ಬೆಂಗಳೂರು

ವಸತಿ ಇಲಾಖೆಯ ಹಗರಣ ಸುರ್ಜೇವಾಲ ಮುಂದೆ ಬಿಚ್ಚಿಟ್ಟ ಬಿ.ಆರ್.ಪಾಟೀಲ್

ಬೆಂಗಳೂರು:- ವಸತಿ ಇಲಾಖೆಯಲ್ಲಿ ಏನೆಲ್ಲಾ ಹಗರಣ ನಡೆದಿದೆ ಜೊತೆಗೆ ವಸತಿ ಹಂಚಿಕೆಯ ಸಂದರ್ಭದಲ್ಲಿ ಲಂಚದ ಬೇಡಿಕೆ ಯಾವ ರೀತಿಯಲ್ಲಿ ಇದೆ, ಹಿರಿಯ ಶಾಸಕನಾದರೂ ನನಗೆ ಯಾವ ರೀತಿಯಲ್ಲಿ ಅನ್ಯಾಯ ಆಗ್ತಿದೆ? ಹೀಗೆ ವಸತಿ ಇಲಾಖೆಯ ಮನೆ ಹಂಚಿಕೆಯ ಸಂದರ್ಭದಲ್ಲಿ ಅನುಭವಿಸಿದ ತೊಂದರೆಗಳನ್ನು ಎಳೆ ಎಳೆಯಾಗಿ ಬಿ ಆರ್ ಪಾಟೀಲ್ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮುಂದೆ ಬಿಚ್ಚಿಟ್ಟಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸೋಮವಾರವಾದ ಇಂದು ಶಾಸಕರ ಜೊತೆಗೆ ಸುರ್ಜೇವಾಲ ಅವರ ಒನ್ ಟು ಒನ್ ಮಾತುಕತೆ ನಡೆಸಿದರು. ಬಿ ಆರ್ ಪಾಟೀಲ್ ಜೊತೆಗೆ ಸುರ್ಜೇವಾಲ ಒನ್ ಟು ಒನ್ ಮಾತುಕತೆ ನಡೆಸಿದರು.

ಒಟ್ಟು 35 ನಿಮಿಷಗಳ ಕಾಲ ಮಾತುಕತೆ ನಡೆಯುವುದರೊಂದಿಗೆ ಬಿ ಆರ್ ಪಾಟೀಲ್ ಅವರು ವಸತಿ ಇಲಾಖೆ ಕುರಿತ ತಮ್ಮ ಮಾಹಿತಿಯನ್ನು ಸುರ್ಜೆವಾಲಾ ಮುಂದೆ ಬಿಚ್ಚಿಟ್ಟರು. ಕೆಲವೊಂದು ದಾಖಲೆಗಳನ್ನು ನೀಡಿ ತಮ್ಮ ಆರೋಪವನ್ನು ಸಮರ್ಥಿಸಿಕೊಂಡರು.

ಸುರ್ಜೇವಾಲ ಅವರು ಬಿ.ಆರ್ ಪಾಟೀಲ್ ಆರೋಪಗಳನ್ನು ಸೈಲೆಂಟಾಗಿ ಆಲಿಸಿ ದಾಖಲೆಗಳನ್ನು ನೋಟ್ ಮಾಡಿಕೊಂಡು ಬೇರೆ ಏನಾದರೂ ಸಮಸ್ಯೆಗಳು ಇದೆಯೇ ಎಂದು ಪ್ರಶ್ನಿಸಿ ಬಹಿರಂಗ ಚರ್ಚೆ ಬೇಡವೆಂದು ಸಲಹೆ ನೀಡಿದರು. ಬಿ.ಆರ್ ಪಾಟೀಲ್ ಆರೋಪಗಳನ್ನು ನೋಟ್ ಮಾಡಿಕೊಂಡ ಅವರು, ನಿಮ್ಮ ಎಲ್ಲಾ ಮಾತುಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ. ಸರ್ಕಾರದ ವರ್ಚಸ್ಸು ಹೆಚ್ಚಿಸಬೇಕು, ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸೋಣ. ಆದರೆ, ಬಹಿರಂಗವಾಗಿ ಚರ್ಚೆ ಮಾಡುವುದು ಬೇಡ ಎಂದು ಸಲಹೆ ಕೊಟ್ಟಿದ್ದಾರೆ.