ಅಹಮದಾಬಾದ್:- ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ AHMADABAD LONDON FLIGHT ನಲ್ಲಿ 242 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಘಟನೆಯಿಂದ ಸ್ಥಳೀಯ ಪ್ರದೇಶದ ಜನರಲ್ಲಿ ಭಯ ಮೂಡಿದೆ. ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದ 242 ಜನರಲ್ಲಿ ಇದೀಗ ಇಬ್ಬರು ಪ್ರಯಾಣಿಕರು ಬದುಕುಳಿದಿದ್ದಾರೆ. ಇನ್ನೂ ನಿಖರವಾದ ಮಾಹಿತಿ ಲಭ್ಯವಿಲ್ಲ, ಸದ್ಯ ಗಯಾಳುಗಳನ್ನು ಅಹಮದಾಬಾದ್ ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
169 ಭಾರತೀಯರು, 53 ಬ್ರಿಟಿಷರು ಮತ್ತು 7 ಪೋರ್ಚುಗೀಸರು, 11 ಮಕ್ಕಳು ಈ ವಿಮಾನದಲ್ಲಿ ಇದ್ದರು ಎಂದು ಹೇಳಲಾಗಿದೆ. ಮೇಘಾನಿ ನಗರದ ವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಅಹಮದಾಬಾದ್ ನಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಈ ಏರ್ ಇಂಡಿಯಾ ವಿಮಾನವು (AIR INDIA PLANE CRASHA) ಮಧ್ಯಾಹ್ನ 1:38 ಕ್ಕೆ ಟೇಕ್ ಆಫ್ ಆಯಿತು. ಮೇಘನಿ ನಗರ ಪ್ರದೇಶದಲ್ಲಿ ಮೇಲೆ ಸರಿಯಾಗಿ ಅಪಘಾತಕ್ಕೀಡಾಯಿತು. ರನ್ ವೇ ನಿಂದ ಟೇಕ್ ಆಫ್ ಆದ 10 ನಿಮಿಷಗಳಲ್ಲಿ ಈ ಘಟನೆ ನಡೆದಿದೆ.
ದುರಂತದ ಮುನ್ಸೂಚನೆ ಅರಿತ ವಿಮಾನದ ಪೈಲಟ್ ATC ಗೆ ಸಂದೇಶ MAYDAY MAYDAY ಸಂದೇಶವನ್ನು ಕಳುಹಿಸಿದ್ದರು. MAYDAY ಎಂಬುವುದರ ಅರ್ಥ ನಾವು ಅಪಘಾತಕ್ಕೀಡಾಗುತ್ತಿದ್ದೇವೆ, ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದರೂ ಸಾಧ್ಯವಾಗುತ್ತಿಲ್ಲ, ನಮಗೆ ಬೇರೆ ದಾರಿ ಉಳಿದಿಲ್ಲ ಎಂದು ಪೈಲಟ್ ATC ಗೆ ತಿಳಿಸಿದ್ದರು.
ವಿಮಾನದ ಫಸ್ಟ್ ಆಫೀಸರ್ ಆಗಿದ್ದ ಕ್ಲೈವ್ ಕುಂದರ್ ಮಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ಪ್ರಸಕ್ತ ಮುಂಬೈ ನಿವಾಸಿಯಾಗಿರುವ ಕ್ಲೈವ್ ಕುಂದರ್ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದಲ್ಲಿ ಫಸ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ವಿಮಾನ ಬಿಜೆ ಆಸ್ಪತ್ರೆ ಹಾಸ್ಟೆಲ್ ನ ಮೆಸ್ ಗೆ ಅಪ್ಪಳಿಸಿಸುತ್ತಿದ್ದಂತೆ ಅಲ್ಲಿದ್ದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ವಿಮಾನ ಅಪ್ಪಳಿಸುತ್ತಿದ್ದಂತೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಹಾಸ್ಟೇಲ್ ನಲ್ಲಿದ್ದ 20ಕ್ಕೂ ಅಧಿಕ ವಿದ್ಯಾರ್ಥಿಗಳು ದುರ್ಮರಣ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.