ದಕ್ಷಿಣ ಕನ್ನಡ

ಶಾಸಕ‌ ಅಶೋಕ್ ರೈ ವಿರುದ್ಧ ಕಾಂಗ್ರೆಸ್‌ನ ಹಕೀಂ ಕೂರ್ನಡ್ಕ ಮತ್ತೆ ವಾಗ್ದಾಳಿ

ಮಂಗಳೂರು:- ದ.ಕ ಜಿಲ್ಲೆಯ ಪುತ್ತೂರಿನ ಯುವತಿಗೆ ಮಗು ಕರುಣಿಸಿ ಬಿಜೆಪಿ ಮುಖಂಡನ ಮಗ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಶಾಸಕ‌ ಅಶೋಕ್ ರೈ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅತ್ಯಾಚಾರ ಪ್ರಕರಣವನ್ನ ರಾಜಿ ಪಂಚಾಯತಿಯಲ್ಲಿ ಮುಗಿಸುವುದಾದ್ರೆ ಮತ್ತೆ ಕೋರ್ಟ್, ಪೊಲೀಸ್ ಠಾಣೆ ಯಾಕೆ. ಪೊಲೀಸ್ ಠಾಣೆಗೆ ಸಂತ್ರಸ್ತೆ ಕೇಸ್ ಕೊಡಲು ಬಂದಾಗ ಸಂತ್ರಸ್ತೆಯ ಹೇಳಿಕೆಯನ್ನ ಗಮನಿಸಿ ಪೊಲೀಸರು ತನಿಖೆ ಮಾಡಬೇಕಿತ್ತು. ಹಾಗಿರುವಾಗ ಅದಕ್ಕೆ ಶಾಸಕರು ಆಗಲಿ ಬೇರೆ ನಾಯಕರಾಗಲಿ ಹಸ್ತಕ್ಷೇಪ ಮಾಡೋದು ಸರಿಯಲ್ಲ ಎಂದರು.

