Uncategorized

ವಿರಾಟ್‌ ಕೊಹ್ಲಿಯಿಂದ ಮತ್ತೊಂದು ದಾಖಲೆ

ಮುಂಬೈ:- ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಅವರು ಈಗಾಗಲೇ ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್‌ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್‌ ಗೆಲುವಿನ ಬಳಿಕ ಚುಟುಕು ಮಾದರಿಯಿಂದ ದೂರವಾಗಿದ್ದ ವಿರಾಟ್‌, ಈ ಬಾರಿಯ ಮೇನಲ್ಲಿ ನಡೆಯುವ ಟೆಸ್ಟ್‌ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದರು.

ಸದ್ಯ ಭಾರತದ ಏಕದಿನ ತಂಡದಲ್ಲಿ ಮಾತ್ರ ಉಳಿದುಕೊಂಡಿದ್ದಾರೆ, ಬಹುತೇಕ ಮುಂದಿನ ಅಕ್ಟೋಬರ್‌ ನಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆಯಲಿರುವ ಏಕದಿನ ಸರಣಿಯಲ್ಲಿ ಅವರು ಭಾರತದ ಪರ ಆಡಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಕಳೆದ ನಾಲ್ಕು ತಿಂಗಳಿನಿಂದ ದೂರವಾಗಿರುವ ವಿರಾಟ್‌ ಇದರ ನಡುವೆ ಮತ್ತೊಂದು ದಾಖಲೆ ಬರೆದಿದ್ದಾರೆ. ಐಸಿಸಿ RANKನಲ್ಲಿ ವಿರಾಟ್ ಕೊಹ್ಲಿ ಅವರ ಹಿಂದಿನ ಅತ್ಯಧಿಕ ಟಿ20ಐ ರೇಟಿಂಗ್ ಪಾಯಿಂಟ್‌ಗಳು 897 ಆಗಿತ್ತು. ಆದರೆ, ಜುಲೈ 16 ರಂದು ಅದನ್ನು ತಿದ್ದುಪಡಿ ಮಾಡಿದ್ದು, 909 ಅಂಕಕ್ಕೆ ಹೆಚ್ಚಿಸಲಾಗಿದೆ.

ಟೆಸ್ಟ್‌ನಲ್ಲಿ ಅವರ ಅತ್ಯಧಿಕ ರೇಟಿಂಗ್ ಪಾಯಿಂಟ್‌ಗಳು 937 ಮತ್ತು ಏಕದಿನ ಪಂದ್ಯಗಳಲ್ಲಿ ಇದು 911 ಆಗಿದೆ. ಹೀಗಾಗಿ ಈಗ ವಿರಾಟ್ ಕ್ರಿಕೆಟ್ ಇತಿಹಾಸದಲ್ಲಿ ಆಟದ ಮೂರು ಸ್ವರೂಪಗಳ ಐಸಿಸಿ ಶ್ರೇಯಾಂಕದಲ್ಲಿ 900 ರೇಟಿಂಗ್ ಪಾಯಿಂಟ್‌ಗಳನ್ನು ದಾಟಿದ ಮೊದಲ ಆಟಗಾರನಾಗಿದ್ದಾರೆ.

ಕೊಹ್ಲಿ ಶ್ರೇಯಾಂಕದಲ್ಲಿ ತಿದ್ದುಪಡಿ ತಂದ ನಂತರ, ಸೂರ್ಯಕುಮಾರ್ ಯಾದವ್ ನಂತರ ಐಸಿಸಿ ಟಿ20ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ 900 ರೇಟಿಂಗ್ ಅಂಕಗಳನ್ನು ದಾಟಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಐಸಿಸಿ ಟಿ20ಐ ಬ್ಯಾಟಿಂಗ್ ಶ್ರೇಯಾಂಕ ಇತಿಹಾಸದಲ್ಲಿ ಅತ್ಯಧಿಕ ಶ್ರೇಯಾಂಕ ಹೊಂದಿರುವ ಆಟಗಾರರ ಪಟ್ಟಿ:

919 – ಡೇವಿಡ್ ಮಲಾನ್

912 – ಸೂರ್ಯಕುಮಾರ್ ಯಾದವ್

909 – ವಿರಾಟ್ ಕೊಹ್ಲಿ

904 – ಆರೋನ್ ಫಿಂಚ್

900 – ಬಾಬರ್ ಅಜಮ್

894 – ಡೇವಿಡ್ ವಾರ್ನರ್.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video