ಮಂಗಳೂರು:- ಉಜಿರೆಯ ಧರ್ಮಸ್ಥಳ ಗ್ರಾಮದಲ್ಲಿ ನಿಗೂಢ ಸಾವುಗಳಾಗಿವೆ ಎಂಬ ಆರೋಪ ದೊಡ್ಡ ಮಟ್ಟದಲ್ಲಿ ಈ ಹಿಂದಿನಿಂದಲೂ ಕೇಳಿಬರುತ್ತಿದ್ದು, ಸೌಜನ್ಯ ಅತ್ಯಾಚಾರ ಹಾಗೂ ಸಾವಿನ ಪ್ರಕರಣದ ಕುರಿತ ಚರ್ಚೆಗಳು ಹೆಚ್ಚಾದ ಬಳಿಕ ಇದು ಇನ್ನಷ್ಟು ದೊಡ್ಡದಾಯಿತು.
ಯೂಟ್ಯೂಬರ್ ಸಮೀರ್ ಸೌಜನ್ಯ ಪ್ರಕರಣದ ಕುರಿತು ವಿಡಿಯೋ ಮಾಡಿದ ಬಳಿಕ ಕಂಡು ಕೇಳರಿಯದ ವೈರಲಾಗಿ ಜನರಿಂದ ವಿಭಿನ್ನವಾದ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು. ಸಮೀರ್ ವಿಡಿಯೋ ಪ್ರಕರಣದ ಕುರಿತು ಜನರಿಗಿದ್ದ ಅಭಿಪ್ರಾಯವನ್ನೇ ಬದಲಾಯಿಸಿಬಿಟ್ಟಿತು.
ಭಾರೀ ವಿವಾದ ಹುಟ್ಟುಹಾಕಿರುವ ಸೌಜನ್ಯವೂ ಸೇರಿ ಹತ್ಯೆಗಳ ಕುರಿತಂತೆ ಇದೀಗ ವಕೀಲರ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಪತ್ರದಲ್ಲಿ ವ್ಯಕ್ತಿಯೊಬ್ಬ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಹೂತಿಟ್ಟ ಮೃತದೇಹಗಳನ್ನು ತೆಗೆದು ಪೊಲೀಸರಿಗೆ ಶರಣಾಗುತ್ತೇನೆ ಎಂದು ಪಾಪ ಪ್ರಜ್ಞೆ ಕಾಡಿದ ಕಾರಣಕ್ಕೆ ಒಪ್ಪಿಕೊಂಡಿದ್ದಾನೆ ಎಂದು ಬರೆಯಲಾಗಿದೆ.
ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇದೀಗ ಧರ್ಮಸ್ಥಳ ಕೊಲೆಗಳ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ವಿಡಿಯೊಗಳನ್ನು ಮಾಡಿದ್ದ ಸಮೀರ್ ಸಹ ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸೌಜನ್ಯ ಪ್ರಕರಣದ ಈಗಿನ ಅಪ್‌ಡೇಟ್ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಈ ಫೋಟೊ ಜೊತೆ ʼ’ಕಾಂತಾರʼ’ ಚಿತ್ರದ ಬೆಳಕು ಡೈಲಾಗ್ ಸಹ ಸಮೀರ್ ಹಾಕಿಕೊಂಡಿದ್ದಾರೆ.