ಚೆನ್ನೈ:- ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕೂಲಿ ಚಿತ್ರ ಈಗಾಗಲೇ ಬಿಡುಗಡೆ ಆಗಿ ಎಲ್ಲಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ, ಇದರ ನಡುವೆ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಾಕ್ಸ್ ಆಫೀಸ್ ಲೆಕ್ಕಾಚಾರ ಈಗಾಗಲೇ ಜೋರಾಗಿಯೇ ನಡೆಯುತ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿಗೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ. ಅಲ್ಲದೇ ಕೂಲಿ ಚಿತ್ರಕ್ಕೆ ಬರೋಬ್ಬರಿ 350 ಕೋಟಿ ಬಜೆಟ್ ಹಾಕಲಾಗಿದೆ ಎಂದು ಈಗಾಗಲೇ ಅನೇಕ ವರದಿಗಳು ತಿಳಿಸಿದೆ. ಇದುವರೆಗಿನ ವರದಿಗಳ ಪ್ರಕಾರ, ಚಿತ್ರವು ಮೊದಲ ದಿನ ಉತ್ತಮ ಭರ್ಜರಿ ಗಳಿಕೆ ಮಾಡಿದೆ.
ಕೂಲಿ ಅಬ್ಬರಕ್ಕೆ ಬಾಕ್ಸ್‌ಆಫೀಸ್ ಶೇಕ್: ಸ್ಯಾಕ್ನಿಲ್ಕ್ ನ ವರದಿ ಪ್ರಕಾರ, ಕೂಲಿ ಸಿನಿಮಾ ಮೊದಲ ದಿನ ಕಲೆಕ್ಷನ್‌ನಲ್ಲಿ ಭರ್ಜರಿ ಗಳಿಕೆ ಮಾಡಿದೆ. 10 ಗಂಟೆಯ ಕೊನೆಯ ವರದಿ ಪ್ರಕಾರ, ಚಿತ್ರವು ಸುಮಾರು 61.02 ಕೋಟಿ ನಿವ್ವಳ ಗಳಿಕೆ ಮಾಡಿದೆ. ಈ ಚಿತ್ರವು ವಿಶ್ವಾದ್ಯಂತ 100 ಕೋಟಿ ರೂ.ಗಳನ್ನು ದಾಟುವ ನಿರೀಕ್ಷೆಯಿದೆ. ಆದರೆ, ರಜನಿಕಾಂತ್ ಅಭಿನಯದ ಕೂಲಿ ಚಿತ್ರ ಭಾರಿ ಪ್ರಚಾರದ ನಡುವೆ ಬಿಡುಗಡೆಯಾಗಿದ್ದು, ವಿಜಯ್ ಅವರ ಲಿಯೋ ಚಿತ್ರದ ಮೊದಲ ದಿನದ ಗಳಿಕೆಯ ದಾಖಲೆಯನ್ನು ಮೀರಿಸಲಾಗಲಿಲ್ಲ ಎನ್ನಲಾಗುತ್ತಿದೆ. ಲಿಯೋ ಬಿಡುಗಡೆಯಾದ ದಿನದಂದು ವಿಶ್ವಾದ್ಯಂತ 145 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು.
ರಜನಿ ಅಬ್ಬರಕ್ಕೆ ದಾಖಲೆಗಳು ಉಡೀಸ್: ಇದರ ನಡುವೆ ಕೂಲಿ ಸಿನಿಮಾ ಯುಕೆ ಅಲ್ಲಿ ಬರೋಬ್ಬರಿ 124 ಸಾವಿರ ಡಾಲರ್ ಕಲೆಕ್ಷನ್ ಮಾಡುವ ಮೂಲಕ ತಮಿಳು ಸಿನಿಮಾವೊಂದು ಯುಕೆ ಅಲ್ಲಿ ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದಿದೆ. ಇದು ಮಾತ್ರವಲ್ಲದೇ ನಾರ್ಥ್ ಅಮೇರಿಕಾದಲ್ಲಿ ಸಹ ಬರೋಬ್ಬರಿ 3,04 ಮಿಲಿಯನ್ ಡಾಲರ್ ಮಾಡುವ ಮೂಲಕ ಅತಿ ಹೆಚ್ಚು ನಾರ್ಥ ಅಮೇಲರಿಕದಲ್ಲಿ ಗಳಿಸಿದ ಮೊದಲ ತಮಿಳು ಸಿನಿಮಾ ಎಂಬ ದಾಖಲೆ ಬರೆದಿದೆ.
ಮೊದಲ ದಿನವೇ ಅಬ್ಬರಿಸಿದ ಕೂಲಿ: ಇನ್ನು, ರಜನಿಕಾಂತ್ ಅವರ ಕೂಲಿ ಚಿತ್ರವು ತಮಿಳಿನಲ್ಲಿ ಒಟ್ಟಾರೆ ಶೇ. 84.55ರಷ್ಟು ಪ್ರೇಕ್ಷಕರನ್ನು ಗಳಿಸಿದೆ. ಮೊದಲ ದಿನದ ಮೊದಲ ಪ್ರದರ್ಶನಕ್ಕೆ ಮತ್ತು ಮಧ್ಯಾಹ್ನದ ಪ್ರದರ್ಶನಕ್ಕೂ ಹೆಚ್ಚಿನ ಜನಸಂದಣಿ ಸೇರಿತ್ತು. ಭಾರತದಾದ್ಯಂತ ಸುಮಾರು 3,300 ತಮಿಳು ಪ್ರದರ್ಶನಗಳನ್ನು ನಿಗದಿಪಡಿಸಲಾಗಿತ್ತು. ಸುಮಾರು 1,200 ಪರದೆಗಳಲ್ಲಿ ಬಿಡುಗಡೆಯಾದ ಹಿಂದಿ ಆವೃತ್ತಿಯು ಒಟ್ಟಾರೆ ಶೇ. 29.16ರಷ್ಟು ಪ್ರೇಕ್ಷಕರನ್ನು ಒಳಗೊಂಡಿತ್ತು. ತೆಲುಗು ಆವೃತ್ತಿಯು 1,100 ಪ್ರದರ್ಶನಗಳಲ್ಲಿ ಶೇ. 91.09ರಷ್ಟು ಪ್ರೇಕ್ಷಕರನ್ನು ಆಕರ್ಷಿಸಿತು.
Leave feedback about this