿಕೊಳ್ಳಲಾಗಿದೆ. ಈ ವಿಚಾರಣೆ ಸುಮಾರು ಸಂಜೆ 5 ಗಂಟೆಯ ತನಕವೂ ನಡೆದಿದೆ.

ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಎದುರು ಹೇಳಿಕೆಗಳನ್ನ ದಾಖಲಿಸಲಾಗಿದೆ. ಶ್ರೀಗಳ ವಿರುದ್ಧದ ಮತ್ತೊಂದು ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 10 ರಂದು ಮತ್ತೆ ಹಾಜರಾಗಬೇಕೆಂದು ತಿಳಿಸಲಾಗಿದೆ.

ಮುರುಘಾ ಶ್ರೀಗಳು ಚಿತ್ರದುರ್ಗದ ಕೋರ್ಟ್ ಗೆ ಹಾಜರಾಗಿ ತಮ್ಮ ಮೇಲಿನ ಆರೋಪ, ಸಾಕ್ಷಿಗಳು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಬಂದಿದ್ದಾರೆ. ಸದ್ಯ ದಾವಣಗೆರೆಯಲ್ಲಿಯೇ ಇರುವ ಶ್ರೀಗಳು ಮತ್ತೆ ಚಿತ್ರದುರ್ಗಕ್ಕೆ ಯಾವಾಗ ಹೋಗುತ್ತಾರೆ, ಭಕ್ತರ ಜೊತೆಗೆ ಮೊದಲಿನಂತೆ ಮಾತನಾಡುವುದು ಯಾವಾಗ ಅನ್ನೋದನ್ನ ಭಕ್ತ ವೃಂದ ಕಾಯುತ್ತಿದೆ. ಸದ್ಯ ಕೇಸಿಂದ ಮುಕ್ತಿ ಸಿಕ್ಕ ಮೇಲೆ ಶ್ರೀಗಳು ಮೊದಲಿನಂತೆ ಆಗಬಹುದು ಎಂಬ ನಿರೀಕ್ಷೆಯೂ ಇದೆ.