ಚಿಕ್ಕಬಳ್ಳಾಪುರ

ಯಾವುದೇ ಆತಂಕವಿಲ್ಲದೆ ಸುರಕ್ಷಿತವಾಗಿ ಕನ್ನಡಿಗರು ಬಂದು ಸೇರಲಿದ್ದಾರೆ.- ಡಾ.ಆರತಿಕೃಷ್ಣ

ಚಿಕ್ಕಬಳ್ಳಾಪುರ:- ಯುದ್ಧ ಸಾರಿರುವ ಇರಾನ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ 7 ವಿದ್ಯಾರ್ಥಿಗಳು ಒಳಗೊಂಡಂತೆ
ಮೆಡಿಕಲ್ ಸ್ಟೂಡೆಂಟ್, ಕಾರ್ಮಿಕರು ಒಳಗೊಂಡ 120ಕ್ಕೂ ಹೆಚ್ಚಿನವರು ಕರ್ನಾಟಕದವರು ಇರಾನಿನಲ್ಲಿ ನೆಲೆಸಿದ್ದಾರೆ.
ಟೆರ್ರಾನ್ ನ ಇಂಡಿಯಾ ಅಂಬೆಸ್ಸಿಗೆ ಈಗಾಗಲೇ ಮಾತನಾಡಿದ್ದೇನೆ, ಯಾವುದೇ ಆತಂಕವಿಲ್ಲದೆ ಸುರಕ್ಷಿತವಾಗಿ ಬಂದು ಸೇರಲಿದ್ದಾರೆ, ಈಗಾಗಲೇ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ.
ಇದಕ್ಕೆ ಭಾರತದ ರಾಯಭಾರಿ ಕಚೇರಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ತನ್ನ ಗಡಿಯನ್ನು ತೆರೆದು ಭಾರತೀಯರನ್ನು ಕಳಿಸಿಕೊಡಲಾಗುವುದು ಎಂದಿದ್ದಾರೆ ಎಂದು ಆರತಿಕೃಷ್ಣ ಹೇಳಿದ ಅವರು, ಸುರಕ್ಷಿತವಾಗಿ ಬಂದು ಸೇರಲಿದ್ದಾರೆ ಎಂದು ಅನಿವಾಸಿ ಭಾರತೀಯ ಕರ್ನಾಟಕ ಸರ್ಕಾರದ ಉಪಾಧ್ಯಕ್ಷೆ ಡಾ.ಆರತಿಕೃಷ್ಣ ಯುನೈಟೆಡ್ ನೊಂದಿಗೆ ವಿಚಾರವನ್ನು ಹಂಚಿಕೊಂಡಿದ್ದಾರೆ.

ಇರಾನ್‌ ಹಾಗೂ ಇಸ್ರೇಲ್‌ ನಡುವೆ ಯುದ್ಧ ತೀವ್ರಗೊಂಡ ಹಿನ್ನೆಲೆಯಲ್ಲಿ ಅಲ್ಲಿರುವ ಸುಮಾರು 10 ಸಾವಿರ ಭಾರತೀಯರು ಅತಂತ್ರರಾಗಿದ್ದಾರೆ. ಹೀಗಾಗಿ ಅವರನ್ನು ತೆರವುಗೊಳಿಸುವ ಇಂಗಿತವನ್ನು ಭಾರತ ಸರ್ಕಾರ ವ್ಯಕ್ತಪಡಿಸಿದೆ.

ಇದರ ಮೊದಲ ಭಾಗವಾಗಿ ಇರಾನ್ ರಾಜಧಾನಿ ಟೆಹ್ರಾನ್‌ನಿಂದ 140 ಕಿ.ಮೀ. ದೂರದಲ್ಲಿರುವ ಸುರಕ್ಷಿತ ಸ್ಥಳವೊಂದಕ್ಕೆ 1500 ವಿದ್ಯಾರ್ಥಿಗಳನ್ನು ಕಳಿಸಿಕೊಡಲಾಗಿದೆ. ಅಲ್ಲಿಂದ ಅಜರ್‌ಬೈಜಾನ್‌, ಅಫ್ಘಾನಿಸ್ತಾನ ಅಥವಾ ತುರ್ಕಮೇನಿಸ್ತಾನದ ಗಡಿಗಳ ಮೂಲಕ ಅವರನ್ನು ಭಾರತಕ್ಕೆ ಕರೆತರಲಾಗುತ್ತದೆ. ಇರಾನ್ ನಗರಗಳಲ್ಲಿ ಸಿಲುಕಿರುವ ಭಾರತೀಯ ನೌಕರರು ಹಾಗೂ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಬೇಕಿದೆ ಎಂದು ಭಾರತ ಸರ್ಕಾರ ಕೋರಿಕೆ ಸಲ್ಲಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇರಾನ್‌, ಯುದ್ಧದ ಕಾರಣ ವಿಮಾನ ಸಂಚಾರ ಬಂದ್‌ ಆಗಿದೆ. ಹೀಗಾಗಿ ನಿಮ್ಮವರನ್ನು ಸ್ಥಳಾಂತರಿಸಲು ದೇಶದ ಎಲ್ಲ ಭೂಗಡಿಗಳು ಮುಕ್ತವಾಗಿವೆ ಎಂದು ಉತ್ಸೇರಿದ