ದಕ್ಷಿಣ ಕನ್ನಡ

ವಿಡಿಯೋವನ್ನು ತಡೆಯಲು ನಿರಾಕರಿಸಿ ತೀರ್ಪು ನೀಡಿದೆ: ಸಮೀರ್‌ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮಂಗಳೂರು:- ಜಿಲ್ಲೆಯ ಧರ್ಮಸ್ಥಳ ಸರಣಿ ಕೊಲೆ ಪ್ರಕರಣ ಈ ವರ್ಷ ಸಾಕಷ್ಟು ತಿರುವುಗಳನ್ನು ಪಡೆದುಕೊಂಡಿದೆ. ಸದ್ಯ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದ ಕಾರ್ಮಿಕನೊಬ್ಬ ತನ್ನ ಕೆಲಸದ ಅವಧಿಯಲ್ಲಿ ಒತ್ತಾಯಕ್ಕೆ ಮಣಿದು ಕೊಲೆಯಾದ ಹಾಗೂ ಅತ್ಯಾಚಾರಕ್ಕೊಳಗಾದ ಶವಗಳನ್ನು ಹೂತು ಪಾಪ ಪ್ರಜ್ಞೆಯಿಂದ ತಪ್ಪೊಪ್ಪಿಕೊಂಡಿದ್ದು, ಪ್ರಕರಣಕ್ಕೆ ಭಾರೀ ತಿರುವು ನೀಡಿದೆ.

ಅಲ್ಲದೇ 2003ರಲ್ಲಿ ಧರ್ಮಸ್ಥಳಕ್ಕೆ ಸಹಪಾಠಿಗಳ ಜತೆ ಪ್ರವಾಸಕ್ಕೆ ಬಂದು ಕಾಣೆಯಾಗಿದ್ದ ಅನನ್ಯ ಭಟ್‌ ತಾಯಿ ಸಹ ಮಗಳ ಕುರಿತು ಪ್ರಕರಣ ದಾಖಲಿಸಿದ್ದಾರೆ. ಇದೂ ಸಹ ಪ್ರಕರಣಕ್ಕೆ ಮತ್ತೊಂದು ದೊಡ್ಡ ತಿರುವಾಗಿದೆ.

ಈ ಕುರಿತು ಸಹ ಯುಟ್ಯೂಬರ್‌ ಸಮೀರ್‌ ವಿಡಿಯೊ ಮಾಡಿದ್ದು, ಪಾಪಪ್ರಜ್ಞೆಯಿಂದ ಮುಂದೆ ಬಂದಿರುವ ವ್ಯಕ್ತಿಯ ಕುರಿತು ದೊಡ್ಡ ವಿವರಣೆಯುಳ್ಳ ವಿಡಿಯೊವನ್ನೇ ರಚಿಸಿದ್ದಾರೆ. ಈ ವಿಡಿಯೋದಲ್ಲಿ ಹೆಣ ಹೂತ ವ್ಯಕ್ತಿ ಹೇಗೆ ಪಾಪದ ಚಕ್ರವ್ಯೂಹಕ್ಕೆ ಸಿಲುಕಿದ ಎಂಬುದನ್ನು ಸಮೀರ್‌ ಬಿಚ್ಚಿಟ್ಟಿದ್ದಾರೆ. ʼಧರ್ಮಸ್ಥಳ ಸೀರಿಯಲ್‌ ಕಿಲ್ಲರ್ಸ್‌ʼ ಎಂಬ ಹೆಸರಿನಡಿಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು.

ಈ ವಿಡಿಯೋವನ್ನು ತಡೆಯುವಂತೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್‌ ವಿಡಿಯೋವನ್ನು ತಡೆಯಲು ನಿರಾಕರಿಸಿ ತೀರ್ಪು ನೀಡಿದೆ ಎಂದು ಸ್ವತಃ ಸಮೀರ್‌ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ʼವೀರೇಂದ್ರ ಹೆಗಡೆ ಮಕ್ಕಳೊಬ್ಬರ ಮನವಿಗೆ ಪ್ರತಿಕ್ರಿಯೆಯಾಗಿ ಸಮೀರ್‌ ಎಂಡಿ ಅವರ ವಿಡಿಯೋ ತಡೆಯಲು ಕೋರ್ಟ್‌ ನಿರಾಕರಿಸಿದೆ ಎಂಬ ಪೋಸ್ಟ್‌ ಸಮೀರ್‌ ಹಂಚಿಕೊಂಡಿದ್ದಾರೆ.