ಬೆಂಗಳೂರು:- ಸಿನಿ ಯುನೈಟೆಡ್: ಮದುವೆ ಬಳಿಕ ಪ್ರೀತಿಸಿದವರಿಂದ ಕ್ಷುಲ್ಲಕ ಕಾರಣಕ್ಕೆ ದೂರವಾಗಿ ಡಿವೋರ್ಸ್ ಪಡೆಯುವುದು, ಬೇರೊಬ್ಬರೊಂದಿಗೆ ಕೂಡಿರುವುದು. ಮತ್ತೊಂದು ವಿವಾಹದ ಪ್ರವೃತ್ತಿ ಸಾಮಾನ್ಯ ಎಂಬಂತಾಗಿದೆ. ಇದು ಕೇವಲ ಸೆಲೆಬ್ರೆಟಿಗಳ ಬಾಳಲ್ಲಿ, ಬಾಲಿವುಡ್‌ನಲ್ಲಿ ಹೆಚ್ಚಾಗಿ ಕೇಳುತ್ತಿದ್ದೆವು. ಇದೀಗ ಇತರ ಚಿತ್ರರಂಗ ಮತ್ತು ಸಾರ್ವಜನಿಕರಲ್ಲೂ ಇಂತಹ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂತಹ ವಾತಾವರಣ ನಡುವೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ 2ನೇ ಮದುವೆ ಬಗ್ಗೆ ವಿಜಯ್ ರಾಘವೇಂದ್ರ ಮತ್ತು ಮೇಘನಾ ರಾಜ್ ಅವರ ಮೇಲೆ ಇಲ್ಲಸಲ್ಲದ ವದಂತಿಗಳು, ಸುಳ್ಳು ಕೇಳಿ ಬಂದರೂ ಸಹಿತ ಅವರು ನಡೆದುಕೊಂಡ ರೀತಿ, ಕೈಗೊಂಡ ನಿರ್ಧಾರಗಳಿಗೆ ಫ್ಯಾನ್ಸ್ ಹ್ಯಾಟ್ಸಾಪ್ ಹೇಳುತ್ತಿದ್ದಾರೆ.
ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರು ಪ್ರೀತಿಸಿ ಮದುವೆ ಆದವರು. ಚಿರು ನಿಧನ ಬಳಿಕ ಮನೆಯಲ್ಲಿ ಸಾಕಷ್ಟು ಒತ್ತಾಯಗಳು ಬಂದರೂ ಸಹಿತ ಮೇಘನಾ ಅವರು ಮತ್ತೊಂದು ಮದುವೆ ಒಪ್ಪಿಲ್ಲ. ಈಗಲೂ ಚಿರು ನನ್ನೊಂದಿಗೆ ಇದ್ದಾರೆ ಎನ್ನುತ್ತಾರೆ. ಇತ್ತ ವಿಜಯ್ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರು ತೀರಿಕೊಂಡ ನಂತರ ಅವರ ಮೇಲೂ ಎರಡನೇ ಮದುವೆ ಆಗುವಂತೆ ಹೆಚ್ಚಿನ ಒತ್ತಡಗಳು ಕುಟುಂಬಸ್ಥರು, ಆಪ್ತರು ಕೇಳಿ ಬಂದರೂ ಸಹಿತ ಈ ಇಬ್ಬರು ಒತ್ತಡಕ್ಕೆ ಮಣಿಯಲ್ಲಿಲ್ಲ.
ಈ ಮಧ್ಯೆ ಮೇಘನಾ ರಾಜ್ ಮತ್ತು ವಿಜಯ್ ರಾಘವೇಂದ್ರ ಅವರು ಎರಡನೇ ಮದುವೆ ಆಗುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಇದು ಸುಳ್ಳಾದರೂ ಸಹಿತ ಕೆಲವರು ಸನ್ನಿವೇಶದ ಲಾಭ ಪಡೆದರು. ಆದರೆ ಈ ಬಗ್ಗೆ ಸ್ವತಃ ಈ ಇಬ್ಬರು ಕಲಾವಿದರು ಸ್ಪಷ್ಟನೆ ನೀಡಿದ್ದಾರೆ. ಮೊದಲ ಪ್ರೀತಿ, ಚಿರು ದಾಂಪತ್ಯ ಜೀವನದ ನೆನಪುಗಳಲ್ಲಿ ಮೇಘನಾ ಹಾಗೂ ಇಷ್ಟದ ಮಡದಿ ಸ್ಪಂದನಾ ಅವರೊಂದಿಗೆ ಕಳೆದ ಇಷ್ಟು ವರ್ಷಗಳ ವೈವಾಹಿಕ ಬದುಕಿನ ನೆನಪುಗಳಲ್ಲಿ ವಿಜಯ್ ರಾಘವೇಂದ್ರ ಅವರು ಜೀವಿಸುತ್ತಿದ್ದಾರೆ. ಆ ಸ್ಥಾನಗಳನ್ನು ಬೇರೆ ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದಿದ್ದಾರೆ.
ಬದಕಿದ್ದಾಗಲೇ ಬೇರೆಯಾಗುವವರು, ವಿಚ್ಛೇದನ ಪಡೆದು ಮುಖ ತಿರುಗಿಸಿಕೊಂಡು ಹೋಗುವವರ ಮಧ್ಯ ಮೇಘನಾ ರಾಜ್ ಮತ್ತು ವಿಜಯ್ ರಾಘವೇಂದ್ರ ಅವರು ಗ್ರೇಟ್ ಅನ್ನಿಸಿಕೊಂಡಿದ್ದಾರೆ. ತಮ್ಮ ಪ್ರೀತಿಗೆ, ಸುಖ-ದುಖಃಗಳಲ್ಲಿ ಭಾಗಿಯಾದವರವನ್ನು ಹೃದಯದಲ್ಲಿ ಇನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಈ ನಡೆ ಅಭಿಮಾನಿಗಳಿಗೆ ಇಷ್ಟವಾಗಿದೆ. ಸೆಲೆಬ್ರೆಟಿಗಳಾಗಲು, ಯಾರೇ ಆಗಲಿ ಕ್ಷುಲ್ಲಕ ಕಾರಣಕ್ಕೆ ದಾಂಪತ್ಯ ಜೀವನ ಮುರಿದುಕೊಳ್ಳುತ್ತಾರೋ, ದೂರವಾಗುತ್ತಾರೋ ಅವರಿಗೆಲ್ಲ ಮೇಘನಾ ಮತ್ತು ವಿಜಯ್ ಮಾದರಿಯಾಗಿ ನಿಲ್ಲುತ್ತಾರೆ. ಈ ಕಾರಣಕ್ಕೆ ಇವರನ್ನು ಫ್ಯಾನ್ಸ್ ಹೆಚ್ಚು ಇಷ್ಟಪಡುತ್ತಾರೆ.
Leave feedback about this