ರಾಯಚೂರು

ಶಿಕ್ಷಕ ಕಂಠಪೂರ್ತಿ ಕುಡಿದು ತೂರಾಡಿದ ವಿಡಿಯೋ ವೈರಲ್

ರಾಯಚೂರು:- ಜಿಲ್ಲೆ ಮಸ್ಕಿ ತಾಲೂಕಿನ ಗೋನಾಳ ಗ್ರಾಮದ ಅಂಬಾದೇವಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಮುಖ್ಯ ಶಿಕ್ಷಕನಾದ ನಿಂಗಪ್ಪ ಕಂಠಪೂರ್ತಿ ಮದ್ಯಪಾನ ಮಾಡಿ, ನೇರವಾಗಿ ಶಾಲೆಗೆ ಬಂದು ಮಲಗಿದ್ದಾನೆ. ಕುಡಿದ ಅಮಲಿನಲ್ಲಿ ಶಾಲೆ ಮುಂಭಾಗ ಬಿದ್ದು ತೂರಾಡಿರುವ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಶಾಲಾ ಆವರಣದಲ್ಲಿ ಮಲಗಿದ್ದ ನಿಂಗಪ್ಪ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಪಾಠ ಮಾಡದೆ ಕಂಠ ಪೂರ್ತಿ ಕುಡಿದು ಮಲಗುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇಂತಹ ಬೇಜವಾಬ್ದಾರಿ ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಮುಖ್ಯ ಶಿಕ್ಷಕನ ಅಮಲಿನ ವಿಡಿಯೋ ಗ್ರಾಮಸ್ಥರ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್‌ ಮಾಡಲಾಗಿದೆ.

ಜ್ಞಾನ ದೇಗುಲದಲ್ಲೇ ಗುರು ಸ್ಥಾನದಲ್ಲಿರುವ ಶಿಕ್ಷಕನ ಈ ವರ್ತನೆಯನ್ನು ಖಂಡಿಸಲಾಗುತ್ತಿದೆ. ರಾಯಚೂರಿನ ಮಸ್ಕಿ ತಾಲೂಕಿನಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಮುಖ್ಯಶಿಕ್ಷಕ ನಿಂಗಪ್ಪ ಶಾಲಾ ಅವಧಿಯಲ್ಲೇ ಈ ರೀತಿ ಕುಡಿದು ಮಕ್ಕಳ ಮುಂದೆಯೇ ತೂರಾಡಿದ್ದಲ್ಲದೆ ಅಡುಗೆ ಮನೆಯ ಬಾಗಿಲ ಬಳಿ ಅಡ್ಡಲಾಗಿ ಮೈಮರೆತು ಅಮಲಿನಲ್ಲಿರುವ ವಿಡಿಯೋಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video