ಸುಳ್ಯದ ಹಿಟ್ & ರನ್ ಕೇಸ್ ನಲ್ಲಿ ಆರೋಪಿ ಸಿಕ್ಕಿಲ್ಲ ಎಂದಾಗ ತಂದೆಯನ್ನ ಎಳೆದು ತನ್ನಿ ಎಂದು ಅಶೋಕ್ ರೈ ಪೊಲೀಸರಿಗೆ ಒತ್ತಡ ಹಾಕ್ತಾರೆ. ಹಾಗಾದ್ರೆ ಈ ಅತ್ಯಾಚಾರ ಪ್ರಕರಣದಲ್ಲಿ ಅಶೋಕ್ ರೈ ಯಾಕೆ ಪೊಲೀಸರಿಗೆ ಒತ್ತಡ ಹಾಕ್ತಿಲ್ಲ. ಅತ್ಯಾಚಾರಿ ಆರೋಪಿ ತಪ್ಪಿಸಲು ಶಾಸಕ ಅಶೋಕ್ ರೈ ಕಾರಣ ಅಲ್ವಾ ಎಂದ ಅವರು ಅಶೋಕ್ ರೈ ಆರೋಪಿ ತಂದೆಯ ಮಾತನ್ನ ಕೇಳಿ ಸಂತ್ರಸ್ತೆಗೆ ಭರವಸೆ ಕೊಟ್ಟಿದ್ದೇಕೆ, ಭರವಸೆ ಕೊಟ್ಟ ಮೇಲೆ ಮದುವೆ ಮಾಡಿಸಿ ಕೊಡಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ ಮಗುವಿನ ಕುಟುಂಬ ಹಾಗೂ ಆರೋಪಿಯ ಕುಟುಂಬ ಎಲ್ಲರೂ ಇದ್ದಾರೆ. ಕೂಡಲೇ ಮಗುವನ್ನು ಆರೋಪಿ ತಂದೆಯ ಮನೆಗೆ ಒಪ್ಪಿಸುವ ಕೆಲಸ ಮಾಡಲಿ, ಇದರ ಜವಾಬ್ದಾರಿ ಶಾಸಕ ಅಶೋಕ್ ಕುಮಾರ್ ರೈ ಹೊರಬೇಕು. ಆರೋಪಿ ಕೃಷ್ಣ ಜೆ ರಾವ್ ತಪ್ಪಿಸಲು ಶಾಸಕರು ಕಾರಣ, ಅವತ್ತೇ ಆರೋಪಿಯನ್ನು ಬಂಧಿಸಲು ಸೂಚಿಸಿದ್ದಿದ್ದರೆ ಇವತ್ತು ಇಂತಹ ಪರಿಸ್ಥಿತಿ ಇರಲಿಲ್ಲ, ಆರೋಪಿ ಎಲ್ಲಿಯೂ ತಪ್ಪಿಸಿಕೊಂಡು ಓಡಿ ಹೋಗಿಲ್ಲ. ಪುತ್ತೂರಿನ ಕಾಂಗ್ರೆಸ್ ನಾಯಕರ ಮನೆಯನ್ನ ಸರ್ಚ್ ಮಾಡಿದ್ರೆ ಆರೋಪಿ ಸಿಗ್ತಾನೆ ಎಂದರು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಬ್ಲಾಕ್ ಕಾಂಗ್ರೆಸ್ ಯಾಕೆ ಮಾತಾಡ್ತಿಲ್ಲ. ಮಹಿಳಾ ಕಾಂಗ್ರೆಸ್ ಎಲ್ಲಿದೆ, ಎನ್ ಎಸ್ ಯುಐ ಎಲ್ಲಿದೆ? ಮಂಗಳೂರಿನಿಂದ ಪ್ರತಿಭಾ ಕುಳಾಯಿ ಬಂದು ಪುತ್ತೂರಿನಲ್ಲಿ ಮಾತಾಡ್ತಾರೆ. ಹಾಗಾದರೆ ಪುತ್ತೂರಿನ ಕಾಂಗ್ರೆಸ್ ಎಲ್ಲಿದೆ. ಬಿಜೆಪಿಯ ನಗರಸಭೆ ಸದಸ್ಯನ ವಿಚಾರದಲ್ಲಿ ಬಿಜೆಪಿಯವರೇ ಮಾತಾಡ್ತಾ ಇಲ್ಲ. ಹಾಗಾದ್ರೆ ಬಿಜೆಪಿ ಸದಸ್ಯನ ವಿಚಾರದಲ್ಲಿ ಕಾಂಗ್ರೆಸ್ ಶಾಸಕನ ಕೆಲಸ ಏನು. ಇಂದು ಶಾಸಕರು ಪೊಲೀಸ್ ಇಲಾಖೆಗೆ, ಸಂತ್ರಸ್ತೆ ಕುಟುಂಬಕ್ಕೆ ಒತ್ತಡ ಹಾಕಿಲ್ಲಂದ್ರೆ ಇವತ್ತು ಆ ಸಂತ್ರಸ್ತೆಗೆ ಮದುವೆ ಆಗಿ ಗಂಡನ ಜೊತೆ ಒಟ್ಟಾಗಿ ಇರುತ್ತಿದ್ದರು. ಈಗ ಮಗುವಿಗೆ ತಂದೆ ಇಲ್ಲದೆ ಇರಲು ಕಾರಣ ಶಾಸಕ ಅಶೋಕ್ ರೈ ಎಂದು ನೇರವಾಗಿ ಆರೋಪ ಹೇಳಿದ್ದಾರೆ.

ಶಾಸಕರ ಮೇಲೆ ವೈಯಕ್ತಿಕವಾಗಿ ನನಗೆ ಕೋಪ‌ ಇಲ್ಲ, ಕೆಲವು ವಿಚಾರವನ್ನ ಕೈ ಹಾಕುವಾಗ ಶಾಸಕರು ಆಲೋಚಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಯಾರಾದ್ರೂ ಸಲಹೆಗಾರರನ್ನು ಇಟ್ಟುಕೊಳ್ಳಬೇಕು. ಅದು ಬಿಟ್ಟು ಬೇಡದ ವಿಚಾರಕ್ಕೆ ಶಾಸಕರು ಕೈ ಹಾಕಿದ್ದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೊಂದರೆ ಆಗುತ್ತೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಹೋಗುವುದು ಎಂದು ಅಶೋಕ್ ರೈ ತಿಳಿದು ಕೊಂಡಿದ್ದಾರೆ. ಇದು ಅದರ ಮೊದಲ ಹೆಜ್ಜೆ, ಅಶೋಕ್ ರೈ ಕಾಂಗ್ರೆಸ್ ಪರವಾಗಿಲ್ಲ ಎಂದು ಹಿಂದೆಯೊಮ್ಮೆ‌ ಹೇಳಿದ್ದೆ. ಅಶೋಕ್ ರೈ ಪಕ್ಷ ಕಟ್ಟಿಲ್ಲ, ಅವರು ಬಂದು ಎರಡು ವರ್ಷ ಆಗಿರುವುದು ಅಷ್ಟೇ ಎಂದಿದ್ದಾರೆ.